ಕೊಡಗು: ಜಿಲ್ಲೆಯಲ್ಲಿ ಒಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗುತ್ತಿದ್ದಂತೆ ಇಡೀ ಜಿಲ್ಲೆಯೇ ಸಂಪೂರ್ಣ ಸ್ಥಬ್ಧವಾಗಿದ್ದು,ಕೊಡಗು ಜಿಲ್ಲಾಡಳಿತ ಹಾಪ್ ಕಾಮ್ಸ್ ನೇತೃತ್ವದಲ್ಲಿ ಮನೆ ಮನೆಗೆ ತರಕಾರಿಗಳನ್ನು ಪೂರೈಕೆ ಮಾಡುತ್ತಿದೆ.
ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ಜನರಿಗೆ ಜಿಲ್ಲಾಡಳಿತವೇ ದಿನಸಿ ವಸ್ತುಗಳ ಮಾರಾಟ ಮತ್ತು ಕೊಳ್ಳುವಿಕೆಗೆ ವ್ಯವಸ್ಥೆ ಮಾಡಿಕೊಟ್ಟಿದೆ. ಹಾಗೆಯೇ ಗ್ರಾಮೀಣ ಪ್ರದೇಶದ ಜನರಿಗೂ ಅಗತ್ಯ ವಸ್ತುಗಳು ಮತ್ತು ತರಕಾರಿಗಳಿಗೆ ಸಮಸ್ಯೆ ಆಗದಂತೆ ಕೊಡಗು ಜಿಲ್ಲಾಡಳಿತ ಹಾಪ್‌ಕಾಮ್ಸ್ ನೇತೃತ್ವದಲ್ಲಿ ಮನೆ ಮನೆಗೆ ತರಕಾರಿಗಳನ್ನು ಪೂರೈಕೆ ಮಾಡುತ್ತಿದೆ.
ಎಪಿಎಂಸಿಯಿಂದಲೇ ಹಣ್ಣು-ತರಕಾರಿಗಳನ್ನು ಖರೀದಿ ಮಾಡುತ್ತಿರುವ ಹಾಪ್‌ಕಾಮ್ಸ್ ಸಿಬ್ಬಂದಿ, ಎಪಿಎಂಸಿ ಬೆಲೆಯಲ್ಲೇ ಜನರಿಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯತ್‌ಗಳಿಗೆ ಎರಡು ವಾಹನಗಳಲ್ಲಿ ತರಕಾರಿ ಸರಬರಾಜು ಮಾಡಲಾಗುತ್ತಿದೆ. ಲಾಕ್‌ಡೌನ್ ಆಗಿದ್ದರೂ ಗ್ರಾಮೀಣ ಭಾಗದ ಜನರು ಯಾವುದೇ ತೊಂದರೆ ಇಲ್ಲದಂತೆ ತರಕಾರಿಗಳನ್ನು ಕೊಳ್ಳುತ್ತಿದ್ದಾರೆ.