ಕೊಡಗು: ಜಿಲ್ಲಾ ಪಂಚಾಯಿತಿ ಸಂಭಾಂಗಣದಲ್ಲಿ ನಡೆಯುತ್ತಿದ್ದ ನಿರಾಶ್ರಿತರ ಸಭೆಯಲ್ಲಿ ಮಾಧ್ಯಮದವರ ವಿರುದ್ಧ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇವತ್ತು ಸಿಡಿಮಿಡಿಗೊಂಡಿದ್ದಾರೆ.
ಕಳೆದ ಬಾರಿ ಮಳೆಯಿಂದ ಸಂತ್ರಸ್ತರಾದ ನಿರಾಶ್ರಿತರಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೆರೆ ಪರಿಹಾರ ಸಭೆಯಲ್ಲಿ, ವಿಡಿಯೋ ಚಿತ್ರೀಕರಿಸುತ್ತಿದ್ದ ವೇಳೆ ನಿರಾಶ್ರಿತರ ಸಭೆಯಲ್ಲಿ ನಮಗೆ ನಿಮ್ಮ ಅಗತ್ಯವಿಲ್ಲ.
ಹೊರಗೆ ಹೋಗಿ ನಾವು ಕರೆದಾಗ ಮಾತ್ರ ಬನ್ನಿ. ಹೊರಹೋಗಿ ಅಂದ್ರೆ ಕನ್ನಡ ಅರ್ಥ ಆಗಲ್ವಾ..? ನಿಮಗೆ ಕನ್ನಡ ಬರಲ್ವಾ. ನೀವು ಕರೆದಾಗ ಬನ್ನಿ ಸಾಕು ಎಂದು ಮಾಧ್ಯಮದವರ ಮೇಲೆ ದರ್ಪ ತೋರಿದ್ದಾರೆ.