ETV Bharat / state

ಚಿಕ್ಕಮ್ಮನ ಅಕ್ರಮ ಸಂಬಂಧ ಕಂಡ ಬಾಲಕಿ... ಮಗುವನ್ನು ಸುಟ್ಟುಹಾಕಿದ ರಾಕ್ಷಸ!

ಅಪಹರಣವಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ತಮ್ಮ ಅಕ್ರಮ ಸಂಬಂಧ ಬಯಲಾಗಿ ಬಿಡುತ್ತದೆ ಎಂದು ಮೂರು ವರ್ಷದ ಬಾಲಕಿಯನ್ನು ಕೊಂದು ಸುಟ್ಟು ಹಾಕಿರುವಂತಹ ಅಮಾನವೀಯ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

author img

By

Published : Apr 14, 2019, 7:23 PM IST

ಕೊಲೆಗಾರ ಮುನಿರಾಜು ಹಾಗೂ ಬಾಲಕಿ ಶವ

ಕೋಲಾರ: ಅಪಹರಣವಾಗಿದ್ದ ಮೂರು ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ಕೋಲಾರದಲ್ಲಿ ನಡೆದಿದೆ.

ಜಿಲ್ಲೆಯ ಮಾಲೂರು ತಾಲೂಕು ಹುಲ್ಕೂರು ಗ್ರಾಮದಲ್ಲಿ ಈ ಘಟನೆ ಜರುಗಿದೆ. ವೇದ(3) ಕೊಲೆಯಾಗಿರುವ ಬಾಲಕಿ. ಗುರುವಾರ ಸಂಜೆ ವೇದ ಕಾಣೆಯಾಗಿದ್ದಳು. ಇಂದು ಶವವಾಗಿ‌ ಪತ್ತೆಯಾಗಿದ್ದಾಳೆ. ಇದೇ ಗ್ರಾಮದ ಮುನಿರಾಜು ಎಂಬಾತ ಈ ಕೃತ್ಯ ಎಸಗಿದ್ದು ಮಾಲೂರು ಪೊಲೀಸರು ಈತನನ್ನ ಬಂಧಿಸಿದ್ದಾರೆ.

death
ಕೊಲೆಯಾದ ಬಾಲಕಿ ವೇದ

ಮುನಿರಾಜು ಹಾಗೂ ಕೊಲೆಯಾದ ಮಗುವಿನ ಚಿಕ್ಕಮ್ಮನಿಗೆ ಅಕ್ರಮ ಸಂಬಂಧವಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಇಬ್ಬರು ಅಕ್ರಮ ಸಂಬಂಧ ನಡೆಸುತ್ತಿದ್ದರು. ಅದನ್ನು ಬಾಲಕಿ ವೇದ ನೋಡಿದ್ದಳಂತೆ. ಹೀಗಾಗಿ ತಮ್ಮ ಅಕ್ರಮ ಸಂಬಂಧ ಬಟಾಬಯಲಾಗುತ್ತೆ ಅಂದುಕೊಂಡು ಮುನಿರಾಜು ಮಗುವನ್ನ ಕೊಲೆ ಮಾಡಿದ್ದಾನೆ. ಗುರುವಾರ ರಾತ್ರಿ ವೇದಳನ್ನು ಅಪಹರಿಸಿದ್ದ ಈತ ಗ್ರಾಮದ ಸಮೀಪದ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಕೊಲೆ ಮಾಡಿದ ಬಳಿಕ ಶವವನ್ನ ಸುಟ್ಟುಹಾಕಿ, ತಲೆಮರೆಸಿಕೊಂಡಿದ್ದ.

ಆರೋಪಿ ಮುನಿರಾಜುವನ್ನು ಮಾಲೂರು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಲಾಗಿದೆ.

Intro:ಕೋಲಾರ
ದಿನಾಂಕ - 14-03-19
ಸ್ಲಗ್ - ಮಗು ಕೊಲೆ
ಫಾರ್ಮೆಟ್ - ಎವಿ

ಆಂಕರ್: ಅಪಹರಣವಾಗಿದ್ದ ಮೂರು ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಲ್ಕೂರಿನ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಮೂರು ವರ್ಷದ ವೇದ ಗುರುವಾರ ಸಂಜೆ ಕಾಣೆಯಾಗಿದ್ಸ ಮಗು ಕೊಲೆಯಿಂದ ಶವವಾಗಿ‌ಪತ್ತೆಯಾಗಿದ್ದಾಳೆ. ಇನ್ನು ಇದೇ ಗ್ರಾಮದ ಮುನಿರಾಜು ಎಂಬಾತ ಈ ಕೃತ್ಯ ಎಸಗಿದ್ದು ಮಾಲೂರು ಪೊಲೀಸರು ಈತನನ್ನ ಬಂಧಿಸಿದ್ದಾರೆ. ಮುನಿರಾಜು ಹಾಗೂ ಕೊಲೆಯಾದ ಮಗುವಿನ ಚಿಕ್ಕಮ್ಮನಿಗೆ ಅಕ್ರಮ ಸಂಭಂದವಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಇಬ್ಬರು ಅಕ್ರಮ ಸಂಭಂದ ನಡೆಸುತ್ತಿದ್ದದ್ದನ್ನ ನೋಡಿದ್ದಾಳೆ. ಈ ಹಿನ್ನಲೆ ಮಗುವನ್ನ ಕೊಲೆ ಮಾಡಿದ್ದಾನೆ. ಗುರುವಾರ ರಾತ್ರಿ ಮಗುವನ್ನ ಅಪಹರಿಸಿದ ಈತ ಗ್ರಾಮದ ಸಮೀಪದ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಕೊಲೆ ಮಾಡಿದ ಬಳಿಕ ಶವವನ್ನ ಸುಟ್ಟುಹಾಕಿದ್ದಾನೆ. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಮುನಿರಾಜುವನ್ನ ಮಾಲೂರು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೆ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.Body:.Conclusion:.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.