ETV Bharat / state

ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಬೆಮಲ್​ ಕಾರ್ಮಿಕರ ಪ್ರತಿಭಟನೆ

ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಸುಭದ್ರ ಹಾಗೂ ಬೃಹತ್​ ಕಂಪನಿ, ಆದ್ರೆ ಈ ಕಂಪನಿ ವಿಚಾರದಲ್ಲಿ ಕೇಂದ್ರದ ಒಂದು ನಿರ್ಧಾರ ಇಲ್ಲಿನ ಕಾರ್ಮಿಕರನ್ನು ಅಭದ್ರಗೊಳಿಸುವ ಮೂಲಕ ಆತಂಕಕ್ಕೀಡು ಮಾಡಿದೆ. ಈ ಮೂಲಕ ಕೇಂದ್ರದ ಈ ನಿರ್ಧಾರವನ್ನು ಖಂಡಿಸಿ ಕಾರ್ಮಿಕರ ಹೋರಾಟ ಜೋರಾಗಿದೆ. ಅದು ಸದ್ಯ ರಾಜಕೀಯ ತಿರುವನ್ನು ಸಹ ಪಡೆದುಕೊಳ್ಳುತ್ತಿದೆ.

BEML workers protest
ಬೆಮಲ್​ ಕಾರ್ಮಿಕರ ಪ್ರತಿಭಟನೆ
author img

By

Published : Mar 4, 2021, 4:42 PM IST

ಕೋಲಾರ: ಕೇಂದ್ರ ಸರ್ಕಾರ ಬೆಮೆಲ್​ ಕಂಪನಿಯ ಸುಮಾರು 72 ರಷ್ಟು ಪಾಲುದಾರಿಕೆಯನ್ನ ಖಾಸಗಿಯವರಿಗೆ ವಹಿಸುವುದರ ಮೂಲಕ ಖಾಸಗೀಕರಣ ಮಾಡುವ ನಿರ್ಧಾರಕ್ಕೆ ಮುಂದಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಕಾರ್ಮಿಕರು ವಿರೋಧ ವ್ಯಕ್ತಪಡಿಸಿ ಬೀದಿಗಿಳಿದು ಕಾರ್ಮಿಕರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಸಾಥ್​ ನೀಡಿದ್ದಾರೆ.

1964 ರಲ್ಲಿ ಕೇವಲ ಐದು ಕೋಟಿ ರೂಪಾಯಿ ಬಂಡವಾಳದಿಂದ ಆರಂಭವಾದ ಬೆಮೆಲ್ ಇಂದು 3,500 ಕೋಟಿ ವಹಿವಾಟು ನಡೆಸುತ್ತಿದೆ. ಐದು ಸಾವಿರ ಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರ ಕುಟುಂಬಗಳು ಈ ಕಂಪನಿಯನ್ನು ಅವಲಂಭಿಸಿವೆ. ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಕೆಜಿಎಫ್​ನ ಬೆಮೆಲ್ ಕಾರ್ಖಾನೆ, ಈಗಾಗಲೇ ರಕ್ಷಣಾ ಇಲಾಖೆಗೆ ಬೇಕಾದ ಟೆಟ್ರಾ ಸೇರಿದಂತೆ ವಿವಿಧ ಬೃಹತ್​ ವಾಹನಗಳನ್ನ ತಯಾರಿಸುತ್ತಿರುವ ಹಾಗೂ ಲಾಭದಲ್ಲಿರುವ ಕಾರ್ಖಾನೆಯಾಗಿದೆ.

ಬೆಮಲ್​ ಕಾರ್ಮಿಕರ ಪ್ರತಿಭಟನೆ

ಈ ಕಂಪನಿಯಿಂದ ಸರ್ಕಾರದ ಬೊಕ್ಕಸಕ್ಕೂ ಕೂಡಾ ಕೋಟ್ಯಂತರ ರೂಪಾಯಿಯ ಲಾಭ ಇದೆ. ಹೀಗಿದ್ದರು ಕೇಂದ್ರ ಸರ್ಕಾರ ಬೆಮೆಲ್​ ಕಂಪನಿಯ ಸುಮಾರು 72 ರಷ್ಟು ಪಾಲುದಾರಿಕೆಯನ್ನ ಖಾಸಗಿಯವರಿಗೆ ವಹಿಸುವುದರ ಮೂಲಕ ಖಾಸಗೀಕರಣ ಮಾಡುವ ನಿರ್ಧಾರಕ್ಕೆ ಮುಂದಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಕಾರ್ಮಿಕರು ವಿರೋಧ ವ್ಯಕ್ತಪಡಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.

ಒಂದು ತಿಂಗಳ ನಿರಂತರ ಹೋರಾಟಕ್ಕೆ ಮುಂದಾಗಿದ್ದು, ಕಾರ್ಮಿಕರ ಹೋರಾಟ ಹದಿಮೂರನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕರ ಹೋರಾಟಕ್ಕೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಬೆಂಬಲ ನೀಡಿ ಕೇಂದ್ರ ಸರ್ಕಾರ ಬೆಮೆಲ್​ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು. ಜೊತೆಗೆ ಅತಿ ಶೀಘ್ರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಹೋರಾಟಕ್ಕೆ ಕರೆತರುವ ಭರವಸೆಯನ್ನು ನೀಡಿದ್ದಾರೆ.

ಅಂದಿನ ಕೋಲಾರದ ಅಭೀವೃದ್ಧಿ ಹರಿಕಾರ ಕೇಂದ್ರ ಮಂತ್ರಿಯಾಗಿದ್ದ ಎಂ.ವಿ. ಕೃಷ್ಣಪ್ಪ ಕಾಳಜಿಯ ಫಲವಾಗಿ ಸ್ಥಾಪನೆಯಾದ ಕಾರ್ಖಾನೆ ಇಂದು ಬೃಹತ್ ಕೈಗಾರಿಕೆಯಾಗಿ ಹೊರಹೊಮ್ಮಿದೆ. ಈಗಾಗಲೇ ಕೆಜಿಎಫ್​ನಲ್ಲಿದ್ದ ಚಿನ್ನದ ಗಣಿಗೆ ಬೀಗ ಹಾಕಿ 20 ವರ್ಷಗಳೇ ಕಳೆದ್ರು ಅದನ್ನು ಮತ್ತೆ ಪುನರ್​ಸ್ಥಾಪನೆ ಮಾಡಲಾಗಿಲ್ಲ. ಇದರಿಂದಾಗಿ ಸಾವಿರಾರು ಜನ ಕಾರ್ಮಿಕರು ಬೀದಿಪಾಲಾದ್ರು. ಹೀಗಿರುವಾಗ ಮತ್ತೆ ಕೇಂದ್ರ ಬೆಮೆಲ್ 46 ರಷ್ಟು ಪಾಲುದಾರಿಕೆಯನ್ನು ಖಾಸಗಿಯವರಿಗೆ ವಹಿಸಿತ್ತು. ಈಗ ಮತ್ತೆ 26 ರಷ್ಟು ಪಾಲನ್ನು ಖಾಗಿಯವರಿಗೆ ನೀಡುತ್ತಿದೆ, ಇದರಿಂದಾಗಿ ಒಟ್ಟು ಕಂಪನಿಯ 72 ರಷ್ಟು ಪಾಲುದಾರಿಕೆ ಖಾಸಗಿಯವರ ಪಾಲಾಗುವ ಮೂಲಕ ಕಂಪನಿ ಸರ್ಕಾರದ ಕೈತಪ್ಪಿ ಹೋಗುತ್ತದೆ ಎಂಬ ಆತಂಕ ಇಲ್ಲಿಯ ಕಾರ್ಮಿಕರದ್ದು.

ಹೆಚ್ಚಾಗಿ ರಕ್ಷಣಾ ಇಲಾಖೆಗೆ ಬೇಕಾದ ವಾಹನಗಳನ್ನು, ಯಂತ್ರೋಪಕರಣಗಳನ್ನು ಹೆಚ್ಚಾಗಿ ತಯಾರು ಮಾಡಲಾಗುತ್ತಿದೆ. ಜೊತೆಗೆ ಬೆಂಗಳೂರು ಮೆಟ್ರೋ, ಮುಂಬೈ ಮೆಟ್ರೋ ರೈಲು ಬೋಗಿಗಳನ್ನು ಸಹ ಇಲ್ಲಿಯೇ ತಯಾರಿಸಲಾಗಿದೆ. ಹಾಗಾಗಿ ಉತ್ತಮ ಆದಾಯ ತರುವ ಇಂಥ ಕಂಪನಿ ಖಾಸಗಿಯರ ಪಾಲಾದಲ್ಲಿ ಖಾಸಗಿಯವರು ಲಾಭದ ದೃಷ್ಟಿಯಿಂದ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳೋದು ಕಷ್ಟ. ಹಾಗಾಗಿ ಕೇಂದ್ರ ತನ್ನ ನಿಲುವನ್ನ ಬದಲಿಸಿ ಬೆಮೆಲ್ ಕಂಪನಿಯನ್ನು ಕೇಂದ್ರ ಸರ್ಕಾರದ ಒಡೆತನದಲ್ಲೇ ಇರಿಸಿಕೊಳ್ಳಬೇಕು ಅನ್ನೋದು ಕಾರ್ಮಿಕರ ಒತ್ತಾಯವಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪದ ಹೋರಾಟ ಮಾಡುವುದಾಗಿ ಕಾರ್ಮಿಕರ ಎಚ್ಚರಿಕೆ ರವಾನಿಸಿದರು.

ಒಟ್ಟಾರೆ ಸರ್ಕಾರಕ್ಕೆ ಲಾಭ ತಂದು ಕೊಡುತ್ತಿರುವ ಕಂಪನಿಯನ್ನು ಖಾಸಗಿಕರಣ ಮಾಡುತ್ತಿರುವ ಬಗ್ಗೆ ವರ್ಷಗಳಿಂದ ನಡೆಯುತ್ತಿದ್ದ ಕಾರ್ಮಿಕರ ಹೋರಾಟಕ್ಕೆ ಸದ್ಯ ಕಾಂಗ್ರೇಸ್​ ಬೆಂಬಲ ಸಿಕ್ಕಿದ್ದು, ಖಾಸಗಿಕರಣದ ಹೋರಾಟ ಸದ್ಯಕ್ಕೆ ರಾಜಕೀಯ ತಿರುವು ಪಡೆದುಕೊಳ್ಳುವ ಮೂಲಕ ಮತ್ತಷ್ಟು ವೇಗ ಪಡೆದುಕೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.