ETV Bharat / state

'ಜನತಾ ದರ್ಶನ' ವೇದಿಕೆಯಲ್ಲಿ ಸಂಸದ ಮುನಿಸ್ವಾಮಿ, ಶಾಸಕ ನಾರಾಯಣಸ್ವಾಮಿ ಜಟಾಪಟಿ

ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಸಂಸದ ಮುನಿಸ್ವಾಮಿ ಮತ್ತು ಶಾಸಕ ನಾರಾಯಣಸ್ವಾಮಿ ನಡುವೆ ಜಟಾಪಟಿ ನಡೆಯಿತು.

MP Muniswamy  MLA Narayanaswamy
ಕಾರ್ಯಕ್ರಮ ವೇದಿಕೆಯಲ್ಲೇ ಸಂಸದ ಮುನಿಸ್ವಾಮಿ, ಶಾಸಕ ನಾರಾಯಣಸ್ವಾಮಿ ನಡುವೆ ಜಟಾಪಟಿ
author img

By ETV Bharat Karnataka Team

Published : Sep 25, 2023, 2:37 PM IST

Updated : Sep 25, 2023, 5:40 PM IST

ಕಾರ್ಯಕ್ರಮ ವೇದಿಕೆಯಲ್ಲೇ ಸಂಸದ ಮುನಿಸ್ವಾಮಿ, ಶಾಸಕ ನಾರಾಯಣಸ್ವಾಮಿ ನಡುವೆ ಜಟಾಪಟಿ

ಕೋಲಾರ: ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿಂದು ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಂಸದ ಎಸ್. ಮುನಿಸ್ವಾಮಿ ಮತ್ತು ಬಂಗಾರಪೇಟೆ ಶಾಸಕ ಎಸ್. ನಾರಾಯಣಸ್ವಾಮಿ ನಡುವೆ ವಾಗ್ವಾದ ನಡೆಯಿತು. ಕಾರ್ಯಕ್ರಮದ ವೇದಿಕೆ ಮೇಲೆಯೇ ಜನಪ್ರತಿನಿಧಿಗಳು ಏಕವಚನದಲ್ಲೇ ಪರಸ್ಪರ ನಿಂದಿಸಿಕೊಂಡರು. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಟಾಪಟಿ ಕೆಲಕಾಲ ಅಲ್ಲೋಕ ಕಲ್ಲೋಲ ಸೃಷ್ಟಿ ಮಾಡಿತ್ತು.

ಜಿಲ್ಲಾಡಳಿತದಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಚಾಲನೆ ನೀಡಿದ್ದು, ಅವರದೇ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಈ ನಡುವೆ ಕಾರ್ಯಕ್ರಮ ಆರಂಭವಾದ ನಂತರ ಸಂಸದ ಮುನಿಸ್ವಾಮಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಕೆಲಕಾಲ ಇದ್ದು ವಾಪಸ್​ ಹೋಗುವ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಅವರು, ಸಚಿವ ಭೈರತಿ ಸುರೇಶ್ ಪಕ್ಕದಲ್ಲಿ ಕುಳಿತಿದ್ದ ಬಂಗಾರಪೇಟೆ ಶಾಸಕ ಎಸ್​ ಎನ್ ನಾರಾಯಣಸ್ವಾಮಿ ಅವರನ್ನು ನೋಡಿ, ಭೂಗಳ್ಳರನ್ನು ಪಕ್ಕದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿರುವುದು ಸರಿಯಲ್ಲ ಎಂದು ಎಸ್ ಮುನಿಸ್ವಾಮಿ ಏರುಧ್ವನಿಯಲ್ಲಿ ಮಾತನಾಡಿದರು.

ಇದಕ್ಕೆ ನಾರಾಯಣಸ್ವಾಮಿ ಕೆರಳಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಇನ್ನೇನು ಕೈ ಕೈ ಮಿಲಾಯಿಸುವ‌ ಹಂತಕ್ಕೆ ಜನಪ್ರತಿನಿಧಿಗಳ ಜಗಳ ತಲುಪಿತು. ಆಕ್ರೋಶಗೊಂಡ ಎಸ್ ಎನ್​ ನಾರಾಯಣಸ್ವಾಮಿ ಅವರು ಸಂಸದರಿಗೆ ಏಕವಚನದಲ್ಲಿ ಬೈಯಲು ಶುರು ಮಾಡಿಕೊಂಡರು. ಆಗ ವೇದಿಕೆ ಮೇಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರು ಕೂಡಾ ಸಂಸದ ಹಾಗೂ ಶಾಸಕ ಇಬ್ಬರನ್ನೂ ಸಮಾಧಾನಪಡಿಸಿಲು ಮುಂದಾದರು.

ಈ ವೇಳೆ ವಾಪಸ್​ ಹೋಗುತ್ತಿದ್ದ ಸಂಸದ ಮುನಿಸ್ವಾಮಿ ವಾಪಸ್​ ಶಾಸಕ ನಾರಾಯಣಸ್ವಾಮಿ ಕಡೆ ಬರಲು ಯತ್ನಿಸಿದರು. ಆಗ ಕೋಲಾರ ಎಸ್​ಪಿ ನಾರಾಯಣ್,​​ ಸಂಸದ ಎಸ್​ ಮುನಿಸ್ವಾಮಿ ಅವರನ್ನು ವೇದಿಕೆಯಿಂದ ಹೊರಗೆ ಕರೆದುಕೊಂಡು ಹೋದರು. ಸಾಕಷ್ಟು ತಳ್ಳಾಟ ನೂಕಾಟ ಜೊತೆಗೆ ಕಾರ್ಯಕ್ರಮದ ವೇದಿಕೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಸಚಿವ ಸುರೇಶ್ ಮಧ್ಯ ಪ್ರವೇಶ ಮಾಡಿ ಇಬ್ಬರನ್ನೂ ಸಮಾಧಾನ ಪಡಿಸುವ ಪ್ರಯತ್ನ ಮಾಡಿದರೂ ಪ್ರಯೋಜನೆವಾಗಲಿಲ್ಲ. ನಂತರ ಕೆಲಹೊತ್ತಿನ ನಂತರ ಮತ್ತೆ ಸಂಸದ ಮುನಿಸ್ವಾಮಿ ಅವರು ವೇದಿಕೆ ಮೇಲೆ ಬಂದು, ಸಚಿವ ಸುರೇಶ್ ಎದುರು ತಮ್ಮ ಅಹವಾಲು ಹೇಳಿದ್ರು. ನಾನು ಯಾರನ್ನೂ ಟಾರ್ಗೆಟ್​ ಮಾಡಿ ಭೂಗಳ್ಳರು ಎಂದು ಹೇಳಿಲ್ಲ. ಅವರೇ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುವ ರೀತಿ ಕೂಗಾಡಿದರು ಎಂದರು.

ಇನ್ನು ವೇದಿಕೆಯಲ್ಲಿ ಸಚಿವರ ಪಕ್ಕದಲ್ಲೇ ಇದ್ದ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಕೂಡಾ ತಮ್ಮ ಆಕ್ರೋಶ ಹೊರಹಾಕಿದರು. ನಾನು ಒಂದೇ ಒಂದು ಇಂಚು ಭೂಮಿಯನ್ನು ಒತ್ತುವರಿ ಮಾಡಿಲ್ಲ, ಕಬಳಿಕೆ ಮಾಡಿಲ್ಲ. ನನ್ನ ಮೇಲೆ ರಾಜಕೀಯವಾಗಿ ಸುಳ್ಳು ಕೇಸುಗಳನ್ನು ಹಾಕಿದ್ದಾರೆ. ನಾನು ಒಂದೇ ಒಂದು ಸರ್ಕಾರಿ ಭೂಮಿ ಕಬಳಿಕೆ ಮಾಡಿರುವುದನ್ನು, ಕೆರೆಯಲ್ಲಿ ಬಡಾವಣೆ ಮಾಡಿರುವುದನ್ನು ಸಾಬೀತು ಮಾಡಿದರೆ ಸಾಕು. ನಾನು ರಾಜಕೀಯವನ್ನು ಬಿಟ್ಟು ಸಂಸದ ಮುನಿಸ್ವಾಮಿ ಮನೆಯಲ್ಲಿ ಕೆಲಸಕ್ಕಿರುತ್ತೇನೆ ಎಂದು ಈಗಾಗಲೇ ಹೇಳಿದ್ದೆ. ಅದರಂತೆ ಅವರು ಕೂಡಾ ತಮ್ಮ ಮನೆಯ ವಾಚ್​ಮ್ಯಾನ್​ ಕೆಲಸ ಮಾಡುವುದಾಗಿ ಹೇಳಿದ್ದರು. ಈಗಲೂ ಹೇಳುತ್ತಿದ್ದೇನೆ ಅವರು ನನ್ನ ಮೇಲಿನ ಆರೋಪ ಸಾಬೀತು ಮಾಡಿಲ್ಲ. ಹಾಗಾಗಿ ಬಂದು ನನ್ನ ಮನೆ ವಾಚ್​ಮ್ಯಾನ್​ ಕೆಲಸ ಮಾಡಲಿ ಎಂದು ಹೇಳಿದರು.

ಒಟ್ಟಾರೆ ಜನರಿಗಾಗಿ ನಡೆಯುತ್ತಿದ್ದ ಜನತಾ ದರ್ಶನ ಕಾರ್ಯಕ್ರಮ ಶಾಸಕ ಹಾಗೂ ಸಂಸದರ ವೈಯಕ್ತಿಕ ವಿಚಾರದ ಸಲುವಾಗಿ ರಣರಂಗವಾಗಿ ಪರಿಣಮಿಸಿತು. ಅಲ್ಲಿ ಇಬ್ಬರೂ ಜನಪ್ರತಿನಿಧಿಗಳು, ಒಬ್ಬರನ್ನೊಬ್ಬರು ಪರಸ್ಪರ ನಿಂದಿಸಿಕೊಳ್ಳುತ್ತಿದ್ದರೆ, ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಿದ್ದ ಜನರಿಗಂತು ಇವರಿಬ್ಬರ ಫೈಟ್​ ದರ್ಶನವಾಗಿತ್ತು.

ಇದನ್ನೂ ಓದಿ: ಧಾರವಾಡ ಐಐಐಟಿಯಲ್ಲಿ ನೀರಿನ ಅಭಾವ: ಅಧಿಕಾರಿಗಳಿಗೆ ಶಾಸಕ ಅರವಿಂದ ಬೆಲ್ಲದ್ ಎಚ್ಚರಿಕೆ

Last Updated : Sep 25, 2023, 5:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.