ETV Bharat / state

ದುಬಾರೆ ಸಾಕಾನೆ ಶಿಬಿರಕ್ಕೆ‌ ನಿಷೇಧ: ಪ್ರವಾಸಿಗರಿಗೆ ನಿರಾಸೆ

author img

By

Published : Jun 20, 2019, 11:06 PM IST

ಪ್ರವಾಸಿಗರಿಗೆ ಅದು ನೆಚ್ಚಿನ ತಾಣ. ವಾರಾಂತ್ಯದ ರಜೆ ದಿನಗಳಲ್ಲಿ ಭೇಟಿ ಕೊಟ್ಟರೆ ತುಸು ನೆಮ್ಮದಿ.‌ ಆದರೆ ಒಂದು ತಿಂಗಳಿಂದ ಅಲ್ಲಿಗೆ ಪ್ರವಾಸಿಗರನ್ನು ಅರಣ್ಯ ಇಲಾಖೆ ನಿಷೇಧಿಸಿದೆ. ಹೀಗಾಗಿ ಪ್ರವಾಸಿಗರಿಗೆ ನಿರಾಶೆಯಾಗಿದೆ.

ಜಿಲ್ಲೆಯಲ್ಲಿ ರಾಫ್ಟಿಂಗ್

ಕೊಡಗು: ಜಿಲ್ಲೆಯಲ್ಲಿ ಮುಂಗಾರು ಇದೇ 20 ರಿಂದ ಚುರುಕುಗೊಳ್ಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಸಮೀಪದ ದುಬಾರೆ ಕಾಡಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ಅರಣ್ಯ ಇಲಾಖೆ ನಿಷೇಧಿಸಿದೆ.

ಕಳೆದೊಂದು ವಾರದಿಂದ ಕಾವೇರಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ನದಿ ದಾಟಿ ಆನೆ ಶಿಬಿರಕ್ಕೆ ಹೋಗುವುದು ಅಪಾಯವೆಂಬ ಕಾರಣಕ್ಕೆ ಒಂದು ತಿಂಗಳು ಪ್ರವಾಸಿಗರ ಪ್ರವೇಶವನ್ನು ಅರಣ್ಯ ಇಲಾಖೆ ನಿಷೇಧಿಸಿದೆ. ಇದನ್ನು ತಿಳಿಯದೆ ದುಬಾರೆಗೆ ಆಗಮಿಸುತ್ತಿರುವ ಪ್ರವಾಸಿಗರು ಆನೆ ಶಿಬಿರಕ್ಕೆ ತೆರಳಲು ಸಾಧ್ಯವಾಗದೆ ನದಿ ಪಾತ್ರದಲ್ಲೇ ಪೋಟೊ ಕ್ಲಿಕ್ಕಿಸಿಕೊಳ್ಳುತ್ತಾ ಹಾಗೂ ಕುದುರೆ ಸವಾರಿ ಮಾಡುತ್ತಾ ಮನರಂಜನೆ ಪಡೆಯುತ್ತಿದ್ದಾರೆ.

ದುಬಾರೆ ಕಾಡಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ

ರಿವರ್ ರಾಫ್ಟಿಂಗ್ ಹಾಗೂ ಸಾಕಾನೆ‌ ಶಿಬಿರ ಆಕರ್ಷಣೆ:

ಮಳೆಗಾಲ, ಚಳಿಗಾಲದಲ್ಲಿ ಈ‌ ನದಿಯಲ್ಲಿ ರಾಫ್ಟಿಂಗ್ ಅನುಭವ ಪಡೆಯುವ ಪ್ರವಾಸಿಗರು, ಬೇಸಿಗೆಯಲ್ಲಿ ನದಿಗಿಳಿದು ಖುಷಿ ಪಡ್ತಾರೆ. ಅದಾದ ಬಳಿ‌ಕ ನದಿ ದಾಟಿ ಆನೆ ಶಿಬಿರಕ್ಕೆ ಹೋಗಿ ಅಲ್ಲಿನ ಆನೆಗಳೊಂದಿಗೆ ಬೆರೆಯುತ್ತಾರೆ. ಇಲ್ಲಿ ಪ್ರವಾಸಿಗರು ಹಾಗೂ ಶಿಬಿರದ ಸಿಬ್ಬಂದಿ ಕುಟುಂಬಗಳು ಬೇಸಿಗೆಯಲ್ಲಿ ನದಿಯಲ್ಲಿ ಇಳಿದು ಆನೆ‌ ಶಿಬಿರಕ್ಕೆ ಹೋಗಬಹುದು. ಆದರೆ ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಅದು ಸಾಧ್ಯವಿಲ್ಲ. ಸದ್ಯ ಪ್ರವಾಸಿಗರಿಗೆ ನೀರಿನಲ್ಲಿ ಸುಳಿ ಇದೆ ಎಂಬ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಸ್ನೇಹಿತರೊಂದಿಗೆ ದಾವಣಗೆರೆಯಿಂದ ದುಬಾರೆ ಸಾಕಾನೆ ಶಿಬಿರ ನೋಡಲು ನಾವು ಬಂದಿದ್ದೇವೆ. ಇದೀಗ ಆನೆ ಶಿಬಿರಕ್ಕೆ ಹೋಗಬಾರದೆಂದು ಹೇಳಿದ್ದಾರೆ. ಇದರಿಂದ ಬೇಸರವಾಗಿದೆ.‌ ಇಲ್ಲಿ ದೋಣಿ ವ್ಯವಸ್ಥೆಯೂ ಇಲ್ಲ. ಕನಿಷ್ಠ ತೂಗು ಸೇತುವೆಯನ್ನಾದರೂ‌ ಮಾಡಿದರೆ ಎಲ್ಲರಿಗೂ ಅನುಕೂಲ‌ವಾಗುತ್ತೆ ಎಂದು ಪ್ರವಾಸಿ ವಿದ್ಯಾಶ್ರೀ ಹೇಳಿದರು.

ಆನೆ ಶಿಬಿರ ನೋಡಲು ಅವಕಾಶ ಮಾಡಿಕೊಟ್ಟಿದ್ದರೆ ಆನೆಗಳ ಜೀವನ ಕ್ರಮದ ಬಗ್ಗೆ ತಿಳಿದುಕೊಳ್ಳಬಹುದಿತ್ತು. ಆದರೆ ಅಲ್ಲಿಗೆ ಹೋಗದಂತೆ ನಿಷೇಧ ಹೇರಿದ್ದಾರೆ.ನೀರಿ‌ನ ಪ್ರಮಾಣ ಸ್ವಲ್ಪ ಹೆಚ್ಚಿರುವುದರಿಂದ ಹಾಯ್ದು ದಡ ಸೇರುವುದೂ ಕಷ್ಟ. ಇದರಿಂದ ದೂರದಿಂದ ಬಂದಿರುವ ನಮಗೆ ಬೇಸರವಾಗಿದೆ ಎಂದು ಪ್ರವಾಸಿಗ ಅನೂಪ್ ಅಸಮಾಧಾನ ವ್ಯಕ್ತಪಡಿಸಿದ್ರು.

Intro:ದುಬಾರೆ ಸಾಕಾನೆ ಶಿಬಿರಕ್ಕೆ‌ ನಿಷೇಧ: ಪ್ರವಾಸಿಗರಿಗೆ ನಿರಾಸೆ..!!

ಕೊಡಗು: ಪ್ರವಾಸಿಗರಿಗೆ ಅದು ನೆಚ್ಚಿನ ತಾಣ.ವಾರಾಂತ್ಯದ
ರಜೆ ದಿನಗಳಲ್ಲಿ ಭೇಟಿ ಕೊಟ್ಟರೆ ತುಸು ನೆಮ್ಮದಿ.‌ಆದರೆ ಒಂದು ತಿಂಗಳಿಂದ ಅಲ್ಲಿಗೆ ಪ್ರವಾಸಿಗರನ್ನು ನಿಷೇಧಿಸಿದೆ. ಇದು ಗೊತ್ತಿಲ್ಲದೆ ಆಗಮಿಸುತ್ತಿರೊ ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲದಂತೆ ಸಪ್ಪೆಮೋರೆ‌ ಹಾಕಿಕೊಂಡು ಮರಳುತ್ತಿದ್ದಾರೆ.ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಶಪಿಸುತ್ತಿದ್ದಾರೆ.‌.!!
ಪ್ರವಾಸಿಗರು ಇಲ್ಲದೆ ಬಣಗುಡುತ್ತಿರುವ ಸ್ಥಳ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸಿಕ್ಕಕಡೆಯಲ್ಲೇ ಪೋಟೊ ಕ್ಲಿಕ್ಕಿಸಿಕೊಳ್ಳುತ್ತಿರುವ ಪ್ರವಾಸಿಗರು‌.ನದಿಗೆ ಇಳಿದವರನ್ನು ಅತ್ತಕಡೆ ಹೋಗಬೇಡಿ ಸುಳಿ ಇದೆ ಬನ್ನಿ...ಎಂದು ಎಚ್ಚರಿಕೆ ನೀಡುತ್ತಿರೊ ಸಿಬ್ಬಂದಿ.ಮತ್ತೊಂದೆಡೆ ಮರಕ್ಕೆ ಬಿಗಿದು ನಿಲ್ಲಿಸಿರುವ ದೋಣಿಗಳು...ಇಂತಹ ದೃಶ್ಯಗಳು ಕಂಡು ಬಂದಿದ್ದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಸಮೀಪದ ದುಬಾರೆ ಕಾಡಾನೆ ಶಿಬಿರದ ಬಳಿ.
ಹೌದು..ಜಿಲ್ಲೆಯಲ್ಲಿ ಮುಂಗಾರು ಇದೇ 20 ರಿಂದ ಚುರುಕುಗೊಳ್ಳುವ ಮುಸ್ಸೂಚನೆಯನ್ನು
ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಹಿನ್ನಲೆಯಲ್ಲಿ ಅಲ್ಲದೆ ಕಳೆದೊಂದು ವಾರದಿಂದ ಕಾವೇರಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಿರುವ ಹಿನ್ನಲೆಯಲ್ಲಿ ನದಿ ದಾಟಿ ಆನೆ ಶಿಬಿರಕ್ಕೆ ಹೋಗುವುದು ಅಪಾಯವೆಂಬ ಕಾರಣ ಕೊಟ್ಟು ಒಂದು ತಿಂಗಳು ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ. ಇದನ್ನು ತಿಳಿಯದೆ ದುಬಾರೆಗೆ ಆಗಮಿಸುತ್ತಿರೊ ಪ್ರವಾಸಿಗರು ಆನೆ ಶಿಬಿರಕ್ಕೆ ತೆರಳಲು ಸಾಧ್ಯವಾಗದೆ ನದಿ ಪಾತ್ರದಲ್ಲೇ ಪೋಟೊ ಕ್ಲಿಕ್ಕಿಸಿಕೊಳ್ಳುತ್ತಾ ಹಾಗೂ ಕುದುರೆ ಸವಾರಿ ಮಾಡುತ್ತಾ ಮನರಂಜನೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ರಾಫ್ಟಿಂಗ್ ಹಾಗೂ ಸಾಕಾನೆ‌ ಶಿಬಿರ ಆಕರ್ಷಣೆ. ಮಳೆಗಾಲ, ಚಳಿಗಾಲದಲ್ಲಿ ಈ‌ ನದಿಯಲ್ಲಿ ರಾಫ್ಟಿಂಗ್ ಅನುಭವ ಪಡೆಯುವ ಪ್ರವಾಸಿಗರು ಬೇಸಿಗೆಯಲ್ಲಿ ನದಿಗೆ ಇಳಿದು ಖುಷಿ ಪಡ್ತಾರೆ.ಅದಾದ ಬಳಿ‌ಕ ನದಿ ದಾಟಿ ಆನೆ ಶಿಬಿರಕ್ಕೆ ಹೋಗಿ ಅಲ್ಲಿನ ಆನೆಗಳೊಂದಿಗೆ ಬೆರೆಯುತ್ತಾರೆ. ಇಲ್ಲಿ ಪ್ರವಾಸಿಗರು ಹಾಗೂ ಶಿಬಿರದ ಸಿಬ್ಬಂದಿ ಕುಟುಂಬಗಳು ಬೇಸಿಗೆಯಲ್ಲಿ ನದಿಯಲ್ಲಿ ಇಳಿದು ಆನೆ‌ ಶಿಬಿರಕ್ಕೆ ಹೋಗಬಹುದು.ಆದರೆ ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಅದು ಸಾಧ್ಯವಿಲ್ಲ.ಇಷ್ಟು ದಿನ ಶಿಬಿರಕ್ಕೆ ತೆರಳಲು ದೋಣಿಗಳನ್ನು ಅವಲಂಬಿಸಿದ್ದರು.ಇದೀಗ ದೋಣಿಗಳು ಕೈ ಕೊಟ್ಟಿವೆ.ಹಾಗಾಗಿ‌ ಶಿಬಿರದ ಸಿಬ್ಬಂದಿ ಪ್ರಾಣ ಒತ್ತೆ ಇಟ್ಟು ನದಿ ದಾಟಲು ಮುಂದಾಗುತ್ತಿದ್ದಾರೆ.ಆದರೆ ಪ್ರವಾಸಿಗರಿಗೆ ಈ ದುಸ್ಸಾಹಸ ಬೇಡ ಸುಳಿಇದೆ ಎಂಬ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಸ್ನೇಹಿತರೊಂದಿಗೆ ದಾವಣಗೆರೆಯಿಂದ ದುಬಾರೆ ಸಾಕಾನೆ ಶಿಬಿರ ನೋಡಲು ನಾವು ಬಂದಿದ್ದೇವೆ.ಇದೀಗ ಆನೆ ಶಿಬಿರಕ್ಕೆ ಹೋಗ ಬಾರದೆಂದು ಹೇಳಿದ್ದಾರೆ.ಇದರಿಂದ ಬೇಸರವಾಗಿದೆ.‌
ಇಲ್ಲಿ ದೋಣಿ ವ್ಯವಸ್ಥೆಯೂ ಇಲ.ಕನಿಷ್ಟ ತೂಗು ಸೇತುವೆಯನ್ನಾದರೂ‌ ಮಾಡಿದರೆ ಎಲ್ಲರಿಗೂ ಅನುಕೂಲ‌ವಾಗುತ್ತೆ ಅನ್ನೋದು ಪ್ರವಾಸಿ ವಿದ್ಯಶ್ರೀ ಅವರ ಮೇಲೆಅಳಲು.
ಆನೆ ಶಿಬಿರ ನೋಡಲು ಅವಕಾಶ ಮಾಡಿಕೊಟ್ಟಿದ್ದರೆ ಆನೆಗಳ ಜೀವನ ಕ್ರಮದ ಬಗ್ಗೆ ತಿಳಿದುಕೊಳ್ಳಬಹುದಿತ್ತು. ಆದರೆ ಅಲ್ಲಿಗೆ ಹೋಗದಂತೆ ನಿಷೇಧ ಹೇರಿದ್ದಾರೆ.ನೀರಿ‌ನ ಪ್ರಮಾಣ ಸ್ವಲ್ಪ ಹೆಚ್ಚಿರುವುದರಿಂದ ಹಾಯ್ದು ದಡ ಸೇರುವುದೂ ಕಷ್ಟ. ಇದರಿಂದ ದೂರದಿಂದ ಬಂದಿರುವ ನಮಗೆ ಬೇಸರವಾಗಿದೆ ಎಂದು ಪ್ರವಾಸಿಗ ಅನೂಪ್ ಅಳಲು ತೋಡಿಕೊಂಡರು.
ಕೊಡಗಿನ ಪ್ರವಾಸಿ ತಾಣಗಳ‌ ಸಾಲಿನ‌ ಮೊದಲ‌ ಸ್ಥಾನದಲ್ಲಿರುವ ದುಬಾರೆಗೆ ಒಂದು ತೂಗು‌ ಸೇತುವೆ ಇಲ್ಲ. ಬೋಟ್ ಇಲ್ಲದ ದುಸ್ಥಿತಿ ಆದರೆ ಬೇರೆ ತಾಣಗಳ ಪರಿಸ್ಥಿತಿ ಏನು‌.? ಕೇವಲ‌ ಪ್ರವಾಸೋದ್ಯಮದ ಅಭಿವೃದ್ಧಿ ಅನ್ನೋದು ಬಾಯಿ ಮಾತಿಗಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.
ಒಟ್ಟಿನಲ್ಲಿ ದಶಕಗಳ ಕೂಗಾದ ತೂಗು ಸೇತುವೆ ಮಾಡುವ ಮನಸ್ಸಿಲ್ಲದ ಆಡಳಿತ, ಸರಿಯಾಗಿ ದೋಣಿಗಳ ವ್ಯವಸ್ಥೆ ಮಾಡದೆ‌ ಪ್ರವಾಸಿ ತಾಣಕ್ಕೆ ಹೋಗುವುದರ ಮೇಲೆ ನಿಷೇಧ‌ ಇವೆಲ್ಲವೂ ಪ್ರವಾಸಿಗರ ಆಕ್ರೋಶಕ್ಕೆ ಗುರಿಯಾಗಿದೆ.‌

ಬೈಟ್ -1 ವಿದ್ಯಶ್ರಿ, ಪ್ರವಾಸಿಗರು
ಬೈಟ್- 2 ಅನೂಪ್, ಪ್ರವಾಸಿಗರು

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.‌Body:0Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.