ಕೋಲಾರ: ದೇಶದ ವಿರುದ್ದ ಕೆಲಸ ಮಾಡುತ್ತಿರುವಂಥ ಸಂಘಟನೆಗಳನ್ನು ನಿಷೇಧಿಸಬೇಕು ಎಂಬ ವಿಚಾರಕ್ಕೆ ದನಿಗೂಡಿಸುವುದಾಗಿ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್.ಡಿ.ಪಿ.ಐ ಹಾಗೂ ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳು ಮೊದಲಿನಿಂದಲೂ ದೇಶದ ವಿರುದ್ದ ಕೆಲಸ ಮಾಡಿಕೊಂಡು ಬಂದಿದೆ. ಇದೀಗ ಈ ಸಂಘಟನೆಗಳ ಉಪಟಳ ಹೆಚ್ಚಾಗಿದ್ದು, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದನ್ನು ಬಂಧಿತರೇ ಬಹಿರಂಗಪಡಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರಾದ ಆರು ಮಂದಿಯಲ್ಲಿ ಕೋಲಾರ ಮೂಲದ ಇಬ್ಬರು ಯುವಕರಿದ್ದಾರೆ. ನಮ್ಮ ಜಿಲ್ಲೆಯ ಯುವಕರು ಈ ರೀತಿ ಅಡ್ಡದಾರಿ ಹಿಡಿಯುವುದನ್ನು ಬಿಟ್ಟು ದೇಶಕ್ಕೋಸ್ಕರ ಚಿಂತನೆ ಮಾಡಬೇಕು ಮುನಿಸ್ವಾಮಿ ಹೇಳಿದರು.