ಕೋಲಾರ: ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲಿಯೇ ಜಿಲ್ಲೆಯಲ್ಲಿ ಮೊಬೈಲ್ ಅಂಗಡಿಗಳನ್ನು ತೆರೆದ ಪರಿಣಾಮ ಜನರು ಕೊರೊನಾ ಭೀತಿ ಮರೆತು ಅಂಗಡಿಗಳಿಗೆ ಮುಗಿಬಿದ್ದಿದ್ದ ದೃಶ್ಯ ಕಂಡು ಬಂತು.
ತಾಲೂಕಿನ ವೇಮಗಲ್ನಲ್ಲಿ ಮೊಬೈಲ್ ಖರೀದಿ ಹಾಗೂ ರೀಚಾರ್ಚ್ಗಾಗಿ ಜನರು ಮುಗಿಬಿದ್ದಿದ್ದದ್ದರು. ಇನ್ನು ಮೊಬೈಲ್ ಹಾಗೂ ರೀಚಾರ್ಜ್ ಮಳಿಗೆಗಳಿಗೆ ಸರ್ಕಾರ ಅನುಮತಿ ನೀಡಿದ್ದೇ ತಡ ಅಂಗಡಿಗಳು ಮುಂದೆ ನೂರಾರು ಜನರು ಜಮಾಯಿಸಿದ್ದಾರೆ. ಜೊತೆಗೆ ಗ್ರಾಮದ ರಸ್ತೆಯಲ್ಲಿ ಎಂದಿಗಿಂತ ಜನರ ಸಂಖ್ಯೆ ಹೆಚ್ಚಳವಾಗಿದ್ದು, ಯಾರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಕೆಲವರು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸಿದ್ದರು.
ನಿನ್ನೆಯಿಂದ ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆಯಾದ ಹಿನ್ನೆಲೆ ಜನರ ಓಡಾಟ ಹೆಚ್ಚಾಗಿದೆ. ಜೊತೆಗೆ ಗ್ರೀನ್ ಜೋನ್ ಜಿಲ್ಲೆಗಳಲ್ಲೂ ಸರ್ಕಾರ ಸಡಿಲಿಕೆ ನೀಡಬಾರದಿತ್ತು ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.