ಕೊಡಗು: ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಹುಡುಕಲು ಹೋಗಿದ್ದ ವ್ಯಕ್ತಿಗೆ ಗ್ರಾಮಸ್ಥರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ವಿರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದಲ್ಲಿ ಕೇಳಿಬಂದಿದೆ.
ಬೆಟೋಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಫಾರೂಕ್ಗೆ ವಿರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮಸ್ಥರು ಥಳಿಸಿರುವ ಆರೋಪ ಕೇಳಿ ಬಂದಿದೆ.
ಏ. 5ರಂದು ಹಸು ವ್ಯಾಪಾರಕ್ಕೆ ಹೋಗಿದ್ದ ಮೂಸ ಎಂಬುವರು ನಾಪತ್ತೆಯಾಗಿದ್ದರು. ಮೂಸ ನಾಪತ್ತೆಯಾಗಿರುವ ಕುರಿತು ಅವರ ಮಕ್ಕಳು ದೂರು ನೀಡಿದ್ದರು. ಇಂದು ಬಾಳುಗೋಡಿನಲ್ಲಿ ಮೂಸ ಇರುವ ಬಗ್ಗೆ ವಿಚಾರಿಸಲು ಹೋಗಿದ್ದ ಬೆಟೋಳ್ಳಿ ಪಂಚಾಯಿತಿ ಸದಸ್ಯ ಫಾರೂಕ್ ಮೇಲೆ ಬಾಳುಗೋಡು ಗ್ರಾಮದವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ತೀವ್ರವಾಗಿ ಗಾಯಗೊಂಡ ಫಾರೂಕ್ಗೆ ವಿರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸಂಬಂಧ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.