ETV Bharat / state

ಕೊಡವ ಸಾಹಿತ್ಯ ಅಕಾಡೆಮಿಗೆ ಬೆಳ್ಳಿ ಹಬ್ಬದ ಸಂಭ್ರಮ - undefined

ಕೊಡವ ಸಾಹಿತ್ಯ ಅಕಾಡೆಮಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎರಡು ದಿನ ಸಾಹಿತ್ಯ ಬೆಳ್ಳಿಹಬ್ಬ ಆಚರಿಸಲಾಗುತ್ತಿದೆ.

ಕೊಡವ ಸಾಹಿತ್ಯ ಅಕಾಡೆಮಿಗೆ ಬೆಳ್ಳಿ ಹಬ್ಬದ ಸಂಭ್ರಮ
author img

By

Published : Jun 8, 2019, 7:32 PM IST

ಕೊಡಗು: ಕೊಡವರ ಭಾಷೆ, ಕಲೆ, ಸಂಸ್ಕೃತಿಯ ಉಳಿವಿಗೆ ಸ್ಥಾಪನೆಯಾದ ಕೊಡವ ಸಾಹಿತ್ಯ ಅಕಾಡೆಮಿಗೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ. ಇಲ್ಲಿನ ಸಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ ಮಿಂಚಿದ ಕೊಡವರು ಬೆಳ್ಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಕೊಡವ ಸಾಹಿತ್ಯ ಅಕಾಡೆಮಿಗೆ ಬೆಳ್ಳಿ ಹಬ್ಬದ ಸಂಭ್ರಮ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ತಾಲೂಕಿನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ 25 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ವೇದಿಕೆ ಕೊಡಗಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿತ್ತು. ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟ ಕೊಡವರ ಮೆರವಣಿಗೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಚಾಲನೆ ನೀಡಿದರು.

ಕೊಡಗಿನ ಮೂಲ ನಿವಾಸಿಗಳಾದ ಕಾಪಾಳ ಜನಾಂಗದ ಮೆರವಣಿಗೆ ಹಾಗೂ ಇದೇ ಮೊದಲ ಬಾರಿಗೆ ಕೇರಳ ಮೂಲದ ಅಜ್ಜಪ್ಪತೆರೆಯನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿತ್ತು. ಗೋಣಿಕೊಪ್ಪದ ಮುಖ್ಯ ರಸ್ತೆಯಿಂದ ಕಾವೇರಿ ಕಾಲೇಜಿನವರೆಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಹೆಜ್ಜೆ ಹಾಕಿದವು. ಕಾವೇರಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಭಾ ವೇದಿಕೆಯಲ್ಲಿ ಸ್ಥಳೀಯ ಆಚಾರ- ವಿಚಾರ, ಕಲೆ, ಸಾಹಿತ್ಯ ಬಿಂಬಿಸುವ ಬೊಳ್ಕಾಟ್, ಉಮ್ಮತ್ತಾಟ್, ಉರುಟ್ಟಿಕೊಟ್ಟಾಟ್, ಕತ್ತಿಯಾಟ್ ಹಾಗೂ ಪರೆಯಕಳಿ, ಚೌರಿಯಾಟ್ ಸೇರಿದಂತೆ ಹಲವು ನೃತ್ಯ ರೂಪಕಗಳು ನೆರೆದಿದ್ದ ಕಲಾ ರಸಿಕರನ್ನು ರಂಜಿಸಿದವು.

ಪೂರ್ವಜರು ಬಿಟ್ಟು ಹೋಗಿರುವ ಕಲೆ, ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುತ್ತಿದ್ದೇವೆ. ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಪದ್ಧತಿ ಇರುತ್ತದೆ. ಕೊಡಗಿನ ಸಾಂಪ್ರದಾಯಿಕ ನೃತ್ಯಗಳು, ಪೂರ್ವಜರು ಬಳಸುತ್ತಿದ್ದ ಪರಿಕರಗಳು ಮತ್ತು ಅಪರೂಪದ ಚಿತ್ರಕಲೆಗಳನ್ನು ವಸ್ತುಪ್ರದರ್ಶನಕ್ಕೆ ಇಡಲಾಗಿದೆ. ಕೊಡವ ಸಾಹಿತ್ಯ ಪ್ರಾರಂಭವಾಗಿ 25 ವರ್ಷಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಉತ್ಸವದ ರೀತಿ ಎರಡು ದಿನ ಸಾಹಿತ್ಯದ ಬೆಳ್ಳಿಹಬ್ಬ ಆಚರಿಸುತ್ತಿದ್ದೇವೆ. ಬೆಳ್ಳಿಹಬ್ಬಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ಕೇಳಿದ್ದೆವು. ಚುನಾವಣಾ ಪ್ರಕ್ರಿಯೆ ಇದ್ದಿದ್ದರಿಂದ ನೆರವೇರಲಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗೆ ವಿರಾಜಪೇಟೆ ತಾಲೂಕಿನ ಬಳಿ 10 ಎಕರೆ ಜಾಗದಲ್ಲಿ ಸಾಂಸ್ಕೃತಿಕ ಗ್ರಾಮ ನಿರ್ಮಿಸಲು ಸ್ಥಳಾವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದೇವೆ ಎಂದು ಕೊಡವ ಅಕಾಡೆಮಿ ಅಧ್ಯಕ್ಷ ಕೆ.ಪೊನ್ನಪ್ಪ ತಿಳಿಸಿದ್ದಾರೆ.

Intro:ಎರಡು ದಿನಗಳು ಕೊಡವ ಬೆಳ್ಳಿಹಬ್ಬದ ಸಂಭ್ರಮ 

ಕೊಡಗು: ಕರ್ನಾಟಕದ ಕಾಶ್ಮೀರ...ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯಲ್ಲಿ ಸೌಂದರ್ಯ ರಾಶಿಯನ್ನೇ ಹೊದ್ದು ಮಲಗಿರುವ ಜಿಲ್ಲೆ..ಆಧುನಿಕತೆ ಅಬ್ಬರದ ನಡುವೆಯೂ ತನ್ನ ಮೂಲ ಸಂಸ್ಕೃತಿಗೆ ಕಿಂಚಿತ್ತೂ ಚ್ಯುತಿ ಬಾರದಂತೆ ಕಾಪಾಡಿಕೊಂಡು ಬಂದಿರುವ ಜನತೆ. ಇವೆಲ್ಲವುದಕ್ಕೂ ಸಾಕ್ಷಿಯಾಗಿರುವುದು ಮಂಜಿನ ನಗರಿ ಕೊಡಗು. 
ಭೂ ಲೋಕದ ಸ್ವರ್ಗ ಮಂಜಿನ ನಗರಿ ಕೊಡಗು‌..ಪ್ರವಾಸಿಗರ ಬ್ಯೂಟಿ ಸ್ಪಾಟ್...ಕೊಡಗಿನ ಕಲೆ, ಸ್ವಾಭಿಮಾನ...ಕೊಡವರ ಭಾಷೆ , ಕಲೆ, ಸಂಸ್ಕೃತಿಯ ಉಳಿವಿಗೆ ಸ್ಥಾಪನೆಯಾದ ಕೊಡವ ಸಾಹಿತ್ಯ ಅಕಾಡೆಮಿಗೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ..ಇಲ್ಲಿನ ಸಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ ಮಿಂಚಿದ್ದ ಕೊಡವರು ಬೆಳ್ಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಸಂತಸ ಪಟ್ಟರು. 
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ತಾಲೂಕಿನಲ್ಲಿ ಕೊಡವ ಸಾಹಿತ್ಯ ಇಪ್ಪತೈದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆ ಕೊಡಗಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿತ್ತು.
ಸಾಂಪ್ರದಾಯಿಕ- ಉಡುಗೆಗಳನ್ನು ತೊಟ್ಟ ಕೊಡವರ ಮೆರವಣಿಗೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಮೆರವಣಿಗೆಗೆ ಚಾಲನೆ ನೀಡಿದರು.ಕೊಡಗಿನ ಮೂಲ ನಿವಾಸಿಗಳಾದ ಕಾಪಾಳ ಜನಾಂಗದ ಮೆರವಣಿಗೆ ಹಾಗೂ ಇದೇ ಮೊದಲ ಬಾರಿಗೆ ಕೇರಳ ಮೂಲದ ಅಜ್ಜಪ್ಪತೆರೆಯನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿತ್ತು. ಗೋಣಿಕೊಪ್ಪದ ಮುಖ್ಯರಸ್ತೆಯಿಂದ ಕಾವೇರಿ ಕಾಲೇಜಿನವರೆಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಹೆಜ್ಜೆ ಹಾಕಿದವು. 
ಕಾವೇರಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಭಾ ವೇದಿಕೆಯಲ್ಲಿ ಸ್ಥಳೀಯ ಆಚಾರ- ವಿಚಾರ, ಕಲೆ,ಸಾಹಿತ್ಯ ಬಿಂಬಿಸುವ ಬೊಳ್ಕಾಟ್, ಉಮ್ಮತ್ತಾಟ್, ಉರುಟ್ಟಿಕೊಟ್ಟಾಟ್, ಕತ್ತಿಯಾಟ್ ಹಾಗೂ ಪರೆಯಕಳಿ, ಚೌರಿಯಾಟ್ ಸೇರಿದಂತೆ ಹಲವು ನೃತ್ಯ ರೂಪಕಗಳು ನೆರೆದಿದ್ದ ಕಲಾ ರಸಿಕರನ್ನು ರಂಜಿಸಿದವು. 
ಬೆಳ್ಳಿಹಬ್ಬದ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಮತ್ತು ಫೈಬರ್ ವಸ್ತುಗಳನ್ನೇ ನಾಚಿಸುವಂತೆ ಹಳೆ ಕಾಲದಲ್ಲಿ ಬಳಸುತ್ತಿದ್ದ 
ಕೊರಂಬ ಕೊಡೆ, ಸೇಕಲ , ಪೊಡಿ ತಟ್ಟೆ, ಮಂಡಪೊಡ, ಬಾಲುರುಳಿ, ತಕಡೆ, ಮರದ ಮುಕ್ಕಲಿ, ಕುತ್ತೊಂಗುಳೆ, (ಮಿನು ಹಿಡಿಯುವ) ನೇಗುಲು, ತುಪಾಕಿ, ತೊರಬೆತ್ತದ ಕೈಚಿಲ‌, ನೂರು ವರ್ಷದ ಬೆತ್ತದ ಪೆಟ್ಟಿಗೆ,‌ ತೊರಪೊಟ್ಟಿ ವಸ್ತುಗಳು ಆಕರ್ಷಣೆಯಿಂದ ಕೂಡಿದ್ದವು. 
ಪೂರ್ವಜರು ಬಿಟ್ಟು ಹೋಗಿರುವ ಕಲೆ,ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ನಾವು ಪರಿಚಯಿಸುತ್ತಿದ್ದೇವೆ. ಪ್ರತಿಯೊಂದು ಜಾತಿಗೂ ತನ್ನದೇ ಪದ್ದತಿಗಳಿರುತ್ತವೆ. ಕೊಡಗಿನ ಸಾಂಪ್ರದಾಯಿಕ ನೃತ್ಯಗಳು, ಪೂರ್ವಜರು ಬಳಸುತ್ತಿದ್ದ ಪರಿಕರಗಳು ಮತ್ತು ಅಪರೂಪದ ಚಿತ್ರಕಲೆಗಳನ್ನು ವಸ್ತುಪ್ರದರ್ಶನಕ್ಕೆ ಇಡಲಾಗಿ್ದೆದೆ ಎಂದರು. 
ಕೊಡವ ಸಾಹಿತ್ಯ ಪ್ರಾರಂಭವಾಗಿ ಇಪ್ಪತೈದು ವರ್ಷಗಳು ಪೂರೈಸಿದೆ. ಈ ಹಿನ್ನಲೆಯಲ್ಲಿ ಉತ್ಸವದ ರೀತಿ ಎರಡು ದಿನಗಳು ಸಾಹಿತ್ಯದ ಬೆಳ್ಳಿಹಬ್ಬ ಆಚರಿಸುತ್ತಿದ್ದೇವೆ. ಬೆಳ್ಳಿಹಬ್ಬಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ಕೇಳಿದ್ದೆವು. ಚುನಾವಣಾ ಪ್ರಕ್ರಿಯೆ ಇದ್ದುದ್ದರಿಂದ ಅದು ನೆರವೇರಲಿಲ್ಲ.ಈಗಾಗಲೇ ಜಿಲ್ಲಾಧಿಕಾರಿಗೆ ವಿರಾಜಪೇಟೆ ತಾಲೂಕಿನ ಬಳಿ 10 ಎಕರೆ ಜಾಗದಲ್ಲಿ ಸಾಂಸ್ಕೃತಿಕ ಗ್ರಾಮ ನಿರ್ಮಿಸಲು ಸ್ಥಳಾವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು. 
ಒಟ್ಟಿನಲ್ಲಿ ಆಧುನಿಕತೆ ಅಬ್ಬರದ ಅಲೆಗಳಿಗೆ ಸಿಕ್ಕಿ ಮೂಲ ಸಂಸ್ಖತಿ ಅವಸಾನದತ್ತ ಸಾಗುತ್ತಿರುವ ಇಂದು ಸಾಂಪ್ರದಾಯಿಕ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿರುವ ಕೊಡಗು ಇತರರಿಗೂ ಮಾದರಿ.‌ 

ಬೈಟ್ 1- ಫ್ರಾನ್ಸಿ ಮುತ್ತಣ್ಣ, ಕೊಡವ ಅಕಾಡೆಮಿ ಸದಸ್ಯೆ.

ಬೈಟ್ 2- ಕೆ.ಪೊನ್ನಪ್ಪ, ಕೊಡವ ಅಕಾಡೆಮಿ ಅಧ್ಯಕ್ಷ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

Body:0

Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.