ಕೊಡಗು : ಜಿಲ್ಲೆಯಲ್ಲಿ ಕಾಡಾನೆಗಳು ಕಾಡಿಗಿಂತ ನಾಡಿನಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ರಸ್ತೆಯಲ್ಲಿ ಓಡಾಡುವ ಜನರಲ್ಲಿ ಆತಂಕ ಹೆಚ್ಚಾಗಿದೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಐಗೂರು ಬಳಿಯ ರಾಜ್ಯದ ಹೆದ್ದಾರಿಯಲ್ಲಿ ಇಂದು ಮುಂಜಾನೆ ಎರಡು ಕಾಡನೆಗಳು ರಸ್ತೆಯಲ್ಲಿಯೇ ನಡೆದುಕೊಂಡು ಪಕ್ಕದ ತೋಟಕ್ಕೆ ಹೋಗಿವೆ.
ರಸ್ತೆಯಲ್ಲಿ ಹೋಗುತ್ತಿದ್ದ ಆನೆಗಳನ್ನ ನೋಡಿದ ಜನರು ಗಾಬರಿಗೊಂಡು ಹಿಂದಕ್ಕೆ ಹೋಗಿ ಮೊಬೈಲ್ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ.
ಆನೆಗಳು ರಸ್ತೆಯಲ್ಲಿದ್ದ ಕಾರಣ ಕೆಲ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ರಸ್ತೆಯಲ್ಲಿ ಅಡ್ಡಾಡುವ ಕಾಡಾನೆಗಳು ಆಹಾರ ಅರಸಿ ಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತ ಬೆಳೆಗಳನ್ನು ನಾಶಮಾಡುತ್ತಿವೆ. ಇದರಿಂದ ಜೀವ ಭಯದಲ್ಲಿಯೇ ಇಲ್ಲಿನ ಸ್ಥಳೀಯರು ಜೀವನ ನಡೆಸುವಂತಾಗಿದೆ.