ಕೊಡಗು: ಕೊರೊನಾ ವೈರಸ್ ಇಡೀ ರಾಜ್ಯದೆಲ್ಲೆಡೆ ಭೀತಿಯ ಕಾರ್ಮೋಡ ಸೃಷ್ಠಿಸಿದೆ. ಜನತೆ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಸಿಗರ ಕಾಶಿ ಕೊಡಗಿನಲ್ಲಿ ಸಿಎಂ ಸೂಚನೆಗೂ ಮುನ್ನವೇ ಹೋಂ ಸ್ಟೇ ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ.
ಕೊಡಗಿನಲ್ಲಿ ಶೇ 70% ಹೋಂ ಸ್ಟೇಗಳನ್ನು ಮುಚ್ಚಲಾಗಿದ್ದು, ಲಾಭಕ್ಕಿಂತ ನಾಡಿನ ಜನರ ಆರೋಗ್ಯ ಮುಖ್ಯ ಎಂದು ಜಿಲ್ಲೆಯ ಹೋಂ ಸ್ಟೇ ಮಾಲೀಕರು ತಿಳಿಸಿದ್ದಾರೆ.