ಕೋಲಾರ: ಕೊರೊನಾ ಸೋಂಕಿರುವ ವ್ಯಕ್ತಿ ಸಲೂನ್ ಶಾಪ್ನಲ್ಲಿ ಹೇರ್ ಕಟ್ ಮಾಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತ ಸಲೂನ್ ಮಾಲಿಕನೋರ್ವ ಪಿಪಿಇ ಕಿಟ್ ಧರಿಸುವ ಮೂಲಕ ಹೇರ್ ಕಟ್ ಮಾಡುತ್ತಿದ್ದಾನೆ.
ತಾಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿನ ಶ್ರೀ ಮಂಜುನಾಥ್ ಕಟಿಂಗ್ ಶಾಪ್ ಮಾಲೀಕ ಮಂಜುನಾಥ್ ಹೊಸ ಪ್ರಯತ್ನಕ್ಕೆ ಸಾಕ್ಷಿಯಾಗಿದ್ದಾರೆ. ಬಂಗಾರಪೇಟೆ ಪಟ್ಟಣದ ವ್ಯಕ್ತಿಯೋರ್ವ ವಿದೇಶದಿಂದ ಬಂದಿದ್ದ ಹಿನ್ನೆಲೆ, ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಅಲ್ಲದೆ ಕ್ವಾರಂಟೈನ್ನಲ್ಲಿದ್ದ ಈತನನ್ನ ವರದಿ ಬರುವ ಮೊದಲೇ ಬೆಂಗಳೂರಿನ ಅಧಿಕಾರಿಗಳು ಮನೆಗೆ ಕಳುಹಿಸಿದ್ದರು.
ನಂತರ ಈತ ಬಂಗಾರಪೇಟೆ ಪಟ್ಟಣದ ಸಲೂನ್ ಒಂದರಲ್ಲಿ ಹೇರ್ ಕಟ್ ಮಾಡಿಸಿಕೊಂಡಿದ್ದಾನೆ. ಇದಾದ ಬಳಿಕ ಈತನ ವರದಿ ಪಾಸಿಟಿವ್ ಬಂದಿದ್ದು, ಸಲೂನ್ ಶಾಪ್ ಸೇರಿ ಇಡೀ ಪ್ರದೇಶ ಸೀಲ್‌ಡೌನ್ ಮಾಡಲಾಯಿತು. ಜೊತೆಗೆ ಸಲೂನ್ ಮಾಲೀಕರು ಹಾಗೂ ಸಲೂನ್ನಲ್ಲಿ ಅಂದು ಹೇರ್ ಕಟ್ ಮಾಡಿಸಿದ್ದ 15 ಜನರನ್ನ ಕ್ವಾರಂಟೈನ್ ಮಾಡಲಾಗಿದೆ.
ಈ ಹಿನ್ನೆಲೆ ಎಚ್ಚೆತ್ತಿರುವ ಮಾಲೀಕ ಮಂಜುನಾಥ್ ಪಿಪಿಇ ಕಿಟ್ ಧರಿಸಿ ಹೇರ್ ಕಟ್ ಮಾಡುತ್ತಿದ್ದಾರೆ. ಸೋಂಕು ಹರಡದಂತೆ ಸಲೂನ್ನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮಂಜುನಾಥ್ ನಡೆ ಸ್ಥಳೀಯರು ಪ್ರಶಂಸೆಗೆ ಕಾರಣವಾಗಿದೆ.