ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನಾಡಗುಮ್ಮನಹಳ್ಳಿ ಗ್ರಾಮದ ರೈತನೊಬ್ಬ ನೆಲಗಡಲೆ ಭಿತ್ತನೆ ಮಾಡಿದ್ದ ಜಮೀನಿಗೆ ತೆರಳುತ್ತಿದ್ದಾಗ ಕಾಡಾನೆ ದಾಳಿಯಿಂದಾಗಿ ಮೃತಪಟ್ಟಿದ್ದಾನೆ.
ಭತ್ತೆಪ್ಪ (50) ಆನೆ ದಾಳಿಯಿಂದ ಮೃತಪಟ್ಟ ರೈತ. ಗಡಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಕಾಡಾನೆ ದಾಳಿಗೆ ಎರಡನೇ ಬಲಿಯಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೆ ರೈತ ಮಹಿಳೆಯ ಮೇಲೆ ಕಾಡಾನೆಗಳು ದಾಳಿ ನಡೆಸಿದ ಪರಿಣಾಮ ಆಕೆ ಸಾವನ್ನಪ್ಪಿದ್ದಳು. ಒಂದೇ ವಾರದಲ್ಲಿ ಎರಡನೇ ಪ್ರಕರಣ ಇದಾಗಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.
ಕಾಡಾನೆಗಳ ಹಿಂಡು ಗಡಿಯಲ್ಲೇ ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗಡಿ ಗ್ರಾಮಗಳ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಎಡಬಿಡದೇ ಸುರಿಯುತ್ತಿರುವ ಮಳೆ..ಅಂಗಳಕ್ಕೆ ಉರುಳಿ ಬಂದ ಬೃಹತ್ ಬಂಡೆ!