ETV Bharat / state

ಕೊಡಗಿನಲ್ಲಿ ಶುರುವಾಗಿದೆ ಊರ ದೇವರ ಹಬ್ಬಗಳ ಆಚರಣೆ - ಕೊಡಗಿನ ಆರಾಧ್ಯ ಧೈವ

ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ದೈವಾರಾಧನೆ, ಊರ ದೇವರ ಹಬ್ಬವನ್ನು ಆಚರಿಸಲಾಗುತ್ತಿದೆ.

ಕೊಡಗಿನಲ್ಲಿ ಊರ ದೇವರ ಹಬ್ಬ
author img

By

Published : Mar 4, 2019, 9:49 PM IST

ಕೊಡಗು: ಗ್ರಾಮೀಣ ಪ್ರದೇಶಗಳಲ್ಲಿ ಇದೀಗ ಹಬ್ಬ-ಉತ್ಸವಗಳದ್ದೇ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಕೊಡಗಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಊರ ದೇವರ ಹಬ್ಬವನ್ನು ಆಚರಿಸಲಾಗುತ್ತಿದೆ. ಇವುಗಳಲ್ಲಿ ಪ್ರಮುಖವಾಗಿರುವುದು ದೈವಗಳ ಆರಾಧನೆ.ಈ ಕುರಿತ ಒಂದು ವರದಿ ಇಲ್ಲಿದೆ.

ಅಜ್ಜಪ್ಪನ, ಚೌಂಡಿ, ಸುಬ್ರಹ್ಮಣ್ಯ ,ಇದು ಗ್ರಾಮೀಣ ಪ್ರದೇಶದಲ್ಲಿ ಈಶ್ವರ, ಚಾಮುಂಡೇಶ್ವರಿ,ಸುಬ್ರಹ್ಮಣ್ಯ ಸ್ವಾಮಿ ಗೆ ಇಟ್ಟಿರುವ ಸ್ಥಳೀಯ ಹೆಸರು. ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಈ ದೈವರಾಧನೆ ನಡೆಯುತ್ತದೆ. ವಾರ್ಷಿಕವಾಗಿ ನಡೆಯುವ ಈ ದೈವರಾಧನೆ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಇಲ್ಲವೇ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಎರಡುದಿನಗಳ ಕಾಲ ನಡೆಯುತ್ತದೆ.ಕೇರಳ ಇಲ್ಲವೇ ದಕ್ಷಿಣ ಕನ್ನಡ ಜಿಲ್ಲೆಯ ಭಾಗದಿಂದ ದೈವಾರಾಧಕರು ಆಯಾ ದೇವರ ರೀತಿಯಲ್ಲಿ ವೇಷ ತೊಟ್ಟು, ಮಲಯಾಳಂ ನಲ್ಲಿ ಭಕ್ತರಿಗೆ ಆಶಿರ್ವಾದ ನೀಡಲಾಗುತ್ತಾರೆ. ದೇವಳದಲ್ಲಿನಕಲ್ಲಿನ ದೇವರ ಮೂರ್ತಿಗೆ ಹೂವಿನಿಂದ ಅಲಂಕಾರ ಮಾಡಿ ತಕ್ಕ ಮುಖ್ಯಸ್ಥರು ಎಂದು ಕರೆಸಿಕೊಳ್ಳುವ ಗ್ರಾಮ ಮತ್ತು ದೇವಾಯದ ಆಡಳಿತ ಮಂಡಳಿಯವರು ಬಿಳಿಯ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಟ್ಟು ಪೇಟ ಧರಿಸಿ ದೇವರ ಕಲ್ಲಿನ ಸುತ್ತ ನೃತ್ಯ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾರೆ.

ಕೊಡಗಿನಲ್ಲಿ ಊರ ದೇವರ ಹಬ್ಬ

ಬಳಿಕ ಗ್ರಾಮದ ಭಕ್ತರ ಪ್ರಶ್ನೆಗೆ ಬಂಡಾರ ಪಡೆದು ಸಮಸ್ಯೆಗಳೇನಾದರು ಇದ್ದರೆಪರಿಹಾರ ನೀಡಿ ಆಶಿರ್ವಾದ ನೀಡುತ್ತಾರೆ. ಮುಖ್ಯವಾಗಿ ಆಸ್ತಿ ಪಾಸ್ತಿ ವಿವಾದ, ಪುಟ್ಟ ಮಕ್ಕಳ ಸಮಸ್ಯೆ, ವಿವಾಹ, ಕೆಲಸ, ಹೀಗೆ ಹಲವು ಸಮಸ್ಯಗಳಿಗೆ ಪರಿಹಾರ ಪಡೆಯಲಾಗುತ್ತದೆ. ಹೀಗೆ ಎಲ್ಲಾ ಗ್ರಾಮಸ್ಥರಿಗೆ ಆಶಿರ್ವಾದ ನೀಡಿದ ಬಳಿಕ ಎರಡನೇ ಹಂತದ ಆಚರಣೆ ತಡರಾತ್ರಿ ಆರಂಭವಾಗುತ್ತದೆ. ತಡರಾತ್ರಿ ದೈವಗಳ ಮುಖ್ಯ ದೇವಾಲಯದ ಆವರಣದಲ್ಲಿಹರಕೆ ತೀರಿಸುವ ಪದ್ಧತಿ ನಡೆಯುತ್ತದೆ. ಆದರೆ ಇಲ್ಲಿಗೆ ಮಹಿಳೆಯರು ಆಗಮಿಸುವುದಿಲ್ಲ ಕಾರಣ ಚೌಂಡಿಗೆ ರಕ್ತ ಅರ್ಪಣೆಗೆ ಸಂಪ್ರದಾಯದಂತೆ ಕೋಳಿ ಬಲಿ ನಡೆಯುತ್ತದೆ. ಇತ್ತೀಚೆಗೆ ಪ್ರಾಣಿ ಬಲಿ ನಿಷೇಧ ಆಗಿರುವ ಹಿನ್ನೆಲೆಯಲ್ಲಿ ಶಾಸ್ತ್ರಕ್ಕಾಗಿ ಮಾತ್ರ ನೆರವೇರಿಸಲಾಗುತ್ತದೆ.ರಾತ್ರಿ ಸುಮಾರು 3 ಗಂಟೆವರೆಗೂ ಈ ಆರಾಧನೆ ನಡೆದು ಎರಡನೇ ದಿನ ಅಜಪ್ಪ ತೆರೆ ಅನ್ನಧಾನ ನಡೆಯುತ್ತದೆ.

undefined

ವಿಶೇಷವೆಂದರೆ ಹಬ್ಬದ ದಿನ ನಿಗದಿಪಡಿಸಿದ ನಂತರ ಗ್ರಾಮದಲ್ಲಿ ಮರಗಿಡಗಳು ಕತ್ತರಿಸುವುದು, ಕಾಡಿನ ಎಲೆಗಳನ್ನು ಕೀಳುವುದಕ್ಕೆ ನಿಷೇಧವಿರುತ್ತದೆ. ಅದಲ್ಲದೆ ಹಬ್ಬದ ದಿನ ಯಾರ ಮನೆಯಲ್ಲೂ ಅನ್ನ ತಿನ್ನುವಂತಿಲ್ಲ ಬದಲಾಗಿ ಇಡ್ಲಿ, ಬಟ್ಟಲು ಹಿಟ್ಟು, ಕಾಳು ಮತ್ತು ಆಲುಗೆಡ್ಡೆಯ ಸಾರನ್ನು ಮಾತ್ರ ಸೇವಿಸಬೇಕು. ಅಜ್ಜಪ್ಪ ದೈವ ತೆರೆ ಬಳಿಕ ಗ್ರಾಮ ದೇವರ ಹಬ್ಬ ಅಂತ್ಯಗೊಳ್ಳುತದೆ.

Intro:ಕೊಡಗು:ಗ್ರಾಮೀಣ ಪ್ರದೇಶಗಳಲ್ಲಿ ಇದೀಗ ಹಬ್ಬ, ಉತ್ಸವ ಗಳದ್ದೇ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಕೊಡಗಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಊರು ದೇವರ ಹಬ್ಬವನ್ನು ಆಚರಿಸಲಾಗುತ್ತಿದೆ.ಇವುಗಳಲ್ಲಿ ಪ್ರಮುಖ ವಾಗಿರುವುದು ಧೈವಗಳ ಆರಾಧನೆ, ಈ ಕುರಿತ ವರದಿ ಇಲ್ಲಿದೆ.

Body:ಅಜ್ಜಪ್ಪನ ,ಚೌಂಡಿ, ಸುಬ್ರಹ್ಮಣ್ಯ ,ಇದು ಗ್ರಾಮೀಣ ಪ್ರದೇಶದ ಲ್ಲಿ ಈಶ್ವರ, ಚಾಮುಂಡೇಶ್ವರಿ,ಸುಬ್ರಹ್ಮಣ್ಯ ಸ್ವಾಮಿ ಗೆ ಇಟ್ಟಿರುವ ಸ್ಥಳೀಯ ಹೆಸರು.ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಈ ದೈವರಾಧನೆ ನಡೆಯಿತು. ವಾರ್ಷಿಕ ವಾಗಿ ನಡೆಯುವ ಈ ದೈವರಾಧನೆ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಇಲ್ಲವೇ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಎರಡುದಿನಗಳ ಕಾಲ ನಡೆಯುತ್ತದೆ.ಕೇರಳ ಇಲ್ಲವೇ ದಕ್ಷಿಣ ಕನ್ನಡ ಜಿಲ್ಲೆಯ ಭಾಗದಿಂದ ದೈವಾರಾಧಕರು ಆಯಾ ದೇವರ ರೀತಿಯಲ್ಲಿ ವೇಷ ತೊಟ್ಟು, ಮಲಯಾಳಂ ನಲ್ಲಿ ಭಕ್ತರಿಗೆ ಆಶಿರ್ವಾದ ನೀಡಲಾಗುತ್ತದೆ. ದೇವರ ಕಳದಲ್ಲಿ ಇರುವ ಕಲ್ಲಿನ ದೇವರ ಮೂರ್ತಿಗೆ ಹೂವಿನಿಂದ ಅಲಂಕಾರ ಮಾಡಿ ತಕ್ಕ ಮುಖ್ಯಸ್ಥರು ಎಂದು ಕರೆಸಿಕೊಳ್ಳುವ ಗ್ರಾಮ ಮತ್ತು ದೇವಾಯದ ಆಡಳಿತ ಮಂಡಳಿಯವರು ಬಿಳಿಯ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಟ್ಟು, ಪೇಟ ಧರಿಸಿ ದೇವರ ಕಲ್ಲಿನ ಸುತ್ತ ನೃತ್ಯ ಮಾಡಲಾಗುತ್ತದೆ ಬಳಿಕ ಧೈವಗಳು ಸಿದ್ದರಾಗುತ್ತಿದ್ದಂತೆ ಮೊದಲು ಕಲ್ಲಿನ ದೇರ ಗುಡಿ ಸುತ್ತ ಒಂದು ಭಾರಿ ಪ್ರದಕ್ಷಿಣೆ ಹಾಕಿದ ಬಳಿಕ ಅಂದಾಜು 25ಅಡಿ ಎತ್ರರದ ದೇವರ ಮಡಿ ಬಟ್ಟೆಯಿಂದ ಬಿದಿರಿನ ತೆರೆ ಸಿದ್ದಗೊಳಿಸಿ ದೈವಗಳಿಗೆ ಅಳವಡಿಸಲಾಗುತ್ತದೆ. ಬಳಿಕ ಕೇರಳದ ಚಂಡೆ,ಕೊಡಿನ ವಾದ್ಯ ಮೂಲಕ ಮೈದಾನದಲ್ಲಿ ಮೂರು ಬಾರಿ ಸುತ್ತು ಹಾಕಿ ಗ್ರಾಮದ ಭಕ್ತರ ಪ್ರಶ್ನೆಗೆ ಬಂಡಾರ ಪಡೆದು ಸಮಸ್ಯೆ ಗಳೇನಾದರು ಇದ್ದರೆ ಮಲಯಾಳಂ ನಲ್ಲಿ ಪರಿಹಾರ ನೀಡಿ ಆಶಿರ್ವಾದ ನೀಡಲಾಗುತ್ತದೆ. ಮುಖ್ಯವಾಗಿ ಆಸ್ತಿ ಪಾಸ್ತಿ ವಿವಾದ, ಪುಟ್ಟ ಮಕ್ಕಳ ಸಮಸ್ಯೆ, ವಿವಾಹ, ಕೆಲಸ, ಹೀಗೆ ಹಲವು ಸಮಸ್ಯಗಳಿಗೆ ಪರಿಹಾರ ಪಡೆಯಲಾಗುತ್ತದೆ. ಹೀಗೆ ಎಲ್ಲಾ ಗ್ರಾಮಸ್ಥರಿಗೆ ಆಶಿರ್ವಾದ ನೀಡಿದ.ಬಳಿಕ ಎರಡನೇ ಹಂತದ ಆಚರಣೆ ತಡರಾತ್ರಿ ಆರಂಭವಾಗುತ್ತದೆ.

Conclusion:ತಡರಾತ್ರಿ ದೈವಗಳ ಮುಖ್ಯ ದೇವಾಲಯದ ಆವರಣದಲ್ಲಿ ನಡೆಯುತ್ತದೆ.ಇಲ್ಲಿ ಹರಿಕೆ ತೀರಿಸುವ ಪದ್ಧತಿ ನಡೆಯುತ್ತದೆ.ಆದರೆ ಇಲ್ಲಿಗೆ ಮಹಿಳೆಯರು ಆಗಮಿಸುವುದಿಲ್ಲ ಕಾರಣ ಚೌಂಡಿ ಗೆ ರಕ್ತ ಅರ್ಪಣೆಗೆ ಸಂಪ್ರದಾಯದಂತೆ ಕೋಳಿ ಬಲಿ ನಡೆಯುತ್ತದೆ. ಇತ್ತೀಚೆಗೆ ಪ್ರಾಣಿ ಬಲಿ ನಿಷೇಧ ಆಗಿರುವ ಹಿನ್ನೆಲೆಯಲ್ಲಿ ಶಾಸ್ರಕ್ಕಾಗಿ ಮಾತ್ರ ನೆರವೇರಿಸಲಾಗುತ್ತದೆ ಇಲ್ಲಿ ಸಹಾ ಚೌಂಡಿ ಮೈಮೇಲೆ ಆಹ್ವಾಹನೆ ನಡೆಯುತ್ತದೆ ರಾತ್ರಿ ಸುಮಾರು 3 ಗಂಟೆ ವರೆಗೂ ಈ ಆರಾಧನೆ ನಡೆದು ಎರಡನೇ ದಿನ ಅಜಪ್ಪ ತೆರೆ ಅನ್ನಧಾನ ನಡೆಯುತ್ತದೆ. ವಿಶೇಷವೆಂದರೆ ಹಬ್ಬದ ದಿನ ನಿಗದಿಪಡಿಸಿದ ನಂತರ ಗ್ರಾಮದಲ್ಲಿ ಮರಗಿಡಗಳು ಕತ್ತರಿಸುವುದು, ಕಾಡಿನ ಎಲೆಗಳನ್ನು ಕಳುವುದಕ್ಕೆ ನಿಷೇಧ ವಿರುತ್ತದೆ.ಅದಲ್ಲದೆ ಹಬ್ಬದ ದಿನ ಯಾರ ಮನೆಯಲ್ಲೂ ಅನ್ನ ತಿನ್ನುವಂತಿಲ್ಲ ಬದಲಾಗಿ ಇಡ್ಲಿ, ಬಟ್ಟಲು ಹಿಟ್ಟು, ಕಾಳು ಮತ್ತು ಆಲುಗೆಡ್ಡೆಯ ಸಾರನ್ನು ಮಾತ್ರ ಸೇವಿಸಬೇಕು. ಅಜ್ಜಪ್ಪ ದೈವ ತೆರೆ ಬಳಿಕ ಗ್ರಾಮ ದೇವರ ಹಬ್ಬ ಅಂತ್ಯಗೊಳ್ಳುತದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.