ಕೊಡುಗು : ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊವಿಡ್ ನಿಯಂತ್ರಣ ಸಂಬಂಧ ನಡೆಯುತ್ತಿರುವ ಸಭೆಯಲ್ಲಿ ಕೊಡಗು ಎಡಿಸಿಯನ್ನು ಉಸ್ತುವಾರಿ ಸಚಿವ ಸೋಮಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊಡಗು ಜಿಲ್ಲಾ ಪಂಚಾಯತ್ ಟಾಸ್ಕ್ ಪೋರ್ಸ್ ಸಭೆ ನಡೆಸಿದ ವೇಳೆ ಪ್ರೋಸಿಡಿಂಗ್ ಮಾಡದ ಹಿನ್ನೆಲೆ ಕೊಡಗು ಎಡಿಸಿ ರಾಜು ಮೊಘವೀರ್ರನ್ನು ತರಾಟೆಗೆ ತೆಗೆದುಕೊಂಡರು.
ಎಡಿಸಿಯಾಗಿ ನಿಮ್ಮ ಕೆಲಸ ಏನು ಎಂದು ಪ್ರಶ್ನಿಸಿದಾಗ, ತಡಬಡಾಯಿಸಿದಾಗ ಗರಂ ಆಗಿದ್ದಾರೆ. ಕೆಲಸ ಮಾಡದೇ ಸುಮ್ಮನೆ ಇದ್ದು, ಕತ್ತೆ ಕಾಯಲು ಸಭೆಗೆ ಬರುತ್ತೀರಾ..
ಮುಂದೆ ಸಭೆಯನ್ನು ಲಘುವಾಗಿ ಪರಿಗಣಿಸಿದರೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ಪಾಸಿಟಿವ್ ಇದೆ ಎಂದು ಸಂಕಷ್ಟದಿಂದ ಬಂದವರಿಗೆ ತಕ್ಷಣ ಆದ್ಯತೆ ಮೇಲೆ ಚಿಕಿತ್ಸೆ ಆರಂಭಿಸಬೇಕು.
ಯಾವುದೇ ಕಾರಣಕ್ಕೂ ಸತಾಯಿಸಬಾರದು. ಉತ್ತಮ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಬೇಕು. ಆ ದಿಸೆಯಲ್ಲಿ ವೈದ್ಯಾಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಓದಿ:ನರೇಗಾ ಕಾಮಗಾರಿ ಸ್ಥಳದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು?
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಾಳೆ ವಿರಾಜಪೇಟೆ ತಾಲೂಕು ಆಸ್ಪತ್ರೆ ಹಾಗೂ ಆತ್ರೇಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ನಂತರ ಕುಟ್ಟ ಗ್ರಾಮದಲ್ಲಿ ತೆರೆಯಲಾಗಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಹಾಗೆಯೇ ಚೆಕ್ಪೋಸ್ಟ್ಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಮಧ್ಯಾಹ್ನ ಗೋಣಿಕೊಪ್ಪದ ಲೋಪಮುದ್ರ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಸಂಜೆ ಪಾಲಿಬೆಟ್ಟದಲ್ಲಿ ತೆರೆಯಲಾಗಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.