ಕುಶಾಲನಗರ/ಕೊಡಗು: ಕೊರೊನಾ ಲಾಕ್‌ಡೌನ್ ಮಧ್ಯೆ ಸಮಯ ಕಳೆಯಲು ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಮೀನಿಗೆ ಗಾಳ ಹಾಕಿದ್ದಾರೆ. ಈ ಗಾಳ ಹಾಕಿದ ಯುವಕರ ಗುಂಪಿಗೆ ಬರೋಬ್ಬರಿ 38 ಕೆ.ಜಿ ತೂಕದ ಮೀನು ಸಿಕ್ಕಿದೆ.
ನಗರದ ನಾಕೂರು ಬಳಿಯ ಹಿನ್ನೀರಿನಲ್ಲಿ ಸಾಂಪ್ರದಾಯಿಕ ಶೈಲಿಯ ಗಾಳವನ್ನು ಯುವಕ ಪ್ರವೀಶ್ ಹಾಕಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ನೀರಿನ ಒಳಗೆ ಬಲವಾಗಿ ಎಳೆದಂತಾಗಿದೆ. ಸ್ನೇಹಿತರ ಸಹಾಯದಿಂದ ಗಾಳವನ್ನು ನದಿಯಿಂದ ಮೇಲೆ ಎಳೆಯುತ್ತಿದ್ದಂತೆ ಬೃಹತ್ ಗಾತ್ರದ ಮೀನು ನೋಡಿ, ಎಲ್ಲರೂ ಅಚ್ಚರಿಗೊಂಡಿದ್ದಾರೆ.
ಕಾಟ್ಲಾ ಜಾತಿಗೆ ಸೇರಿದ ಮೀನು ಇದಾಗಿದ್ದು, ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಈತನಕ ಸಿಕ್ಕ ದೊಡ್ಡ ಗಾತ್ರದ ಮೀನುಗಳಲ್ಲಿ ಇದೂ ಒಂದು.