ಕೋಲಾರ: ಲಾರಿಯನ್ನ ಅಡ್ಡಗಟ್ಟಿ ಸುಮಾರು ಆರು ಕೋಟಿ ರೂ. ಮೌಲ್ಯದ ಮೊಬೈಲ್ಗಳನ್ನ ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ನೆರ್ನಹಳ್ಳಿ ಬಳಿ ನಡೆದಿದೆ.
ಕಳೆದ ರಾತ್ರಿ ಮೊಬೈಲ್ಗಳನ್ನು ಹೊತ್ತ ಲಾರಿ ತಮಿಳುನಾಡಿನ ಕಾಂಚೀಪುರಂನಿಂದ ಬೆಂಗಳೂರಿಗೆ ಸಾಗುತ್ತಿತ್ತು. ಮುಳಬಾಗಿಲು ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ದೇವರಾಯನ ಸಮುದ್ರದ ಬಳಿ ಲಾರಿ ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಲಕನನ್ನು ಥಳಿಸಿ, ಬಾಯಿಗೆ ಬಟ್ಟೆ ಇಟ್ಟು ಲಾರಿ ಸಮೇತ ಪರಾರಿಯಾಗಿದ್ದರು. ನಂತರ ನೆರ್ನಹಳ್ಳಿ ಗೇಟ್ ಬಳಿ ಲಾರಿಯಲ್ಲಿ ನಿಲ್ಲಿಸಿ ಇನ್ನೊಂದು ಟ್ರಕ್ಗೆ ಸರಕು ಸಾಗಿಸಿ ಅಲ್ಲಿಂದ ಪರಾರಿಯಾಗಿದ್ದರು.
ಇಂದು ಮದ್ಯಾಹ್ನ ಲಾರಿಯ ಬಳಿ ಹೋದ ಸಾರ್ವಜನಿಕರಿಗೆ ಚಾಲಕನನ್ನ ಕಟ್ಟಿಹಾಕಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಂ.ಐ. ಕಂಪನಿಗೆ ಸೇರಿದ ಸುಮಾರು ಆರು ಕೋಟಿ ರೂ. ಮೌಲ್ಯದ ಮೊಬೈಲ್ಗಳು ಕಳುವಾಗಿವೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಸೇರಿದಂತೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.