ETV Bharat / state

ದರೋಡೆ ಪ್ರಕರಣ: ಆರೋಪಿಗಳನ್ನು ಹೆಡೆಮುರಿಕಟ್ಟಿದ ಕೊಡಗು ಖಾಕಿ..! - ಸುಮನ್ ಡಿ.ಪನ್ನೇಕರ್- ಕೊಡಗು ಎಸ್ಪಿ

ಮೇ 5 ರಂದು ವಿರಾಜಪೇಟೆ ತಾಲೂಕಿನ ಶಿವಾಸ್ ಜಂಕ್ಷನ್ ಬಳಿ ಮನೆಯೊಂದರ ಕಿಟಕಿ ಸರಳುಗಳನ್ನು ಮುರಿದು ಮನೆಯವರ ಕೈ, ಬಾಯಿ ಕಟ್ಟಿ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Kodagu District
ದರೋಡೆ ಪ್ರಕರಣ
author img

By

Published : Jun 15, 2020, 10:57 PM IST

ಕೊಡಗು: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಡಿಕೇರಿ ತಾಲೂಕಿನ ಎಮ್ಮೇಮಾಡು ನಿವಾಸಿಗಳಾದ ಇಬ್ರಾಹಿಂ, ಅಶ್ರಫ್ ಹಾಗೂ ಮಸ್ತಫಾ ಇವರನ್ನು ಬಂಧಿಸಿದ್ದು, ಆರೋಪಿ ಇಬ್ರಾಹಿಂನನ್ನು ಕಾನೂನು‌ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಅವರಿಂದ ಕೃತ್ಯಕ್ಕೆ ಬಳಸಿದ್ದ ಕತ್ತಿ, ಟೇಪ್‌ಗಳು, ಮೊಬೈಲ್ ಫೋನ್, ಮಾರುತಿ 800 ಕಾರು, 121 ಗ್ರಾಂ ಚಿನ್ನಾಭರಣ, ಎರಡು ತಿಂಗಳ ಹಿಂದಷ್ಟೇ ಕಳವು ಮಾಡಿದ್ದ 3 ಚೀಲ ಕಾಫಿ ಮತ್ತು 400 ಕೆ.ಜಿ ಕರಿ ಮೆಣಸು ಸೇರಿದಂತೆ ಒಟ್ಟು 12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಗಳು ಕೊಡಗು ಹಾಗೂ ಮೈಸೂರು ಸೇರಿದಂತೆ ಇತರೇ ಜಿಲ್ಲೆಗಳ ಶ್ರೀಮಂತರ ಮನೆಗಳ ದರೋಡೆಗೆ ಸಂಚು ರೂಪಿಸಿದ್ದರು ಎಂದು ತಿಳಿಸಿದರು.

ಮೇ 5 ರಂದು ವಿರಾಜಪೇಟೆ ತಾಲೂಕಿನ ಶಿವಾಸ್ ಜಂಕ್ಷನ್ ಬಳಿ ಮನೆಯೊಂದರ ಕಿಟಕಿ ಸರಳುಗಳನ್ನು ಮುರಿದು ಮನೆಯವರ ಕೈ, ಬಾಯಿ ಕಟ್ಟಿ ಹಲ್ಲೆ ನಡೆಸಿ ದರೋಡೆ ಮಾಡಲಾಗಿತ್ತು. ಘಟನೆ ಸ್ಥಳೀಯರಲ್ಲಿ ಭಯವನ್ನುಂಟುಮಾಡಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸುಮನ್ ಡಿ. ಪನ್ನೇಕರ್, ವಿರಾಜಪೇಟೆ ಡಿವೈಎಸ್‌ಪಿ ಸಿ.ಟಿ.ಜಯಕುಮಾರ್ ನೇತೃತ್ವದಲ್ಲಿ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಆರೋಪಿಗಳ ಪತ್ತೆಗೆ ಕಾರ್ಯ ಪ್ರವೃತ್ತರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.