ಕೊಡಗು: ಸೋಮವಾರಪೇಟೆ ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರ್ಮಿಕರಾದ ಎಸ್.ಸತೀಶ್, ಕೆ.ಕಿರಣ್ ಹಾಗೂ ಚಂದ್ರಶೇಖರ್ ಬಂಧಿತ ಆರೋಪಿಗಳು. ಇವರು ಕಳೆದ ನವೆಂಬರ್ 11 ರಂದು ಬಿಳಿಗೇರಿ ಗ್ರಾಮದ ಕಾಫಿ ಬೆಳೆಗಾರರಾದ ಪೊನ್ನಪ್ಪ ಮತ್ತು ಕರುಂಬಯ್ಯಬ ಎಂಬವರ ಮನೆಗಳ ಬೀಗ ಮುರಿದು, 3,64,800 ರೂ ಮೌಲ್ಯದ 96 ಗ್ರಾಂ ಚಿನ್ನಾಭರಣ ಹಾಗೂ 5,760 ರೂ. ಬೆಲೆಯ ಬೆಳ್ಳಿ, ಮೊಬೈಲ್, ಒಂದು ಬೈಕ್ ಕದ್ದು ಕಾಲ್ಕಿತ್ತಿದ್ದರು.
ಈ ಸಂಬಂಧ ಮನೆಯ ಮಾಲೀಕರು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.