ಕೋಲಾರ: ಬೆಸ್ಕಾಂ ಅಧಿಕಾರಿಗಳ ಎಡವಟ್ಟಿನಿಂದಾಗಿ ರೈತ ಬೆಳೆದಿದ್ದ ರಾಗಿ ಬೆಳೆ ಬೆಂಕಿಗೆ ಆಹುತಿಯಾಗಿರುವ ಘಟನೆ ಕೋಲಾರ ತಾಲೂಕಿನ ಪಾರ್ಶ್ವಗಾನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಮುನಿಯಪ್ಪ ಎಂಬುವರಿಗೆ ಸೇರಿದ ರಾಗಿ ಬೆಳೆ ಬೆಂಕಿಗಾಹುತಿಯಾಗಿದ್ದು, ಸುಮಾರು ಐದು ಎಕರೆಯಲ್ಲಿ ರಾಗಿ ಬೆಳೆ ಬೆಳೆದಿದ್ದು, ಹೊಲದಲ್ಲಿಯೇ ಹಾದು ಹೋಗಿರುವ ವಿದ್ಯುತ್ ತಂತಿ ತುಂಡಾಗಿ ಹೊಲದಲ್ಲಿ ಬಿದ್ದಿರುವ ಪರಿಣಾಮ ಹಾನಿ ಸಂಭವಿಸಿದೆ.
ಸುಮಾರು ಐದು ಲಕ್ಷಕ್ಕೂ ಹೆಚ್ಚಿನ ರಾಗಿ ಬೆಳೆ ಹಾಗೂ ಹುಲ್ಲು ಸುಟ್ಟು ಹೋಗಿದ್ದು, ರೈತನು ಕಂಗಾಲಾಗಿದ್ದಾನೆ. ಇನ್ನು ಇಷ್ಟೆಲ್ಲಾ ಎಡವಟ್ಟು ನಡೆದರೂ ಸ್ಥಳಕ್ಕೆ ಬಾರದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.