ಕೋಲಾರ: ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರದಿಂದ ರೈತರಿಗೆ ನೀಡಲಾಗಿದ್ದ ಪರಿಹಾರ ಧನ ಇನ್ನೂ ಕೈ ಸೇರಿಲ್ಲವೆಂದು ಆರೋಪಿಸಿ ನಗರದ ತೋಟಗಾರಿಕಾ ಇಲಾಖೆ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದಾರೆ.
ಕೋವಿಡ್ ಹೆಚ್ಚಾಗಿದ್ದ ವೇಳೆ ಜಿಲ್ಲೆಯಾದ್ಯಂತ ರೈತರು ಹೂ ಬೆಳೆದು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗೆ ಸುರಿಯಲಾಗಿತ್ತು. ಈ ಸಂದರ್ಭ ರೈತರು ಸಾಲದ ಸುಳಿಗೆ ಸಿಲುಕಿದ್ದರು. ಹೀಗಾಗಿ ಸರ್ಕಾರ ಪರಿಹಾರ ಧನ ಘೋಷಣೆ ಮಾಡಿತ್ತು. ಆದರೆ ಇದುವರೆಗೂ ಪರಿಹಾರ ರೈತರ ಕೈ ಸೇರಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವಲ್ಲಿ ವಿಫಲವಾದ ಹಿನ್ನಲೆ ಬಂದ ದಾರಿಗೆ ಸುಂಕವಿಲ್ಲದೆ ಹಿಂತಿರುಗಿದರು. ಸದ್ಯ ರೈತರು ಅಹೋರಾತ್ರಿ ಪ್ರತಿಭಟನೆ ಮುಂದುವರೆಸಿದ್ದಾರೆ.