ETV Bharat / state

ಕೊಡಗಿನಲ್ಲಿ ಮೂರನೇ ಸಾಕಾನೆ ಶಿಬಿರ ಲೋಕಾರ್ಪಣೆ

author img

By

Published : Oct 9, 2022, 10:49 PM IST

ಕೊಡಗಿನಲ್ಲಿನ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಮೂರನೇ ಸಾಕಾನೆ ಶಿಬಿರ ಲೋಕಾರ್ಪಣೆಗೊಂಡಿದೆ.

KN_mdk_eldphany camp
ಕೊಡಗು ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ

ಕೊಡಗು : ಪ್ರವಾಸಿಗರ ಸ್ವರ್ಗ, ಹಚ್ಚ ಹಸಿರ ಬೆಟ್ಟ ಗುಡ್ಡಗಳ ಸುಂದರ ಪ್ರಕೃತಿಯ ತವರು ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆಗೊಂಡಿದೆ. ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಕೊಡಗು ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಎಂಬಂತೆ ಕೊಡಗಿನಲ್ಲಿ ಸಾಕಾನೆ ಶಿಬಿರ ತೆರೆದಿರೋದು ಪ್ರವಾಸಿಗರಿಗೆ ಸಂತಸ ಮೂಡಿಸಿದೆ.

ಕೊಡಗು ಜಿಲ್ಲೆಯ ಕುಶಾಲನರ ತಾಲೂಕಿನ ಹಾರಂಗಿ ಜಲಾಶಯದ ಪಕ್ಕದಲ್ಲಿ ನೂತನವಾಗಿ ಹಾರಂಗಿ ವೃಕ್ಷೋದ್ಯಾನ ಮತ್ತು ಸಾಕಾನೆ‌ ಶಿಬಿರ ಲೋಕಾರ್ಪಣೆಯಾಗಿದೆ. ಇಲ್ಲಿಯವರೆಗೆ ದುಬಾರೆ ಹಾಗೂ ಮತ್ತಿಗೋಡು ಎಂಬ ಎರಡು ಸಾಕಾನೆ ಶಿಬಿರಗಳಿದ್ದವು. ದುಬಾರೆ ಸಾಕಾನೆ ಶಿಬಿರದಲ್ಲಿ ಬರೋಬ್ಬರಿ 32 ಸಾಕಾನೆಗಳಿದ್ದವು. ಆನೆಗಳ ಒತ್ತಡ ತಡೆದುಕೊಳ್ಳಲು ಶಿಬಿರಕ್ಕೆ ಆಗದ ಕಾರಣ ಮತ್ತು ಸಾಕಾನೆ ಶಿಬಿರದಲ್ಲಿ ಇಂತಿಷ್ಟೇ ಆನೆಗಳಿರಬೇಕು ಎಂಬ ಸುಪ್ರಿಂಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಕೊಡಗಿನ ಹಾರಂಗಿ ಜಲಾಶಯದ ಹಿನ್ನೀರು‌ ಪ್ರದೇಶದಲ್ಲಿ ನೂತನ ಸಾಕಾನೆ‌ ಶಿಬಿರ ತೆರೆಯಲಾಗಿದೆ. ಈಗಾಗಲೇ ದುಬಾರೆಯಿಂದ 7 ಸಾಕಾನೆಗಳನ್ನೂ ಶಿಫ್ಟ್ ಮಾಡಲಾಗಿದೆ. ಆ ಮೂಲಕ ಹಾರಂಗಿ ಸಾಕಾನೆ ಶಿಬಿರ ಕಾರ್ಯಾರಂಭ ಮಾಡಿದೆ.

ಕೊಡಗಿನಲ್ಲಿ ಮೂರನೇ ಸಾಕಾನೆ ಶಿಬಿರ ಲೋಕಾರ್ಪಣೆ

ಹಾರಂಗಿ ಸಾಕಾನೆ ಶಿಬಿರ ಹಾರಂಗಿ ಜಲಾಶಯದ ಹಿನ್ನೀರಿನ ಸುಂದರ ಪ್ರಕೃತಿಯ ಮಡಿಲಲ್ಲಿದೆ. ಸುಮಾರು 2 ಸಾವಿರ ಏಕರೆಯ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಮನಸೂರೆಗೊಳ್ಳುವಂತಹ ಆಕರ್ಷಕ ತಾಣವಾಗಿದೆ. ಹಿನ್ನೀರು ಪ್ರದೇಶದಲ್ಲಿ ಆನೆಗಳ ಮಜ್ಜನ, ಆನೆಗಳ ಆಹಾರ, ಆನೆ ಸವಾರಿ ಮೊದಲಾದ ಚಟುವಟಿಕೆಗಳಿವೆ.

ಅದನ್ನ ಹೊರತುಪಡಿಸಿದರೆ ಶಿಬಿರದಲ್ಲಿ ಬಗೆ ಬಗೆಯ ಮರಗಳ ವೃಕ್ಷೋದ್ಯಾನ ತಲೆ ಎತ್ತುತ್ತಿದೆ. ಜೊತೆಗೆ ಮಕ್ಕಳಿಗೆ ಆಡವಾಡಲು ಪ್ರತ್ಯೇಕ ಆಟದ ಸ್ಥಳಾವಕಾಶವಿದೆ. ಜೊತೆಗೆ ಬೋಟಿಂಗ್ ಅನುಭವ ಕೂಡ ಇಲ್ಲಿ ಸಿಗುತ್ತೆ. ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಕುಳಿತು ಸೂರ್ಯಾಸ್ತದ ದೃಶ್ಯ ಕಣ್ತುಂಬಿಕೊಳ್ಳಬಹುದು.

ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಈಶಾ ಫೌಂಡೇಶನ್​​ನ ನಾಗಮಂಟಪ ಉದ್ಘಾಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.