ETV Bharat / state

ಟ್ರ್ಯಾಕ್ಟರ್​​ಗೆ ಹಿಂಬದಿಯಿಂದ ಬೊಲೆರೋ ವಾಹನ ಡಿಕ್ಕಿ: ಕೋಲಾರದಲ್ಲಿ ತಂದೆ, ಮಗ ಸಾವು - Kolar

ಟ್ರ್ಯಾಕ್ಟರ್​​ಗೆ ಹಿಂಬದಿಯಿಂದ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಳದೇನಹಳ್ಳಿ ಬಳಿ ಈ ಘಟನೆ ನಡೆದಿದೆ.

Kolar
ಟ್ರ್ಯಾಕ್ಟರ್​​ಗೆ ಬೊಲೆರೊ ವಾಹನ ಡಿಕ್ಕಿ- ಪ್ರತ್ಯಕ್ಷ ದೃಶ್ಯ
author img

By

Published : Jul 30, 2021, 3:15 PM IST

ಕೋಲಾರ: ಟ್ರ್ಯಾಕ್ಟರ್​​ಗೆ ಹಿಂಬದಿಯಿಂದ ಬೊಲೆರೋ ವಾಹನ ಡಿಕ್ಕಿ ಹೊಡೆದಿದ್ದು ತಂದೆ-ಮಗ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಮೂಲದ ಹನುಮಂತು (45) ಹಾಗು ಭುವನ್ (12) ಮೃತ ದುರ್ದೈವಿಗಳು.

kolar
ತಂದೆ, ಮಗನ ಮೃತದೇಹ

ನಿನ್ನೆ (ಗುರುವಾರ) ಚಿಕ್ಕಬಳ್ಳಾಪುರದಿಂದ ಇಬ್ಬರು ಮಾಲೂರು ತಾಲೂಕಿನ ತೊರನಹಳ್ಳಿಯಲ್ಲಿರುವ ಮಾವನ ಮನೆಗೆ ಬಂದಿದ್ದರು‌. ಇಂದು ಮಾವನ ಮನೆಯಿಂದ ವಾಪಸ್ ಆಗುತ್ತಿದ್ದ ವೇಳೆ ಕಲ್ಲಿನ ಚಪ್ಪಡಿಗಳನ್ನು ತುಂಬಿಕೊಂಡು ಹೋಗುತ್ತಿದ್ದರು.

ಕಲ್ಲು ಗಣಿಗಾರಿಕೆ: ಟಿಪ್ಪರ್,ಟ್ರ್ಯಾಕ್ಟರ್ ವಾಹನಗಳಿಂದ ತೊಂದರೆ

ಸ್ಥಳಕ್ಕೆ ಮಾಸ್ತಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚಾಗಿದೆ. ಟಿಪ್ಪರ್ ಹಾಗು ಟ್ರ್ಯಾಕ್ಟರ್ ಹಾವಳಿಯಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಪರವಾನಗಿ ಇಲ್ಲದ ವಾಹನಗಳಿಗೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.