ಕೋಲಾರ: ಸ್ಥಳೀಯರ ವಿರೋಧದ ನಡುವೆಯೂ ಐಸೋಲೇಶಷನಲ್ಲಿದ್ದ ಇಪ್ಪತ್ತು ಜನರಿಗೆ ಕೋಲಾರದ ವಸತಿ ಶಾಲೆಯೊಂದರಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ.
ದೆಹಲಿ ಮೂಲದ 20 ಜನ ಧರ್ಮ ಪ್ರಚಾರಕರಿಗೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಳೇಸಂದ್ರದ ಬಳಿ ಇರುವಂತಹ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ.
ಇನ್ನು ನಿನ್ನೆಯಿಂದ ಕೋಲಾರದ ಎರಡು ಭಾಗದಲ್ಲಿ ಐಸೋಲೇಷನ್ನಲ್ಲಿದ್ದ ದೆಹಲಿ ಧರ್ಮ ಪ್ರಚಾರಕರಿಗೆ ಕ್ವಾರಂಟೈನ್ ಮಾಡಲು ಅಧಿಕಾರಿಗಳು ಮುಂದಾಗಿದ್ದರು ಆದರೆ, ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸುವುದರೊಂದಿಗೆ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಐಸೋಲೇಷನ್ ನಲ್ಲಿದ್ದವರನ್ನ ಕರೆದುಕೊಂಡು ಹೋಗುವ ದಾರಿಯನ್ನ ಬಂದ್ ಮಾಡಿ ದಾರಿಗೆ ಅಡ್ಡಲಾಗಿ ಕಲ್ಲುಮುಳ್ಳುಗಳನ್ನ ಹಾಕಿ ವಿರೋಧ ವ್ಯಕ್ತಪಡಿಸಿದ್ರು. ಇದರಿಂದಾಗಿ ಅಧಿಕಾರಿಗಳು ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೆ ಕ್ವಾರಂಟೈನ್ನಲ್ಲಿಡಲು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.
ಇಂದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಎಳೆಸಂದ್ರ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ, 20 ಜನರಿಗೆ ಕ್ವಾರಂಟೈನ್ ಮಾಡಲಾಗುತ್ತಿದೆ. ಅಲ್ಲದೆ ಮುನ್ನಚ್ಚರಿಕೆ ಕ್ರಮವಾಗಿ ವಸತಿ ಶಾಲೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.