ETV Bharat / state

ಡಿಕೆಶಿ ನನ್ನ ರಾಜಕೀಯ ಗುರು, ಅವರಿಗೆ ಒಳ್ಳೆಯದಾಗುತ್ತೆ: ಅಬಕಾರಿ ಸಚಿವ ಎಚ್.ನಾಗೇಶ್ - ರಾಜಕೀಯ ಗುರು

ಡಿಕೆ ಶಿವಕುಮಾರ್ ಅವರು ನನಗೆ ರಾಜಕೀಯ ಗುರುಗಳು. ದೇವರು ಜೊತೆಗೆ ಗಾಡ್ ಫಾದರ್ ಎಲ್ಲವೂ ಆಗಿದ್ದಂತಹವರು.ಅವರಿಗೆ ದೈವ ಬಲವಿದೆ. ಮುಂದೆ ಅವರಿಗೆ ಒಳ್ಳೆಯದಾಗುತ್ತದೆ. ಅವರ ಮೇಲೆ ಇರುವ ಆಪಾದನೆಯನ್ನು ನಾನು ನಂಬುವುದಿಲ್ಲ. ವಿಚಾರಣೆ ಮುಗಿಯುವವರೆಗೂ ಊಹಾಪೋಹಗಳು ಇದ್ದೇ ಇರುತ್ತದೆ. ತನಿಖೆಯ ನಂತರ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ಸಿಗುತ್ತದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿಕೆ ನೀಡಿದ್ದಾರೆ.

H Nagesh,ಅಬಕಾರಿ ಸಚಿವ ಎಚ್.ನಾಗೇಶ್
author img

By

Published : Aug 30, 2019, 5:43 PM IST

ಕೋಲಾರ : ಡಿ.ಕೆ.ಶಿವಕುಮಾರ್ ಅವರು ನನ್ನ ರಾಜಕೀಯ ಗುರುಗಳು. ಅವರಿಗೆ ದೇವರು ಒಳ್ಳೆಯದ್ದನ್ನು ಮಾಡುತ್ತಾನೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿಕೆ ನೀಡಿದ್ದಾರೆ.

ಅಬಕಾರಿ ಸಚಿವ ಎಚ್.ನಾಗೇಶ್

ನೂತನ ಸಚಿವರಾದ ಬಳಿಕ ನಗರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಡಿಕೆ ಶಿವಕುಮಾರ್ ಅವರು ನನಗೆ ರಾಜಕೀಯ ಗುರುಗಳು. ದೇವರು ಜೊತೆಗೆ ಗಾಡ್ ಫಾದರ್ ಎಲ್ಲವೂ ಆಗಿದ್ದಂತಹವರು. ಕಷ್ಟದಲ್ಲಿರುವವರ ಬಗ್ಗೆ ಟೀಕೆ ಮಾಡುವುದು ಸುಲಭ. ಅವರ ವಯಕ್ತಿಕ ವಿಚಾರಗಳ ಕುರಿತು ಕಷ್ಟದಲ್ಲಿದ್ದಾಗ ಮಾತನಾಡಬಾರದು. ಒಂದು ವೇಳೆ ಶಿವಕುಮಾರ್ ಅವರು ಜೈಲಿಗೆ ಹೋದ್ರೆ ನಾನು ಏನು ಮಾಡುವುದಕ್ಕೆ ಆಗುವುದಿಲ್ಲ. ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಅಷ್ಟೆ ಎಂದರು.

ಡಿಕೆ.ಶಿವಕುಮಾರ್ ಅವರಿಗೆ ದೈವ ಬಲವಿದೆ. ಮುಂದೆ ಅವರಿಗೆ ಒಳ್ಳೆಯದಾಗುತ್ತದೆ. ಅಲ್ಲದೆ ಡಿಕೆಶಿ ಅವರ ಮೇಲೆ ಇರುವ ಆಪಾದನೆಯನ್ನು ನಾನು ನಂಬುವುದಿಲ್ಲ. ವಿಚಾರಣೆ ಮುಗಿಯುವವರೆಗೂ ಊಹಾಪೋಹಗಳು ಇದ್ದೇ ಇರುತ್ತದೆ. ತನಿಖೆಯ ನಂತರ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ಸಿಗುತ್ತದೆ ಎಂದರು.

ಇನ್ನು ಅಬಕಾರಿ ಇಲಾಖೆಯಲ್ಲಿ ಹೊಸ ಲೈಸೆನ್ಸ್​ಗಳಿಗೆ ಬಹಳ ಬೇಡಿಕೆ ಇದೆ. ಹೀಗಾಗಿ ಮತ್ತಷ್ಟು ಲೈಸೆನ್ಸ್​ಗಳನ್ನ ಕೊಡುವ ವಿಚಾರವನ್ನ ಮುಖ್ಯಮಂತ್ರಿಗಳ ಬಳಿ ಮಾತನಾಡಿ ತೀರ್ಮಾನ ತೆಗೆದುಕೊಳ್ಳುವೆ. ಇನ್ನು ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಆಡಳಿತ ವರ್ಗದಲ್ಲಿದ್ದ ನಾನು ನನ್ನ ಅನುಭವಗಳನ್ನ ಮುಖ್ಯಮಂತ್ರಿಗಳ ಬಳಿ ಹೇಳಿದ್ದೇನೆ. ರಾಜ್ಯದಲ್ಲಿ ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟ ಸಂಪೂರ್ಣವಾಗಿ ನಿಲ್ಲಿಸುವಲ್ಲಿ ಕ್ರಮಕೈಗೊಳ್ಳುವುದಾಗಿ ಹೇಳಿದ್ರು.

ಇನ್ನು ಇದೇ ಸಂದರ್ಭದಲ್ಲಿ ಮುಳಬಾಗಿಲು ಪಟ್ಟಣದಲ್ಲಿ ನೂತರ ಪಶು ಆಸ್ಪತ್ರೆ ಕಟ್ಟಡ ಉದ್ಘಾಟನೆ, ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನ ನಡೆಸಿದ್ರು.

Intro:ಕೋಲಾರ
ದಿನಾಂಕ - 30-08-19
ಸ್ಲಗ್ - ಅಬಕಾರಿ ಸಚಿವ ನಾಗೇಶ್
ಫಾರ್ಮೆಟ್ - ಎವಿಬಿಬಿ

ಆಂಕರ್ : ಡಿ.ಕೆ.ಶಿವಕುಮಾರ್ ಅವರು ನನ್ನ ರಾಜಕೀಯ ಗುರುಗಳು ಅವರಿಗೆ ದೇವರು ಒಳ್ಳೆಯದು ಮಾಡುತ್ತಾನೆ ಎಂದು ಬಂಧನದ ಬೀತಿಗೆ ಸಂಬಂಧಿಸಿದಂತೆ ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿಕೆ ನೀಡಿದ್ರು. ನೂತನ ಸಚಿವರಾದ ನಂತರ ಕೋಲಾರದಕ್ಕೆ ಭೇಟಿ ನೀಡಿದ ಸಚಿವರು ಮಾದ್ಯಮದವರೊಂದಿಗೆ ಮಾತನಾಡಿ, ಡಿಕೆ.ಶಿವಕುಮಾರ್ ಅವರಿಗೆ ದೈಬ ಬಲ ಇದೆ, ಮುಂದೆ ಅವರಿಗೆ ಒಳ್ಳೆಯದಾಗುತ್ತದೆ ಎಂದು ಭವಿಷ್ಯ ನುಡಿದ್ರು. ಅಲ್ಲದೆ ಡಿಕೆ ಅವರ ಮೇಲೆ ಇರುವ ಆಪಾದನೆಯನ್ನ ನಾನು ನಂಬುವುದಿಲ್ಲ, ವಿಚಾರಣೆ ಮುಗಿಯುವವರೆಗೂ ಊಹಾಪೋಹಗಳು ಇದ್ದೇ ಇರುತ್ತದೆ, ತನಿಖೆಯ ನಂತರ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ಸಿಗುತ್ತದೆ ಎಂದರು. ಇನ್ನು ಡಿಕೆ ಶಿವಕುಮಾರ್ ಅವರು ನನಗೆ ರಾಜಕೀಯ ಗುರುಗಳು, ದೇವರು ಜೊತೆಗೆ ಗಾಡ್ ಫಾದರ್ ಎಲ್ಲವೂ ಆಗಿದ್ದಂತಹವರು, ಕಷ್ಟದಲ್ಲಿರುವವರ ಬಗ್ಗೆ ಟೀಕೆ ಮಾಡುವುದು ಸುಲಭ, ಅವರ ವೈಯುಕ್ತಿಕ ವಿಚಾರಗಳ ಕುರಿತು ಕಷ್ಟದಲ್ಲಿದ್ದಾಗ ಮಾತನಾಡಬಾರದು ಎಂದು ಹೇಳಿದ್ರು. ಜೊತೆಗೆ ಒಂದು ವೇಳೆ ಶಿವಕುಮಾರ್ ಅವರು ಜೈಲಿಗೆ ಹೋದ್ರೆ ನಾನು ಏನು ಮಾಡುವುದಕ್ಕೆ ಆಗುವುದಿಲ್ಲ, ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಅಷ್ಟೆ ಎಂದರು. ಇನ್ನು ಅಬಕಾರಿ ಇಲಾಖೆಯಲ್ಲಿ ಹೊಸ ಲೈಸೆನ್ಸ್‍ಗಳಿಗೆ ಬಹಳ ಬೇಡಿಕೆ ಇದೆ, ಹೀಗಾಗಿ ಮತ್ತಷ್ಟು ಲೈಸೆನ್ಸ್‍ಗಳನ್ನ ಕೊಡುವ ವಿಚಾರವನ್ನ ಮುಖ್ಯಮಂತ್ರಿಗಳ ಬಳಿ ಮಾತನಾಡಿ ತೀರ್ಮಾನ ತೆಗೆದುಕೊಳ್ಳುವೆ ಎಂದರು. ಇನ್ನು ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಆಡಳಿತ ವರ್ಗದಲ್ಲಿದ್ದ ನಾನು ನನ್ನ ಅನುಭವಗಳನ್ನ ಮುಖ್ಯಮಂತ್ರಿಗಳ ಬಳಿ ಹೇಳಿದ್ದೇನೆ ಎಂದ ಅವರು, ರಾಜ್ಯದಲ್ಲಿ ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟ ಸಂಪೂರ್ಣವಾಗಿ ನಿಲ್ಲಿಸುವಲ್ಲಿ ಕ್ರಮಕೈಗೊಳ್ಳುವುದಾಗಿ ಹೇಳಿದ್ರು. ಇನ್ನು ಇದೇ ಸಂದರ್ಭದಲ್ಲಿ ಮುಳಬಾಗಿಲು ಪಟ್ಟಣದಲ್ಲಿ ನೂತರ ಪಶುಆಸ್ಪತ್ರೆ ಕಟ್ಟಡ ಉದ್ಘಾಟನೆ, ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ಸೇರಿದಂತೆ ವಿವಿದ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನ ನಡೆಸಿದ್ರು.

ಬೈಟ್ 1: ಎಚ್.ನಾಗೇಶ್ (ಅಬಕಾರಿ ಸಚಿವ)
ಬೈಟ್ 2: ಎಚ್.ನಾಗೇಶ್ (ಅಬಕಾರಿ ಸಚಿವ) Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.