ಕೋಲಾರ: ಜಿಲ್ಲೆಯಲ್ಲಿ ಅಕ್ರಮವಾಗಿ ಸಾರಿಗೆ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಓಡಾಟ ನಡೆಸುತ್ತಿದ್ದ ಕ್ರಷರ್ ಟಿಪ್ಪರ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ರಾಜ್ಯದ ಪರವಾನಿಗೆ ಇಲ್ಲದೆ ಸಂಚಾರ ಮಾಡುತ್ತಿದ್ದ ತಮಿಳುನಾಡು ನೋಂದಣಿಯ ಮೂರು ಟಿಪ್ಪರ್ ಲಾರಿಗಳನ್ನ ಸಾರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಕ್ರಮವಾಗಿ ಟನ್ಗಟ್ಟಲೇ ಎಂ-ಸ್ಯಾಂಡ್ ಸೇರಿದಂತೆ ಜಲ್ಲಿ ಸಾಗಾಟ ಮಾಡುತ್ತಿದ್ದ 3 ಟಿಪ್ಪರ್ಗಳನ್ನು ಆರ್‌ಟಿಓ ಅಧಿಕಾರಿಗಳು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಚೆನ್ನೈ ಮೈನ್ಸ್ ಕಂಪನಿಗೆ ಸೇರಿದ ಟಿಎನ್-85- 7070 ಅನ್ನೋ ನಂಬರಿನ ತಮಿಳುನಾಡು ನೋಂದಣಿಯ ಲಾರಿಗಳು ಇವಾಗಿವೆ. ಒಂದೇ ನಂಬರ್ ಪ್ಲೇಟ್ ಹೊಂದಿರುವ ಮೂರು ಲಾರಿಗಳು ಸಂಚಾರ ಮಾಡುತ್ತಿದ್ದುದನ್ನು ಗಮನಿಸಿದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಓದಿ: ಮಾನಸಿಕ ಅಸ್ವಸ್ಥ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರು
ಒಂದು ಟಿಪ್ಪರ್ ಮಾತ್ರ ಅಧಿಕೃತವಾಗಿ ಅನುಮತಿ ಪಡೆದಿದ್ದು,ಇದರ ಬೆನ್ನಲ್ಲೇ ಐದಾರು ಟಿಪ್ಪರ್‌ಗಳನ್ನ ತೋರಿಸುವ ಜಾಲ ಇದಾಗಿದೆ. ಈ ಹಿನ್ನೆಲೆ ಅಕ್ರಮವಾಗಿ ಓಡಾಟ, ಜಲ್ಲಿ, ಎಂ-ಸ್ಯಾಂಡ್ ಸಾಗಾಟ ಮಾಡುತ್ತಿದ್ದ ಮೂರು ಟಿಪ್ಪರ್‌ಗಳನ್ನ ವಶಕ್ಕೆ ಪಡೆಯಲಾಗಿದೆ.