ಕೋಲಾರ: ತಾವು ಮಾಡಿದ ಕೆಲಸಕ್ಕೆ ಮತ್ತೊಬ್ಬರಿಗೆ ಫೇಸ್ಬುಕ್ನಲ್ಲಿ ಧನ್ಯವಾದ ಸಲ್ಲಿಸಿದ ಹಿನ್ನೆಲೆ ತನ್ನ ವಿರುದ್ಧ ಪರಾಜಿತಗೊಂಡ ಅಭ್ಯರ್ಥಿಗೆ ಜೆಡಿಎಸ್ ಪುರಸಭೆ ಸದಸ್ಯ ಹಾಗೂ ಮೂರು ಜನ ಸಹಚರರು ಥಳಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಬಂಗಾರಪೇಟೆ ಪುರಸಭೆ ಸದಸ್ಯ ತನ್ನ ವಾರ್ಡ್ ವ್ಯಾಪ್ತಿಯಲ್ಲಿ ದುರಸ್ತಿಯಾಗಿದ್ದ ಹೈಮಾಸ್ಟ್ ದ್ವೀಪ ರೆಡಿ ಮಾಡಿಸಿದ್ದರು. ಆದರೇ ಬಿಜೆಪಿ ಮುಖಂಡ ಚಂದ್ರಾರೆಡ್ಡಿಗೆ ಧನ್ಯವಾದ ಅರ್ಪಿಸಿದ ಹಿನ್ನೆಲೆ ತನ್ನ ವಿರುದ್ಧ ಸೋಲನುಭವಿಸಿದ ಪರಾಜಿತ ಅಭ್ಯರ್ಥಿ ರಾಮು ಎಂಬುವವರನ್ನು ಥಳಿಸಿದ್ದಾರೆ. ಖುದ್ದು ಹೈ ಮಾಸ್ಟ್ ದ್ವೀಪ ಮಾಡಿಸಿದ್ದು ನಾನು, ಧನ್ಯವಾದ ಮತ್ತೊಬ್ಬರಿಗೆ ಹೇಳುವುದಾ ಎಂದು ತಮ್ಮ ಏರಿಯಾಗೆ ಕರೆಯಿಸಿಕೊಂಡು ಥಳಿಸಿರುವುದಾಗಿ ರಾಮು ಅವರು ಜೆಡಿಎಸ್ ಸದಸ್ಯ ಹಾಗೂ ಅವರ ಸಹಚರರ ವಿರುದ್ಧ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್ ಅಕೌಂಟ್‌ನಲ್ಲಿ ಬಿಜೆಪಿ ಮುಖಂಡನಿಗೆ ಪರಾಜಿತ ಅಭ್ಯರ್ಥಿ ರಾಮು ಶುಕ್ರವಾರ ಧನ್ಯವಾದ ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಪುರಸಭೆ ಸದಸ್ಯ ಸುನಿಲ್ ಕುಮಾರ್ ಹಾಗೂ ಸಹಚರರಾದ ಚಂದ್ರ ಕುಮಾರ್, ಮುರಳಿ ಎಂಬುವವರು ಥಳಿಸಿದ್ದು, ಮೂವರ ವಿರುದ್ದ ದೂರು ದಾಖಲು ಮಾಡಲಾಗಿದೆ. ಇನ್ನು, ಬಂಗಾರಪೇಟೆ ಪೊಲೀಸರು ಹಲ್ಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಜನಾರ್ದನ್ ರೆಡ್ಡಿ ನಾಳೆ ಮಹತ್ವದ ಮಾಧ್ಯಮಗೋಷ್ಟಿ: ಹೊಸ ರಾಜಕೀಯ ಪಕ್ಷ ಘೋಷಣೆ?