ಕೊಡಗು: ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರೋ ಧಾರಾಕಾರ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಉಂಟಾಗಿದೆ.
ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮೆಟ್ಟಿಲಿನ ಮೇಲೂ ನೀರು ನುಗ್ಗಿದ್ದು, ದೇವಾಲಯ ಸಂಪೂರ್ಣ ಜಲಾವೃತವಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಒಂದೆಡೆಯಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಸ್ಥಳೀಯರು ಬೋಟ್ ಆಶ್ರಯಿಸಿದ್ದಾರೆ.
ಮತ್ತೊಂದೆಡೆ ಮಳೆ ಅಬ್ಬರಕ್ಕೆ ಕೇರಳ ಸಂಪರ್ಕ ರಸ್ತೆ ಕುಸಿಯುವ ಭೀತಿಯಲ್ಲಿದೆ. ಮಡಿಕೇರಿ-ಭಾಗಮಂಡಲ ಕರಿಕೆ ಮೂಲಕ ಕೇರಳಕ್ಕೆ ಪರ್ಯಾಯ ಮಾರ್ಗವಿದ್ದು, ಕರಿಕೆ ಗ್ರಾಮದ ಬಳಿ ರಸ್ತೆ ಬದಿಯ ಮಣ್ಣು ಕುಸಿಯುತ್ತಿದೆ.
ಕೊಡಗು ಮೂಲಕ ಕೇರಳಕ್ಕೆ ಒಟ್ಟು ಮೂರು ರಸ್ತೆಗಳಿದ್ದು, ವಾರದ ಹಿಂದಷ್ಟೆ ಮಾಕುಟ್ಟ-ಕೇರಳ ರಸ್ತೆ ಕುಸಿದು ಬಂದ್ ಆಗಿದೆ. ಸದ್ಯ ಕರಿಕೆ-ಕೇರಳ ಸಂಪರ್ಕ ರಸ್ತೆಯೂ ಕುಸಿಯುತ್ತಿದೆ. ರಸ್ತೆ ಕುಸಿದ್ರೇ ಎರಡೂ ರಾಜ್ಯಗಳಿಗ ಸಂಪರ್ಕ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಎನ್‌ಹೆಚ್-275 ಕುಸಿದರೆ ಮಂಗಳೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಕರಿಕೆ-ಕೇರಳ ರಸ್ತೆಯೂ ಬಂದ್ ಆಗಲಿದೆ. ಆದರೆ, ಆ ಪ್ರಮುಖ ರಸ್ತೆಯೂ ಕುಸಿಯುವ ಭೀತಿಯಲ್ಲಿದೆ. ಸದ್ಯ ಎನ್.ಹೆಚ್- 275 ರಸ್ತೆ ಕುಸಿಯುವ ಆತಂಕದಲ್ಲಿದೆ. ವರುಣನ ಅಬ್ಬರಕ್ಕೆ ಕೊಡಗಿನ ರಸ್ತೆಗಳೂ ಕೊಚ್ಚಿಕೊಂಡು ಹೋಗ್ತಿವೆ.