ETV Bharat / state

ಜಾಲಪ್ಪ ಕುಟುಂಬದ ಆಸ್ತಿ ಜಾಲಾಡಿದ ಐಟಿ ಅಧಿಕಾರಿಗಳು, ಪರಂಗೆ ಸೇರಿದ ಕಾಲೇಜುಗಳಲ್ಲಿ ಮುಂದುವರಿದ ಶೋಧ - ಮಾಜಿ ಡಿಸಿಎಂ ಪರಮೇಶ್ವರ್

ಮಾಜಿ ಕೇಂದ್ರ ಸಚಿವ, ಕಾಂಗ್ರೇಸ್‌ನ ಹಿರಿಯ ಮುಖಂಡ ಆರ್.ಎಲ್.ಜಾಲಪ್ಪ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್​ ಮನೆಯಲ್ಲಿ ಇಂದು ಬೆಳೆಗ್ಗೆಯಿಂದಲೂ ಕೂಡ ಅಧಿಕಾರಿಗಳು ಶೋಧ ಕಾರ್ಯಮುಂದವರೆಸಿದ್ದಾರೆ.

ಐಟಿ ದಾಳಿ
author img

By

Published : Oct 11, 2019, 9:33 AM IST

ತುಮಕೂರು / ಕೋಲಾರ: ಕಾಂಗ್ರೇಸ್ ನಾಯಕರ ಮನೆ, ಕಚೇರಿ, ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ನಡೆಸಿರುವ ದಾಳಿ ಇಂದು ಮುಂದುವರೆದಿದೆ.

ಪರಮೇಶ್ವರ್ ಜಾಲಪ್ಪ ಮನೆಯಲ್ಲಿ ಮುಂದುವರಿದ ಐಟಿ ಅಧಿಕಾರಿಗಳ ಶೋಧ

ನಿನ್ನೆ ಬೆಳಗ್ಗೆಯಿಂದಲೇ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಒಡೆತನದ ತುಮಕೂರಿನಲ್ಲಿರೋ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜ್ ಮತ್ತು ಮೆಡಿಕಲ್ ಕಾಲೇಜು ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳ ತಂಡ ಇಂದೂ ಕೂಡ ಶೋಧ ಕಾರ್ಯ ಮುಂದುವರೆಸಿದೆ.

ತಡರಾತ್ರಿ 11ರವರೆಗೂ ದಾಖಲೆಗಳ ಪರಿಶೀಲನೆ ನಡೆಸಿದ್ದ ಐಟಿ ಅಧಿಕಾರಿಗಳು ರಾತ್ರಿ ಸಿದ್ದಾರ್ಥ್ ಎಂಜಿನಿಯರಿಂಗ್ ಕಾಲೇಜ್ ಗೆಸ್ಟ್ ಹೌಸ್ ನಲ್ಲೇ ಉಳಿದುಕೊಂಡಿತ್ತು. ಇಂದು ಬೆಳ್ಳಂಬೆಳಗ್ಗೆ ದಾಖಲೆಗಳ ಪರಿಶೀಲನೆಯಲ್ಲಿ ಐಟಿ ಅಧಿಕಾರಿಗಳು ಮಗ್ನರಾಗಿದ್ದಾರೆ. ಮೂರು ತಂಡಗಳಲ್ಲಿ ಐಟಿ ಅಧಿಕಾರಿಗಳು ಆಗಮಿಸಿದ್ದರು.

ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್.ಎಲ್.ಜಾಲಪ್ಪ ಸೇರಿದಂತೆ ಅವರ ಮಗ ಹಾಗೂ ಅಳಿಯ ಒಡೆತನದ ಆಸ್ಪತ್ರೆ ಹಾಗೂ‌ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದು. ಕೋಲಾರ ಹೊರವಲಯದ ಟಮಕ ಬಳಿ ಇರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಕಚೇರಿ, ವಸತಿ ಗೃಹ ಹಾಗೂ ದೇವರಾಜ್ ಅರಸು ವೈದ್ಯಕೀಯ ಸಂಶೋಧನ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿದೆ.

ನಿನ್ನೆ ಬೆಳಗ್ಗೆ 7 ಗಂಟೆಯಿಂದಲೆ ಕಚೇರಿ ಹಾಗೂ ವಸತಿ ಗೃಹದಲ್ಲಿ ಪ್ರಮುಖ ಕಡತಗಳ ಪರಿಶೀಲನೆ ನಡೆಸುತ್ತಿರುವ 10 ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಮಾಜಿ ಕೇಂದ್ರ ಸಚಿವ ಜಾಲಪ್ಪ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಒಂದು ಅಧಿಕಾರಿಗಳ ತಂಡ ಒಂದಷ್ಟು ದಾಖಲಾತಿ ಹಾಗೂ ಹಾರ್ಡ್ ಡಿಸ್ಕ್ ನೊಂದಿಗೆ ಬೆಂಗಳೂರಿಗೆ ತೆರಳಿದ್ರೆ, ಮತ್ತೊಂದು ಅಧಿಕಾರಿಗಳ ತಂಡ ಮೆಡಿಕಲ್ ಕಾಲೇಜಿನಲ್ಲಿ ಪರಿಶೀಲನೆ ಮುಂದುವರೆಸಿದ್ದಾರೆ.

Intro:Body:ತುಮಕೂರಿನಲ್ಲಿ ಮುಂದುವರಿದ ಐಟಿ ಅಧಿಕಾರಿಗಳ ಶೋಧ ಕಾರ್ಯ...

ತುಮಕೂರು
ನಿನ್ನೆ ಬೆಳಿಗ್ಗೆಯಿಂದಲೇ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಒಡೆತನದ ತುಮಕೂರಿನಲ್ಲಿರೋ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜ್ ಮತ್ತು ಮೆಡಿಕಲ್ ಕಾಲೇಜು ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ಶೋಧ ಕಾರ್ಯ ಮುಂದುವರೆಸಿದೆ. ತಡರಾತ್ರಿ 11ರವರೆಗೂ ದಾಖಲೆಗಳ ಪರಿಶೀಲನೆ ನಡೆಸಿದ್ದ ಐಟಿ ಅಧಿಕಾರಿಗಳು ರಾತ್ರಿ ಸಿದ್ದಾರ್ಥ್ ಎಂಜಿನಿಯರಿಂಗ್ ಕಾಲೇಜ್ ಗೆಸ್ಟ್ ಹೌಸ್ ನಲ್ಲೇ ಉಳಿದುಕೊಂಡಿತ್ತು. ಇಂದು
ಬೆಳ್ಳಂಬೆಳಗ್ಗೆ ದಾಖಲೆಗಳ ಪರಿಶೀಲನೆಯಲ್ಲಿ ಐಟಿ ಅಧಿಕಾರಿಗಳು ಮಗ್ನರಾಗಿದ್ದಾರೆ.
ಮೂರು ತಂಡಗಳಲ್ಲಿ ಐಟಿ ಅಧಿಕಾರಿಗಳು ಆಗಮಿಸಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.