ಕೋಲಾರ: ಕೆ.ಸಿ.ವ್ಯಾಲಿ ಯೋಜನೆಗೆ ಜಿಲ್ಲೆಯ ಎಲ್ಲಾ ಶಾಸಕರ, ಎಲ್ಲಾ ಪಕ್ಷದವರ ಶ್ರಮ, ಯೋಜನೆ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಸಂಸದ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದ್ರು.
ಕೋಲಾರದ ಮುಳಬಾಗಿಲು ನಗರದ ಹೊರವಲಯದಲ್ಲಿ ಸಂಸದ ಮುನಿಯಪ್ಪ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಮುಖಂಡ ಗೊವಿಂದಪ್ಪ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆ.ಸಿ.ವ್ಯಾಲಿ ಯೋಜನೆ ತಡೆಯಾಜ್ಞೆ ತೆರವು ಸಂತಸದ ವಿಚಾರ. ಕೆ.ಸಿ.ವ್ಯಾಲಿ ಯೋಜನೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಶ್ರಮವಿದೆ, ರಮೇಶ್ ಕುಮಾರ್ ಸಚಿವರಾಗಿದ್ದ ವೇಳೆ ಯೋಜನೆ ನಿರ್ವಹಣೆ ಮಾಡಿದ್ದಾರೆ. ಚುನಾವಣೆ ವೇಳೆ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಶಾಸಕ ಶ್ರೀನಿವಾಸಗೌಡರಿಗೆ ಕೆ.ಎಚ್ ಮುನಿಯಪ್ಪ ತಿರುಗೇಟು ನೀಡಿದ್ರು.