ETV Bharat / state

ಮಡಿಕೇರಿಯಲ್ಲಿ ಆಕ್ಸಿಜನ್​ ಕೊರತೆ ಇಲ್ಲ : ಆರೋಗ್ಯಾಧಿಕಾರಿ ಡಾ. ಮೋಹನ್ ಕುಮಾರ್

author img

By

Published : May 3, 2021, 7:56 PM IST

ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಸಂಭಾವ್ಯ ತುರ್ತುಪರಿಸ್ಥಿತಿ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಅಗತ್ಯ ಪೂರ್ವ ಸಿದ್ಧತೆ ಕೈಗೊಂಡಿದೆ.

oxygen-production-plant-established-in-madikeri-hospital-says-dr-mohan-kumar
ಆರೋಗ್ಯಾಧಿಕಾರಿ ಡಾ. ಮೋಹನ್ ಕುಮಾರ್

ಕೊಡಗು: ಮಡಿಕೇರಿ ಜಿಲ್ಲಾಸ್ಪತ್ರೆ ಆವರಣದಲ್ಲೇ 80 ಲಕ್ಷ ರೂ. ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಇಲ್ಲಿ ದಿನಕ್ಕೆ 15 ಸಾವಿರ ಕಿಲೋ ಲೀಟರ್ ಆಮ್ಲಜನಕ ಉತ್ಪಾದನೆಯಾಗುತ್ತಿದೆ. ಜಿಲ್ಲೆಯ ಮಟ್ಟಿಗೆ ಇಷ್ಟು ಸಾಕು ಎಂದು ಆರೋಗ್ಯಾಧಿಕಾರಿ ಡಾ. ಮೋಹನ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಸೋಂಕಿತರ ಪ್ರಮಾಣ ಹೆಚ್ಚಾದಲ್ಲಿ ಅವರ ಆರೈಕೆಗೆ ಅಗತ್ಯವಾಗಿ ಬೇಕಾಗೋದು ಹಾಸಿಗೆಗಳು. ಈ ನಿಟ್ಟಿನಲ್ಲಿಯೂ ಪೂರ್ವ ಸಿದ್ಧತೆ ಕೈಗೊಂಡಿರೋ ಜಿಲ್ಲಾಡಳಿತ ಗಾಳಿಬೀಡು ಗ್ರಾಮದಲ್ಲಿರೋ ನವೋದಯ ಶಾಲೆಯನ್ನೇ ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಯಿಸಿದೆ. ಕಳೆದ ಬಾರಿಯೂ ಇದೇ ಶಾಲೆ ಕೋವಿಡ್ ಕೇರ್ ಸೆಂಟರ್ ಆಗಿ ಜಿಲ್ಲೆಯ ಜನರಿಗೆ ಯಶಸ್ವಿ ಸೇವೆ ನೀಡಿತ್ತು. ಈ ಸೆಂಟರ್​ನಲ್ಲಿ ಅಗತ್ಯ ಸಿಬ್ಬಂದಿಯನ್ನ ಈಗಾಗಲೇ ನಿಯೋಜಿಸಲಾಗಿದೆ ಎಂದರು.

ಆರೋಗ್ಯಾಧಿಕಾರಿ ಡಾ. ಮೋಹನ್ ಕುಮಾರ್

ಕಳೆದ ಬಾರಿಯೂ ಕೊಡಗು ಜಿಲ್ಲಾಡಳಿತ ಕೋವಿಡ್ ಪರಿಸ್ಥಿತಿಯನ್ನ ಯಶಸ್ವಿಯಾಗಿ ನಿಭಾಯಿಸಿತ್ತು. ಈ ಬಾರಿ ಇನ್ನೂ ಮುಂದುವರಿದು ಅಗತ್ಯ ಆಕ್ಸಿಜನ್ ಘಟಕವನ್ನೂ ಸ್ಥಾಪಿಸಿರೋದು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಓದಿ: ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯರಿಗೂ ಸಿಕ್ಕಿರಲಿಲ್ಲ ಐಸಿಯು ಬೆಡ್​.. ಆ ಮೇಲೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.