ETV Bharat / state

ಚಿಲ್ಲರೆಗಳಿಗೆ ಉತ್ತರ ಕೊಡುವ ಆಗತ್ಯವಿಲ್ಲ: ಕೋಡಿಹಳ್ಳಿ ವಿರುದ್ಧ ಹೆಚ್​ಡಿಕೆ ವಾಗ್ದಾಳಿ - ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ

ಕೋಡಿಹಳ್ಳಿ ವಿರುದ್ಧ ಹೆಚ್​ಡಿಕೆ ವಾಗ್ದಾಳಿ
ಕೋಡಿಹಳ್ಳಿ ವಿರುದ್ಧ ಹೆಚ್​ಡಿಕೆ ವಾಗ್ದಾಳಿ
author img

By

Published : Dec 9, 2020, 1:24 PM IST

Updated : Dec 9, 2020, 3:38 PM IST

13:18 December 09

ನನ್ನ ಬಗ್ಗೆ ರೈತ ಮುಖಂಡರು ಎಚ್ಚರಿಕೆಯಿಂದ ಮಾತನಾಡಲಿ, ಕೋಡಿಹಳ್ಳಿ ಚಂದ್ರಶೇಖರ್ ಹಿನ್ನೆಲೆ ಏನು?‌, ಅವರ ಹೋರಾಟ ಹೇಗೆ?, ಅವರು ಬಂದ ದಾರಿಯ ಕುರಿತು ನನಗೆ ಸಂಪೂರ್ಣ ಗೊತ್ತಿದೆ. ನಿಮ್ಮ ಹುಳುಕನ್ನು ಮೊದಲು ಮುಚ್ಚಿಕೊಳ್ಳಿ ಹೆಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕೋಡಿಹಳ್ಳಿ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಕೋಲಾರ: ರೈತ ಮುಖಂಡರು ಎಚ್ಚರಿಕೆಯಿಂದ ಮಾತನಾಡಬೇಕು, ಚಿಲ್ಲರೆಗಳಿಗೆ ನಾನು ಉತ್ತರ ಕೊಡುವ ಆಗತ್ಯವಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯೊಂದಿಗೆ ಡೀಲ್ ಮಾಸ್ಟರ್ ಆಗಿ ಜೀವನ ಮಾಡುವಂತಹ ಹೀನಾಯ ಪರಿಸ್ಥಿತಿ ನನಗಿಲ್ಲ. ರೈತ ಸಂಘದ ಮುಖಂಡರು ನನ್ನ ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆಯಿಂದ ಮಾತನಾಡಲಿ. ನನ್ನ ರಾಜಕೀಯ ಜೀವನದಲ್ಲಿ ನಾನು ಜನತೆಯ ಸ್ವಾಭಿಮಾನಕ್ಕೆ ಧಕ್ಕೆ ಬರುವ ಹಾಗೆ, ಕೀಳು ಮಟ್ಟದಲ್ಲಿ ನಡೆದುಕೊಂಡಿಲ್ಲ. ದೊಡ್ಡ ಮಟ್ಟದಲ್ಲಿ ರೈತರ ಸಾಲ ಮನ್ನಾ ಮಾಡಿರುವ ಮುಖ್ಯಮಂತ್ರಿ ನಾನು ಎಂದರು.

ನಾನು ಸಾಕಷ್ಟು ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ, ಈ ವೇಳೆ ಒಬ್ಬರೂ ಕೃತಜ್ಞತೆ ಹೇಳಲಿಲ್ಲ. ಈಗ ರೈತ ಮುಖಂಡರು ನನ್ನ ಬಗ್ಗೆ ಎಚ್ಚರಿಕೆಯಿಂದ ಮಾತನಾಡಲಿ, ನಿಮ್ಮಿಂದ ನಾನು ಹೇಳಿಸಿಕೊಳ್ಳಬೇಕಿಲ್ಲ. ಇಂತಹವರೊಂದಿಗೆ ಚರ್ಚೆ ಮಾಡುವುದು ಅನಾವಶ್ಯಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀವು ರೈತರ ಹೆಸರಿನಲ್ಲಿ ಡೋಂಗಿಯಾಗಿ ಕೆಲಸ ಮಾಡುತ್ತಿದ್ದೀರಿ, ಮೊದಲು ನಿಮ್ಮಲ್ಲಿರುವ ಹುಳುಕನ್ನ ಮುಚ್ಚಿಕೊಳ್ಳಿ. ನನ್ನ ಹತ್ತಿರ ನಿಮ್ಮ ಆಟಗಳು ನಡೆಯುವುದಿಲ್ಲ, ನಿಮ್ಮಿಂದ ನಾನು ಹೇಳಿಸಿಕೊಳ್ಳಬೇಕಾಗಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಹಿನ್ನೆಲೆ ಏನು?‌, ಅವರ ಹೋರಾಟ ಹೇಗೆ?, ಅವರು ಬಂದ ದಾರಿಯ ಕುರಿತು ನನಗೆ ಸಂಪೂರ್ಣ ಗೊತ್ತಿದೆ ಎಂದರು.

ಕಾಂಗ್ರೆಸ್​​ ವಿರುದ್ಧ ಮಾತನಾಡಿದ ಅವರು, ನಾನು ಯಾರೊಂದಿಗೂ ಕಮಿಟ್ ಆಗಿಲ್ಲ, ಕಮಿಟ್ ಮಾಡಿ ರಾಜಕೀಯ ಮಾಡುವ ಅಗತ್ಯವಿಲ್ಲ. ಅಲ್ಲದೇ ನಾನು ಡೇ ಟೈಮ್​ನಲ್ಲಿ ಯಡಿಯೂರಪ್ಪ ಅವರನ್ನ ಭೇಟಿ ಮಾಡುತ್ತೇನೆ,‌ ಕಾಂಗ್ರೆಸ್​​​ನವರ ರೀತಿ ರಾತ್ರಿ ಹೊತ್ತು ಹೋಗಿ ಭೇಟಿಯಾಗುವುದಿಲ್ಲ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ರು. 

ಓದಿ: ಹೆಚ್​ಡಿಕೆ ರೈತರ ಬಾಯಿಗೆ ಮಣ್ಣು ಹಾಕಿದ್ದಾರೆ: ಕೋಡಿಹಳ್ಳಿ ವಾಗ್ದಾಳಿ

Last Updated : Dec 9, 2020, 3:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.