ETV Bharat / state

ಕೊಡಗಿನಲ್ಲಿ ಮಳೆಯ ರೌದ್ರಾವತಾರ: ಆರೇಂಜ್, ರೆಡ್ ಅಲರ್ಟ್ ಘೋಷಣೆ

author img

By

Published : Aug 5, 2019, 7:58 PM IST

ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ವರುಣ ಆತಂಕ ಸೃಷ್ಟಿಸಿದ್ದಾನೆ. 115.6 ಮಿ.ಮೀ ನಿಂದ 204.4 ಮಿ.ಮೀ ಮಳೆಯಾಗುವ ಹಿನ್ನೆಲೆ ಆಗಸ್ಟ್ 5 ರಿಂದ 7 ರವರೆಗೆ ಆರೆಂಜ್ ಅಲರ್ಟ್ ಮತ್ತು ಆಗಸ್ಟ್ 7 ರಿಂದ 9 ರವರೆಗೆ 204.4‌ ಮಿ.ಮೀ ಗಿಂತಲೂ ಅಧಿಕ ಮಳೆ ಬೀಳುವ ಸಾಧ್ಯತೆ ಇರುವುದರಿಂದ‌ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕೊಡಗಿನಲ್ಲಿ ವರುಣದ ಆರ್ಭಟ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇಂದಿನಿಂದ ಭಾರಿ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಿಸಿದೆ‌.

ಕೇಂದ್ರ ಹವಾಮಾನ ಇಲಾಖೆ ವರದಿ ಆಧರಿಸಿ ಕೊಡಗು ಜಿಲ್ಲಾಡಳಿತ 115.6 ಮಿ.ಮೀ ನಿಂದ 204.4 ಮಿ.ಮೀ ಮಳೆಯಾಗುವ ಹಿನ್ನೆಲೆ ಆಗಸ್ಟ್ 5 ರಿಂದ 7 ರವರೆಗೆ ಆರೆಂಜ್ ಅಲರ್ಟ್ ಮತ್ತು ಆಗಸ್ಟ್ 7 ರಿಂದ 9 ರವರೆಗೆ 204.4‌ ಮಿ.ಮೀ ಗಿಂತಲೂ ಅಧಿಕ ಮಳೆ ಬೀಳುವ ಸಾಧ್ಯತೆ ಇರುವುದರಿಂದ‌ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಹಾಗೆಯೇ ಆಗಸ್ಟ್ 9 ರಿಂದ 10 ರವರೆಗೆ ಮತ್ತೆ ಮಳೆ ಪ್ರಮಾಣ ಕಡಿಮೆ ಆಗುವುದರಿಂದ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಬಗ್ಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಸುತ್ತೋಲೆ ಹೊರಡಿಸಿದ್ದಾರೆ.

ಕೊಡಗಿನಲ್ಲಿ ವರುಣದ ಆರ್ಭಟ

ಜಿಲ್ಲೆಯಲ್ಲಿ ದಾಖಲಾದ ಮಳೆಯ ಪ್ರಮಾಣ:

ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 62.88 ಮಿ.ಮೀ ಮಳೆಯಾಗಿದೆ‌. ಕಳೆದ ವರ್ಷ ಇದೇ ದಿನ 8.15 ಮಿ.ಮೀ ಮಳೆಯಾಗಿತ್ತು. ಜನವರಿಯಿಂದ ಇಲ್ಲಿವರೆಗೆ 1081.85 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 2629.45 ಮಿ.ಮೀ ಮಳೆಯಾಗಿತ್ತು.

ತಾಲೂಕುವಾರು ದಾಖಲಾದ ಮಳೆ ಪ್ರಮಾಣ:
ಮಡಿಕೇರಿ ತಾಲೂಕಿನಲ್ಲಿ ಪ್ರಸ್ತುತ 80.80 ಮಿ.ಮೀ. ಸರಾಸರಿ ಮಳೆ ಬಿದ್ದಿದ್ದರೆ, ಕಳೆದ ವರ್ಷ ಇದೇ ದಿನ 19.90 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿವರೆಗೆ ದಾಖಲಾದ ಮಳೆ 1461.11 ಮಿ.ಮೀ.‌ಕಳೆದ ವರ್ಷ ಇದೇ ಅವಧಿಯಲ್ಲಿ 3710 ಮಿ.ಮೀ. ಮಳೆಯಾಗಿತ್ತು. ಹಾಗೆಯೇ ವಿರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 57.62 ಮಿ.ಮೀ. ಆಗಿದ್ದರೆ, ಕಳೆದ ವರ್ಷ ಇದೇ ದಿನ 0.37 ಮಿ.ಮೀ ಮಳೆಯಾಗಿತ್ತು.

ಜನವರಿಯಿಂದ ಇಲ್ಲಿವರೆಗೆ 1134.64 ಮಿ.ಮೀ ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2094.64 ಮಿ.ಮೀ ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 50.23 ಮಿ.ಮೀ. ಆಗಿದ್ದರೆ, ಕಳೆದ ವರ್ಷ ಇದೇ ದಿನ 4.17 ಮಿ.ಮೀ. ಮಳೆ ಬಂದಿತ್ತು. ಜನವರಿಯಿಂದ ಇಲ್ಲಿವರೆಗೆ 649.81 ಮಿ.ಮೀ. ಮಳೆಯಾಗಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 2083.72 ಮಿ.ಮೀ. ಮಳೆಯಾಗಿತ್ತು.

Intro:ಕೊಡಗಿನಲ್ಲಿ ಮಳೆ; ಸುರಕ್ಷತೆ ದೃಷ್ಠಿಯಿಂದ ಜಿಲ್ಲಾಡಳಿತದಿಂದ 
ಆರೇಂಜ್-ರೆಡ್ ಅಲರ್ಟ್ ಘೋಷಣೆ 

ಕೊಡಗು: ಹವಾಮಾನ ಇಲಾಖೆ ಕೊಡಗಿನಲ್ಲಿ ಇಂದಿನಿಂದ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಿಸಿದೆ‌. 

ಕೇಂದ್ರ ಹವಾಮಾನ ಇಲಾಖೆ ವರದಿ ಆಧರಿಸಿ ಕೊಡಗು ಜಿಲ್ಲಾಡಳಿತ 115.6 ಮಿ.ಮೀ ನಿಂದ 204.4 ಮಿ.ಮೀ ಮಳೆಯಾಗುವ ಹಿನ್ನೆಲೆ ಆಗಸ್ಟ್ 5 ರಿಂದ 7 ರವರೆಗೆ ಆರೆಂಜ್ ಅಲರ್ಟ್ ಮತ್ತು ಆಗಸ್ಟ್ 7 ರಿಂದ 9 ರವರೆಗೆ 204.4‌ ಮಿ.ಮೀ ಗಿಂತಲೂ ಅಧಿಕ ಮಳೆ ಬೀಳುವ ಸಾಧ್ಯತೆ ಇರುವುದರಿಂದ‌ ರೆಡ್ ಅಲರ್ಟ್ ಹಾಗೆಯೇ ಆಗಸ್ಟ್ 9 ರಿಂದ 10 ರವರೆಗೆ ಮತ್ತೆ ಮಳೆ ಪ್ರಮಾಣ ಕಡಿಮೆ ಆಗುವುದರಿಂದ ಆರೆಂಜ್ ಅಲರ್ಟ್ ಘೋಷಿಸಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಆದೇಶ ಹೊರಡಿಸಿದ್ದಾರೆ. 

ಜಿಲ್ಲೆಯಲ್ಲಿ ದಾಖಲಾದ ಮಳೆಯ ಪ್ರಮಾಣ: 

ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 62.88 ಮಿ.ಮೀ ಮಳೆಯಾಗಿದೆ‌.ಕಳೆದ ವರ್ಷ ಇದೇ ದಿನ 8.15 ಮಿ.ಮೀ ಮಳೆಯಾಗಿತ್ತು. ಜನವರಿಯಿಂದ ಇಲ್ಲಿವರೆಗೆ 1081.85 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 2629.45 ಮಿ.ಮೀ ಮಳೆಯಾಗಿತ್ತು. 

ತಾಲೂಕುವಾರು ದಾಖಲಾದ ಮಳೆ ಪ್ರಮಾಣ: 

ಮಡಿಕೇರಿ ತಾಲ್ಲೂಕಿನಲ್ಲಿ ಪ್ರಸ್ತುತ 80.80 ಮಿ.ಮೀ ಸರಾಸರಿ ಮಳೆ ಬಿದ್ದಿದ್ದರೆ.‌ ಕಳೆದ ವರ್ಷ ಇದೇ ದಿನ 19.90 ಮಿ.ಮೀ. ಜನವರಿಯಿಂದ ಇಲ್ಲಿವರೆ ದಾಖಲಾದ ಮಳೆ 1461.11 ಮಿ.ಮೀ.‌ಕಳೆದ ವರ್ಷ ಇದೇ ಅವಧಿಯಲ್ಲಿ 3710 ಮಿ.ಮೀ. ಮಳೆಯಾಗಿತ್ತು. ಹಾಗೆಯೇ ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 57.62 ಮಿ.ಮೀ ಆಗಿದ್ದರೆ.ಕಳೆದ ವರ್ಷ ಇದೇ ದಿನ 0.37 ಮಿ.ಮೀ ಮಳೆಯಾಗಿದೆ. 

ಜನವರಿಯಿಂದ ಇಲ್ಲಿವರೆಗೆ 1134.64 ಮಿ.ಮೀ ಮಳೆ ಬಿದ್ದಿದ್ದರೆ.ಕಳೆದ ವರ್ಷ ಇದೇ ಅವಧಿಯಲ್ಲಿ 2094.64 ಮಿ.ಮೀ ಮಳೆಯಾಗಿತ್ತು.ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ 50.23 ಮಿ.ಮೀ ಇದರೆ,ಕಳೆದ ವರ್ಷ ಇದೇ ದಿನ 4.17 ಮಿ.ಮೀ ಮಳೆಯಾಗಿತ್ತು.ಜನವರಿಯಿಂದ ಇಲ್ಲಿವಗೆ 649.81 ಮಿ.ಮೀ ಮಳೆಯಾಗಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 2083.72 ಮಿ.ಮೀ ಮಳೆಯಾಗಿತ್ತು. 

ಹೋಬಳಿವಾರು ದಾಖಲಾಗಿರುವ ಮಳೆ ಪ್ರಮಾಣ:

ಮಡಿಕೇರಿಯ ಕಸಬಾ ವ್ಯಾಪ್ತಿಯಲ್ಲಿ 62.40 ಮಿ.ಮೀ, 
ನಾಪೋಕ್ಲು 62.20 ಮಿ.ಮೀ ಸಂಪಾಜೆ 44.20 ಮಿ.ಮೀ ಭಾಗಮಂಡಲ 154.40 ಮಿ.ಮೀ, ವಿರಾಜಪೇಟೆ ಕಸಬಾ 69.40 ಮಿ.ಮೀ, ಹುದಿಕೇರಿ 48.20 ಮಿ.ಮೀ ಶ್ರೀಮಂಗಲದಲ್ಲಿ 43.20 ಮಿ.ಮೀ, ಪೊನ್ನಂಪೇಟೆ ಹೋಬಳಿಯಲ್ಲಿ 100.20 ಮಿ.ಮೀ, ಅಮ್ಮತ್ತಿ ಭಾಗದಲ್ಲಿ 
36.50 ಮಿ.ಮೀ, ಬಾಳೆಲೆ 48.24 ಹಾಗೂ ಸೋಮವಾರಪೇಟೆ ಕಸಬಾ ವ್ಯಾಪ್ತಿಯಲ್ಲಿ 52.40 ಶನಿವಾರಸಂತೆ 34, ಶಾಂತಳ್ಳಿ 115.20, ಕೊಡ್ಲಿಪೇಟೆ 62.80, ಕುಶಾಲನಗರ 12, ಸುಂಟಿಕೊಪ್ಪ 25 ಮಿ.ಮೀ. ಮಳೆಯಾಗಿದೆ. 

ಹಾರಂಗಿ ಭರ್ತಿಗೆ ಬೇಕಿದೆ ಸುಮಾರು 23 ಅಡಿಗಳು:

ಜಿಲ್ಲೆಯ ಪ್ರಮುಖ ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2857.71 ಅಡಿಗಳಿದ್ದು, ಪ್ರಸ್ತುತ ಜಲಾಶಯಲ್ಲಿ 2836.29 ಅಡಿಗಳಿದ್ದು, ಡ್ಯಾಂ ಭರ್ತಿಗೆ ಸುಮಾರು 23 ಅಡಿಯಷ್ಟೇ ಬಾಕಿ ಇದೆ.ಕಳೆದ ವರ್ಷ ಈಗಾಗಲೇ ಜಲಾಶಯ ಗರಿಷ್ಠ ಮಟ್ಟ ತಲುಪಿತ್ತು. 

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.