ಕೊಡಗು: ಮಂಜಿನನಗರಿ ಮಡಿಕೇರಿಯಲ್ಲಿ 73ನೇ ಸ್ವಾತಂತ್ರ್ಯ ದಿನವನ್ನ ಇಲ್ಲಿನ ಕೋಟೆ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಾವನ್ನಪ್ಪಿದ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಕೊಡಗು ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಹಕರಿಸಿದವರಿಗೆ ಧನ್ಯವಾದ ತಿಳಿಸಿದ ಅವರು, ಕಳೆದ ವರ್ಷ ಆಗಸ್ಟ್ ಹಾಗೂ ಈ ಬಾರಿ ಆಗಸ್ಟ್ನಲ್ಲೂ ಪ್ರಕೃತಿ ವಿಕೋಪ ಸಂಭವಿಸಿದೆ. ಈ ಬಾರಿಯ ಭೂಕುಸಿತದಿಂದ 700 ಕೋಟಿ ನಷ್ಟವಾಗಿದೆ ಎಂದು ಹೇಳಿದರು.
ಪ್ರವಾಹದ ನಂತರ ಜಿಲ್ಲೆಯ ಎಲ್ಲ ಭಾಗದಲ್ಲಿ ಸರ್ವೆ ನಡೆಯುತ್ತಿದ್ದು, ಒಟ್ಟು 158 ಮನೆಗಳು ಸಂಪೂರ್ಣ ನೆಲಸಮವಾಗಿವೆ. ಮನೆ ಸಂಪೂರ್ಣ ನೆಲಸಮವಾಗಿದ್ದರೆ, 1 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಸಂತ್ರಸ್ತ ಕೇಂದ್ರಗಳಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲಾಗಿದೆ. ತೋರದಲ್ಲಿ ನಾಪತ್ತೆಯಾದ 6 ಮಂದಿ ಹುಟುಕಾಟಕ್ಕೆ ಕಾರ್ಯಚರಣೆ ವಿಳಂಬವಾಗಿದ್ದು, ರಾಜ್ಯ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ತಜ್ಞರ ತಂಡ ಕಳುಹಿಸಲು ಪತ್ರ ಬರೆಯಲಾಗಿದೆ ಎಂದರು. 6 ಮಂದಿ ಹುಡುಕಾಟಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಆದ್ರೆ ತೋರದಲ್ಲಿ ಸಂಪೂರ್ಣ ಮಣ್ಣು ಇದ್ದು, ಕೆಸರು ತುಂಬಿದೆ. ಹಿಟಾಚಿಯಿಂದ ಕಾರ್ಯಾಚರಣೆ ಕಷ್ಟ ಎಂದು ಹೇಳಿದರು.