ETV Bharat / state

ಮತದಾರರ ಪಟ್ಟಿಯಲ್ಲಿ ಬದಲಾವಣೆ: ತಹಶೀಲ್ದಾರ್​ ವಿರುದ್ಧ ಪ್ರತಿಭಟನೆ - ಮುಳಬಾಗಿಲು ನಗರದ ನಾಲ್ಕನೆ ವಾರ್ಡ್

ವಾರ್ಡ್​ವೊಂದರಲ್ಲಿ ಮತದಾರರ ಪಟ್ಟಿ ಬದಲಾವಣೆ ಆಗಿರುವ ಹಿನ್ನಲೆ ವಾರ್ಡ್ ಜನತೆ ತಹಸೀಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಕೋಲಾರದಲ್ಲಿ ನಡೆದಿದೆ.

ಮತದಾರ ಪಟ್ಟಿಯಲ್ಲಿ ಬದಲಾವಣೆ: ತಹಶೀಲ್ದಾರ್ ವಿರುದ್ಧ ವಾರ್ಡ್​ ಜನತೆ ಪ್ರತಿಭಟನೆ
author img

By

Published : Nov 11, 2019, 4:55 PM IST

ಕೋಲಾರ: ವಾರ್ಡ್​ವೊಂದರಲ್ಲಿ ಮತದಾರರ ಪಟ್ಟಿ ಬದಲಾವಣೆ ಆಗಿರುವ ಹಿನ್ನೆಲೆ ವಾರ್ಡ್ ಜನತೆ ತಹಸೀಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಡೆದಿದೆ.

ಮತದಾರ ಪಟ್ಟಿಯಲ್ಲಿ ಬದಲಾವಣೆ: ತಹಶೀಲ್ದಾರ್ ವಿರುದ್ಧ ಪ್ರತಿಭಟನೆ

ಮುಳಬಾಗಿಲು ನಗರದ ನಾಲ್ಕನೇ ವಾರ್ಡ್​ನ ಜನರು, ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮತದಾರರ ಪಟ್ಟಿಯಲ್ಲಿ ವಾರ್ಡ್ ಸಂಖ್ಯೆ ಅದಲು ಬದಲಾಗಿದ್ದು, ರಾತ್ರೋರಾತ್ರಿ ಮತದಾರರ ಪಟ್ಟಿಯಲ್ಲಿ ಅಧಿಕಾರಿಗಳು ಬದಲಾವಣೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಈ ವೇಳೆ ಮುಳಬಾಗಿಲು ತಹಸೀಲ್ದಾರ್ ನಾಗರಾಜ್ ಅವರನ್ನ ತರಾಟೆಗೆ ತೆಗೆದುಕೊಂಡ ವಾರ್ಡ್ ಜನತೆ, 4ನೇ ವಾರ್ಡ್​ನ ಮತದಾರರ ಪಟ್ಟಿಯನ್ನ ಬದಲಾವಣೆ ಮಾಡಿ ಸುಮಾರು 180 ಹೊಸ ಮತದಾರರನ್ನು ಸೇರ್ಪಡೆ ಮಾಡಿದ್ದಾರೆ ಎಂದು ಆರೋಪಿಸಿದರು. ಅಧಿಕಾರಿಗಳು ಹಾಗೂ ಜನರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳಕ್ಕೆ ಮುಳಬಾಗಿಲು ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Intro:ಆಂಕರ್: ವಾರ್ಡ್ ವೊಂದರಲ್ಲಿ ಮತದಾರರ ಪಟ್ಟಿ ಅದಲು ಬದಲಾವಣೆ ಆಗಿರುವ ಹಿನ್ನಲೆ ವಾರ್ಡ್ ಜನತೆ ಪ್ರತಿಭಟನೆ ನಡೆಸಿದ ಘಟನೆ ಕೋಲಾರದಲ್ಲಿ ಜರುಗಿದೆ. Body:ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿರುವ, ಮುಳಬಾಗಿಲು ನಗರದ ನಾಲ್ಕನೆ ವಾರ್ಡ್ ನ ಜನತೆ, ತಹಸೀಲ್ದಾರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮತದಾರರ ಪಟ್ಟಿಯಲ್ಲಿ ವಾರ್ಡ್ ಸಂಖ್ಯೆ ಅದಲು ಬದಲಾಗಿದ್ದು, ರಾತ್ರೋ ರಾತ್ರಿ ಮತದಾರರ ಪಟ್ಟಿಯಲ್ಲಿ ಅಧಿಕಾರಿಗಳು ಬದಲಾವಣೆ ಮಾಡಿದ್ದಾರೆಂದು ಆರೋಪಿಸಿದ್ರು. ಅಲ್ಲದೆ ಈ ವೇಳೆ ಮುಳಬಾಗಿಲು ತಹಸೀಲ್ದಾರ್ ನಾಗರಾಜ್ ಅವರನ್ನ ತರಾಟೆಗೆ ತೆಗೆದುಕೊಂಡ ವಾರ್ಡ್ ಜನತೆ, ೪ ನೇ ವಾರ್ಡ್ ನ ಮತದಾರರ ಪಟ್ಟಿಯನ್ನ ಬದಲಾವಣೆ ಮಾಡಿ ಸುಮಾರು 180 ಹೊಸ ಮತದಾರರ ಸೇರ್ಪಡೆ ಮಾಡಿರುವುದಾಗಿ ತಿಳಿಸಿದ್ರು. ಇನ್ನು ಅಧಿಕಾರಿಗಳು ಹಾಗೂ ಜನರ ನಡುವೆ ಮಾತಿನ ಚಕಮಕಿ ನಡೆದಿದ್ದು,
ಕೂಡಲೇ ಮತದಾರರ ಪಟ್ಟಿಯನ್ನ
ಪರಿಷ್ಕರಿಸುವಂತೆ ತಾಲೂಕು ಕಛೇರಿ ಮುಂದೆ ಪ್ರತಿಭಟನೆ ಮಾಡುವುದರ ಮೂಲಕ ಆಗ್ರಹ ಮಾಡಿದ್ರು. ಇನ್ನು ಸ್ಥಳೀಯ ನಗರಸಭೆ ಚುನಾವಣೆ ಹಿನ್ನಲೆ ಮತದಾನಕ್ಕೆ ಒಂದು ದಿನ ಬಾಕಿ ಇರುವ ಕಾರಣ ಅಧಿಕಾರಿಗಳು ವಾರ್ಡ್ ನ ಜನತೆ ಹಾಗೂ ಅಭ್ಯರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆConclusion:ಇನ್ನು ಸ್ಥಳಕ್ಕೆ ಮುಳಬಾಗಿಲು ನಗರ ಠಾಣಾ ಪೊಲೀಸರ ಬೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.