ಕೋಲಾರ : ನಗರಸಭೆ ವತಿಯಿಂದ ಇಂದು ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ನಗರಸಭೆ ಸದಸ್ಯರು ಸೇರಿ ಆಯುಕ್ತ ಶ್ರೀಕಾಂತ್ ಉದ್ಘಾಟಿಸಿದರು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಕಳೆದ ಎರಡು ದಿನಗಳಿಂದ ಕ್ರೀಡೆಗಳನ್ನು ನಡೆಸಲಾಗಿದೆ. ವಿಜೇತರಿಗೆ ಬಹುಮಾನಗಳನ್ನು ನೀಡಿದರು. ಅಲ್ಲದೆ ನಗರವನ್ನು ಪ್ರತಿನಿತ್ಯ ಸ್ವಚ್ಛವಾಗಿರಿಸಲು ಸಾಕಷ್ಟು ಶ್ರಮಿಸುತ್ತಿರುವ ಕಾರ್ಮಿಕರ ಕೆಲಸಕ್ಕೆ ಸದಸ್ಯರು ಶ್ಲಾಘನೆ ವ್ಯಕ್ತಪಡಿಸಿದರು.
ಅಲ್ಲದೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪೌರ ಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಇದೇ ವೇಳೆ ನಗರಸಭೆಯ ಎಲ್ಲಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೂರಾರು ಪೌರಕಾರ್ಮಿಕರು ಸೇರಿ ನಗರಸಭೆ ಸದಸ್ಯರು ಹಾಜರಿದ್ದರು.