ಕೋಲಾರ: ಇಲ್ಲಿನ ಬಂಗಾರಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಕೇರಳ ಮೂಲದ ಇಬ್ಬರು ಬೈಕ್ ಕಳ್ಳರನ್ನ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 9 ಬೈಕ್ಗಳನ್ನ ವಶಕ್ಕೆ ಪಡೆದಿದ್ದು, ರೆಹಮಾನ್ ಹಾಗೂ ಅಮೀರ್ ಎಂಬವರನ್ನು ಅರೆಸ್ಟ್ ಮಾಡಿದ್ದಾರೆ.
ಬಂಗಾರಪೇಟೆ ಪೊಲೀಸರು ವಾಹನಗಳನ್ನ ತಪಾಸಣೆ ನಡೆಸುವ ವೇಳೆ, ಬೈಕ್ ಖದೀಮರು ಪರಾರಿಯಾಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅನುಮಾನಗೊಂಡ ಅವರನ್ನು ಪೊಲೀಸರು ಚೇಸ್ ಮಾಡಿ ಸೆರೆ ಹಿಡಿದಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಸುಮಾರು 8 ಲಕ್ಷ ಮೌಲ್ಯದ 9 ಬೈಕ್ಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ.
ಈ ಇಬ್ಬರು ಬೈಕ್ ಕಳ್ಳರು ಬೆಂಗಳೂರಿನ ಶೇಷಾದ್ರಿಪುರಂ, ಕಾಟನ್ಪೇಟೆ, ರಾಜಾಜಿನಗರ ಸೇರಿದಂತೆ ಹಲವು ಕಡೆ ಬೈಕ್ ಕಳ್ಳತನ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಕರ್ ಹಾಗೂ ಡಿವೈಎಸ್ಪಿಸ್ಪಿ ಮುರಳೀಧರ್ ಅವರ ಮಾರ್ಗದರ್ಶದಲ್ಲಿ ಬಂಗಾರಪೇಟೆ ಸಿಪಿಐ ಬಿ.ಸುನೀಲ್ ಕುಮಾರ್, ಎಸ್‌ಐ ಆರ್.ಜಗದೀಶ್ ರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.