ETV Bharat / state

ಗುಡ್ಡ ಕುಸಿತ, ಕಣ್ಮರೆಯಾದವರ ಶೋಧಕ್ಕೆ ಕೆಸರು ಅಡ್ಡಿ: ವಿಶೇಷ ತಂಡಕ್ಕೆ ಜಿಲ್ಲಾಡಳಿತ ಮನವಿ

author img

By

Published : Aug 16, 2019, 11:51 AM IST

ತೋರಾ ಗ್ರಾಮದಲ್ಲಿ ಗುಡ್ಡ ಕುಸಿದ ಜಾಗದಲ್ಲಿ ಇನ್ನೂ 6 ಜನರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಆದ್ರೆ ಇದಕ್ಕೆ ಕೆಸರು ಅಡ್ಡಿಯಾಗಿದ್ದು, ವಿಶೇಷ ತಂಡಕ್ಕಾಗಿ ಜಿಲ್ಲಾಡಳಿತ ಮನವಿ ಮಾಡಿದೆ.

ಗುಡ್ಡ ಕುಸಿತ ಶೋಧಕ್ಕೆ ಕೆಸರು ಅಡ್ಡಿಯಾಗಿದೆ.

ಮಡಿಕೇರಿ: ಕೊಡಗು ಜಿಲ್ಲೆಯ ತೋರಾ ಗ್ರಾಮದಲ್ಲಿ ಗುಡ್ಡ ಕುಸಿದು ಭಾರಿ ಅವಾಂತರವೇ ಸೃಷ್ಟಿಯಾಗಿದೆ. ದುರ್ಘಟನೆಯಲ್ಲಿ ಕೆಲವರು ಸಾವನ್ನಪ್ಪಿದ್ದು, ಅವರ ಮೃತದೇಹಗಳನ್ನು ಹೊರೆ ತೆಗೆಯಲಾಗಿದೆ. ಇನ್ನೂ 6 ಜನರ ಸುಳಿವು ಮಾತ್ರ ಸಿಕ್ಕಿಲ್ಲ.

ಗುಡ್ಡ ಕುಸಿತ: ನಾಪತ್ತೆಯಾದವರ ಶೋಧಕ್ಕೆ ಕೆಸರು ಅಡ್ಡಿ.

ಉಳಿದ 6 ಜನರ ಪತ್ತೆಗೆ ಜೆಸಿಬಿಯಿಂದ ಪತ್ತೆ ಕಾರ್ಯ ನಡೆದಿದ್ದರೆ, ಅದಕ್ಕೆ ಕೆಸರು ಅಡ್ಡಿಯಾಗಿದೆ. ಭಾರಿ ಮಳೆಗೆ ಗುಡ್ಡ ಕುಸಿದು ಈಗಾಗಲೇ 8 ದಿನಗಳೇ ಕಳೆದರೂ ಇನ್ನೂ 6 ಜನ ಪತ್ತೆಯಾಗಿಲ್ಲ. ಆ ಭಾಗದಲ್ಲಿ ಮಳೆ ಆಗುತ್ತಿರುವ ಪರಿಣಾಮ ಮಣ್ಣು ಸಂಪೂರ್ಣ ಕೆಸರಾಗಿದೆ. ಆದ್ದರಿಂದ ಶೋಧಕ್ಕೆ ವಿಶೇಷ ಕಾರ್ಯಪಡೆ ನಿಯೋಜಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಮನವಿ ಮಾಡಿದೆ.

ಘಟನಾ ಸ್ಥಳದಲ್ಲಿ ಎನ್‌.ಡಿ.ಆರ್‌.ಎಫ್, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ತೀವ್ರ ಶೋಧ ನಡೆಸಿ ಇಬ್ಬರ ಮೃತದೇಹಗಳನ್ನು ಪತ್ತೆಮಾಡಿದ್ದಾರೆ. ದಿನಗಳು ಕಳೆದಂತೆ ನಾಪತ್ತೆ ಆಗಿರುವವರ ಸಂಬಂಧಿಕರ ಆತಂಕವೂ ಹೆಚ್ಚುತ್ತಿದೆ.

Intro:ಗುಡ್ಡ ಕುಸಿತ ಶೋಧಕ್ಕೆ ಕೆಸರು ಅಡ್ಡಿ: ವಿಶೇಷ ತಂಡಕ್ಕೆ ಜಿಲ್ಲಾಡಳಿತ ಮನವಿ 

ಕೊಡಗು: ತೋರಾ ಗ್ರಾಮದಲ್ಲಿ ಗುಡ್ಡಕುಸಿದು 10 ಮಂದಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 6 ಜನರ ಪತ್ತೆಗೆ ಕೆಸರು ಅಡ್ಡಿಯಾಗಿದೆ. 

ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಈಗಾಗಲೇ 8 ದಿನಗಳು ಕಳೆದರೂ ಇನ್ನೂ 6 ಜನರ ಸುಳಿವು ಪತ್ತೆಯಾಗಿಲ್ಲ.ಆ ಭಾಗದಲ್ಲಿ ಮಳೆ ಆಗುತ್ತಿರುವ ಪರಿಣಾಮ ಮಣ್ಣು ಸಂಪೂರ್ಣ ಕೆಸರಾಗಿದೆ. ಆದ್ದರಿಂದ ಶೋಧಕ್ಕೆ ವಿಶೇಷ ಕಾರ್ಯಪಡೆ ನಿಯೋಜಿಸುವಂತೆ ಕೇಂದ್ರ ಮತ್ತು ಇತರೆ ರಾಜ್ಯಗಳಿಗೆ ಜಿಲ್ಲಾಡಳಿತ ಮನವಿ ಮಾಡಿದೆ. 

ಘಟನಾ ಸ್ಥಳದಲ್ಲಿ ಎನ್‌ಡಿಆರ್‌ಎಫ್,ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ತೀವ್ರ ಶೋಧ ನಡೆಸಿ ಎರಡು ಮೃತ ದೇಹಗಳನ್ನು ಪತ್ತೆಮಾಡಿದ್ದಾರೆ. ದಿನಗಳು ಕಳೆದಂತೆ ನಾಪತ್ತೆ ಆಗಿರುವ ಕುಟುಂಬದ ಆತಂಕ ಹೆಚ್ಚಿದೆ‌. 

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.