ETV Bharat / state

ಮನೆ ಬಾಗಿಲ ಬಳಿಯೇ ಚಿರತೆ ಸುತ್ತಾಟ... ಸಿಸಿಟಿವಿಯಲ್ಲಿ ದೃಶ್ಯ ಸೆರೆ! - ಊರಿಗೆ ಬಂದ ಚಿರತೆ

ಮನೆಯ ಬಾಗಿಲಿನ ಬಳಿಯೇ ಸುತ್ತಾಟ ನಡೆಸಿದ ಚಿರತೆ ಬೇಟೆಗಾಗಿ ಬಂದಿದ್ದು ಸ್ಪಷ್ಟವಾಗಿದೆ. ಅದೃಷ್ಟವಶಾತ್ ತಡರಾತ್ರಿಯಾಗಿದ್ದರಿಂದ ಯಾರೊಬ್ಬರೂ ಹೊರಗೆ ಇರಲಿಲ್ಲ. ಈ ದೃಶ್ಯಾವಳಿಗಳು ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

cctv-footage
cctv-footage
author img

By

Published : Jan 18, 2021, 4:38 PM IST

ಕೋಲಾರ: ಭಾರೀ ಗಾತ್ರದ ಚಿರತೆಯೊಂದು ಮನೆಯ ಸುತ್ತಮುತ್ತ ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ‌ ಮನೆಯೊಂದರ ಬಳಿ ಚಿರತೆ ಸುತ್ತಾಡಿದೆ.

ಮನೆಯ ಬಾಗಿಲಿನ ಬಳಿಯೇ ಸುತ್ತಾಟ ನಡೆಸಿದ ಚಿರತೆ ಬೇಟೆಗಾಗಿ ಬಂದಿದ್ದು ಸ್ಪಷ್ಟವಾಗಿದೆ. ಅದೃಷ್ಟವಶಾತ್ ತಡರಾತ್ರಿಯಾಗಿದ್ದರಿಂದ ಯಾರೊಬ್ಬರೂ ಹೊರಗೆ ಇರಲಿಲ್ಲ. ಇದ್ರಿಂದಾಗಿ ಚಿರತೆ ಅಲ್ಲಿಂದ ವಾಪಸಾಗಿದೆ. ಈ ದೃಶ್ಯಾವಳಿಗಳು ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಸುತ್ತಾಟ ನಡೆಸಿದ ಚಿರತೆ

ಹೊನ್ನಶೆಟ್ಟಹಳ್ಳಿ, ದೇವರಾಯಸಮುದ್ರ ಸುತ್ತಮುತ್ತಲಿನ ಗ್ರಾಮಗಳ ಬಳಿ ಸಾಕಷ್ಟು ಬೆಟ್ಟಗಳಿದ್ದು, ಹಲವಾರು ಚಿರತೆಗಳು ಬೆಟ್ಟದಲ್ಲಿ ವಾಸವಾಗಿವೆ. ಜೊತೆಗೆ ಇತ್ತೀಚೆಗೆ ಗ್ರಾಮಗಳತ್ತ ಮುಖ ಮಾಡಿರುವ ಚಿರತೆಗಳು ಹಸು ಸೇರಿದಂತೆ ಗ್ರಾಮದಲ್ಲಿನ ಕುರಿಗಳನ್ನ ಹೊತ್ತೊಯ್ದಿವೆ. ಇದ್ರಿಂದ ಈ ಭಾಗದ ಜನರು ಆತಂಕದಲ್ಲಿಯೇ ಓಡಾಡುವಂತಹ ಸ್ಥಿತಿ‌ ನಿರ್ಮಾಣವಾಗಿದೆ‌. ಅಲ್ಲದೆ ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದರೂ, ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.