ETV Bharat / state

ಸೂರತ್​ನಿಂದ ಬಂದ 44 ಮಂದಿ: ಗ್ರೀನ್​ ಝೋನ್​ ಕೋಲಾರದಲ್ಲಿ ಹೆಚ್ಚಿದ ಆತಂಕ - ಜಿಲ್ಲಾಧಿಕಾರಿ ಸತ್ಯಭಾಮ

ಲಾಕ್​ಡೌನ್​ನಿಂದಾಗಿ ಸೂರತ್​ನಲ್ಲಿ ಸಿಲುಕಿಕೊಂಡಿದ್ದ ಮಾಲೂರು ಮೂಲದ 44 ಮಂದಿ ಕೋಲಾರ ಜಿಲ್ಲೆ ಆಗಮಿಸಿದ್ದು, ಅವರನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ ಮಾಡಲಾಗಿದೆ.

Morarji Desai Residential School
ಮೊರಾರ್ಜಿ ದೇಸಾಯಿ ವಸತಿ ಶಾಲೆ
author img

By

Published : May 3, 2020, 11:13 AM IST

ಕೋಲಾರ: ಹಸಿರು ವಲಯ ಎಂದು ಗುರುತಿಸಿಕೊಂಡಿರುವ ಕೋಲಾರ ಜಿಲ್ಲೆಗೆ ಸೂರತ್​ನಿಂದ 44 ಮಂದಿ ಬಂದ ಪರಿಣಾಮ ಜನರಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ.

ಕೋಲಾರ ಜಿಲ್ಲೆ ಮಾಲೂರು ಮೂಲದ ಸುಮಾರು 44 ಮಂದಿ ಕರೊನಾ ಲಾಕ್ ಡೌನಿಂದಾಗಿ ಸೂರತ್ ನಲ್ಲಿ ಸಿಲುಕಿಕೊಂಡಿದ್ದರು. ಇದೀಗ ಸೂರತ್ ನಿಂದ ಬಂದಿಳಿದಿರುವ 44 ಮಂದಿಗೆ ಜಿಲ್ಲೆಯ ಗಡಿಯಲ್ಲಿ ರ್ಯಾಪಿಡ್ ಟೆಸ್ಟ್ ಮಾಡಲಾಗುತ್ತಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆ

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕಟ್ಟಿಗೇನಹಳ್ಳಿ ಗಡಿಯಲ್ಲಿ 44 ಮಂದಿಯನ್ನ ತಪಾಸಣೆ ಮಾಡಲಿದ್ದು, ತಪಾಸಣೆಯ ನಂತರ ಹಾಸ್ಟೆಲ್ ವೊಂದರಲ್ಲಿ ಕ್ವಾರಂಟೈನ್​ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಅದರಂತೆ ಮಾಲೂರು ತಾಲೂಕಿನ ರಾಜೇನಹಳ್ಳಿ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇವರನ್ನು ಕ್ವಾರಂಟೈನ್ ಮಾಡಲಾಗಿದೆ.

ಇನ್ನು ಕೊರೊನಾ ಹಾಟ್ ಸ್ಪಾಟ್ ಗುಜರಾತ್ ನಿಂದ ಬಂದಿರುವರನ್ನ ಕ್ವಾರಂಟೈನ್ ಮಾಡಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ವಸತಿ ಶಾಲೆಯ ಸುತ್ತಲೂ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಇನ್ನು ಜಿಲ್ಲಾಧಿಕಾರಿ ಸತ್ಯಭಾಮ, ಎಸಿ ಸೋಮಶೇಖರ್ ಡಿ.ಎಚ್.ಓ ವಿಜಯ್ ಕುಮಾರ್ ಸೇರಿದಂತೆ ಪೊಲೀಸರು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.