ಕೋಲಾರ: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಯಿಂದಾಗಿ ಬೇಸತ್ತ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಕೋಲಾರದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಹಂದಿ, ನಾಯಿಗಳೊಂದಿಗೆ ಸರ್ಕಾರದ ಅಣುಕು ಪ್ರದರ್ಶನ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ರೆಸಾರ್ಟ್ ರಾಜಕಾರಣಕ್ಕೆ ಧಿಕ್ಕಾರಗಳನ್ನ ಕೂಗಿದ ಪ್ರತಿಭಟನಾಕಾರರು, ಜನರಿಂದ ಮತವನ್ನು ಪಡೆದು, ಜನರ ಕಷ್ಟಗಳಿಗೆ ಸ್ಪಂದಿಸದೆ ಹಣಕ್ಕಾಗಿ ತಮ್ಮನ್ನ ತಾವು ಮಾರಿಕೊಂಡು ರೆಸಾರ್ಟ್ನಲ್ಲಿ ಬೀಡು ಬಿಟ್ಟಿರುವ ಶಾಸಕರು ವಾಂತಿ ಬೇಧಿಯಿಂದ ಸಾವನ್ನಪ್ಪಿದ್ದಾರೆಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಅಧಿಕಾರದ ಆಸೆಯಿಂದ ರೆಸಾರ್ಟ್ನಲ್ಲಿದ್ದುಕೊಂಡು ಜನರನ್ನು ಮರೆತಿರುವ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.