ETV Bharat / state

ಸಿಎಂ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್​ ಹೆಸರೇ ನಾಪತ್ತೆ! - ಜಿಲ್ಲಾ ಉಸ್ತುವಾರಿ ಸಚಿವ ಹೆಚ್​. ನಾಗೇಶ್

ಸಿಎಂ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್​. ನಾಗೇಶ್ ಅವರ ಹೆಸರಿಲ್ಲದೇ ಆಹ್ವಾನಿಸಲು ಬಂದ ಆಯೋಜಕರ ವಿರುದ್ಧ ಸಚಿವರು ಗರಂ ಆಗಿದ್ದಾರೆ. ನಾನು ಸಚಿವ, ಮೊದಲನೇ ದಿನನೇ ಹೀಗೆ ನನಗೆ ಅವಮಾನ ಮಾಡಿದ್ರೆ ನಾನು ಇಲ್ಲಿ ಯಾವ ರೀತಿ ಓಡಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್​. ನಾಗೇಶ್
author img

By

Published : Sep 20, 2019, 5:21 PM IST

ಕೋಲಾರ: ಸಿಎಂ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್​. ನಾಗೇಶ್ ಅವರ ಹೆಸರಿಲ್ಲದ ಕಾರಣ ಆಯೋಜಕರ ವಿರುದ್ಧ ಸಚಿವರು ಗರಂ ಆಗಿದ್ದಾರೆ.

ಸೆ. 22 ರಂದು ಕೋಲಾರದಲ್ಲಿ ವಿಶ್ವಕರ್ಮ ಸಮುದಾಯದ ವತಿಯಿಂದ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಆಗಮಿಸುತ್ತಿದ್ದು, ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿಲ್ಲದೆ, ಆಹ್ವಾನಿಸಲು ಬಂದ ಆಯೋಜಕರಿಗೆ, ನಾನು ಸಚಿವ, ಮೊದಲನೇ ದಿನನೇ ಹೀಗೆ ನನಗೆ ಅವಮಾನ ಮಾಡಿದ್ರೆ ನಾನು ಇಲ್ಲಿ ಯಾವ ರೀತಿ ಓಡಾಡಬೇಕು, ಕೆಲಸ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್​. ನಾಗೇಶ್

ಇದೇ ವೇಳೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಯಡಿಯೂರಪ್ಪ ಜಿಲ್ಲೆಗೆ ಬರುವ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ ಎಂದ ಮೇಲೆ ಜಿಲ್ಲೆಗೆ ಸಂಬಂಧಿಸಿದಂತೆ ಯಾವ ಬೇಡಿಕೆ ಇಡಲು ಸಾಧ್ಯ. ನೀವೇ ಹೇಳಿ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು, ಅಬಕಾರಿ ಇಲಾಖೆಯ ಹೊಸ ಯೋಜನೆಗಳಿಗೆ ಚಿಂತನೆ ನಡೆಯುತ್ತಿದೆ ಹಾಗೂ ನೆರೆ ಪರಿಹಾರಕ್ಕಾಗಿ ಸಿಎಂ ಅವರು ಎಲ್ಲೆಡೆ ಮಿಂಚಿನ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಇದೇ ಸಚಿವರು ತಿಳಿಸಿದರು.

Intro:ಕೋಲಾರ
ದಿನಾಂಕ - 20-09-19
ಸ್ಲಗ್ - ಮಿನಿಸ್ಟರ್ ನಾಗೇಶ್
ಫಾರ್ಮೆಟ್ - ಎವಿಬಿಬಿ

ಆಂಕರ್ : ಸಿಎಂ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಅವರ ಹೆಸರಿಲ್ಲದ ಕಾರಣ ಆಯೋಜಕರ ಮೇಲೆ ಸಚಿವರು ಹರಿಹಾಯ್ದ ಪ್ರಸಂಗ ಕೋಲಾರದಲ್ಲಿ ಜರುಗಿದೆ. ಸೆಪ್ಟೆಂಬರ್ 22 ರಂದು ಕೋಲಾರದಲ್ಲಿ ವಿಶ್ವಕರ್ಮ ಸಮುದಾಯದ ವತಿಯಿಂದ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಅವರು ಕೋಲಾರಕ್ಕೆ ಆಗಮಿಸುತ್ತಿದ್ದು, ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿಲ್ಲದೆ, ಆಹ್ವಾನಿಸಲು ಬಂದ ಆಯೋಜಕರಿಗೆ, ನೀವುಗಳು ನಾನ್ಸ್‍ಸೆನ್ಸ್‍ಗಳು ನಿಮ್ಮ ಕಾರ್ಯಕ್ರಮಕ್ಕೆ ನಾನು ಬರುವುದಿಲ್ಲ ಎಂದು ಆಯೋಜಕ ವಿರುದ್ದ ಸ್ಥಳದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಇದೇ ವೇಳೆ ಸುದ್ದಿಗಾರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಯಡಿಯೂರಪ್ಪ ಜಿಲ್ಲೆಗೆ ಬರುವ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ, ಹೀಗಾಗಿ ಜಿಲ್ಲೆಗೆ ಸಂಭಂಧಿಸಿದಂತೆ ಯಾವ ಬೇಡಿಕೆ ಇಡಲು ಸಾದ್ಯ ಎಂದರು. ಇನ್ನು ಜಿಲ್ಲೆಯ ಅಭಿವೃದ್ದಿ ಬಗ್ಗೆ ಸ್ಟಡೀ ಮಾಡುತ್ತಿದ್ದೇನೆ, ಸಿಎಂ ಬರುವ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದ ಕಾರಣ, ಸಿಎಂ ಬಳಿ ಈಗಲೇ ಮಾತನಾಡುವುದು ನ್ಯಾಯವಲ್ಲ ಎಂದು ತಿಳಿಸಿದ್ರು. ಇನ್ನು ಅಬಕಾರಿ ಆದಾಯವನ್ನ ಹೆಚ್ಚಿಸಿಕೊಳ್ಳಲು ಇಲಾಖೆಯಿಂದ ತಯಾರಿ ನಡೆಯುತ್ತಿದೆ, ಈಗಾಗಲೇ ಅಧಿಕಾರಿಗಳ ಜೊತೆ ಮಾತುಕತೆ ಮಾಡಿ ಇಲಾಖೆಯ ಹೊಸ ಯೋಜನೆಗಳಿಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದ್ರು. ಇನ್ನು ರಾಜ್ಯದಲ್ಲಿ 11 ಜಿಲ್ಲೆಗಳಲ್ಲಿ ನೆರೆ ಇದೆ, ಹೀಗಾಗಿ ನೆರೆ ಪರಿಹಾರಕ್ಕಾಗಿ ಸಿಎಂ ಅವರು ಎಲ್ಲೆಡೆ ಮಿಂಚಿನ ಕಾರ್ಯಾಚರಣೆ ಮಾಡುತ್ತಿದ್ದಾರೆಂದರು.

ಬೈಟ್ 1: ಎಚ್.ನಾಗೇಶ್ (ಜಿಲ್ಲಾ ಉಸ್ತುವಾರಿ ಸಚಿವ)

ಬೈಟ್ 2: ಎಚ್.ನಾಗೇಶ್ (ಜಿಲ್ಲಾ ಉಸ್ತುವಾರಿ ಸಚಿವ)
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.