ಕೊಡಗು: ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ಹಾಗೆ ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿವಿಮಾತು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಡವಿನಕೋಡಿ ಎಂಬ ಗ್ರಾಮದ ರೈತ ಮಹಿಳೆ ಲಕ್ಷ್ಮಿದೇವಮ್ಮ, ತನ್ನ 6.5 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ಆ ಭಾಗದಲ್ಲಿ ನಾನು ಹೋಗಿದ್ದಾಗ, ಮಹಿಳೆ ಮಾಡಿರುವ ಕೃಷಿಯನ್ನು ನೋಡಿ ಸಂತೋಷಪಟ್ಟಿದ್ದೇನೆ ಎಂದರು.
’’ಬಂಗಾರ ಎಲ್ಲ ಜಮೀನಿಗೆ ಹಾಕಿದೀಯಾ.. ಇದೆಲ್ಲ ಹೇಗೆ ಎಂದು ಪ್ರಶ್ನಿಸಿದಾಗ, ಆಕೆ ಸ್ವಾಮಿ ನಾನು ಕಳೆದ 35 ವರ್ಷಗಳಿಂದ ಭೂಮಿ ತಾಯಿಯ ಸೇವೆ ಮಾಡುತ್ತಿದ್ದೇನೆ ಎಂದು ಉತ್ತರಿಸಿದರು. ಆ ಹೆಣ್ಣು ಮಗಳು ಇತರರಿಗೆ ಸ್ಫೂರ್ತಿ ಆಗಿದ್ದಾರೆ’’ಎಂದರು.
ಇದನ್ನೂ ಓದಿ: ಹಿಂಗಾರು ಹಂಗಾಮಿಗೆ ಸಿದ್ಧಗೊಂಡ ಕೃಷಿ ಇಲಾಖೆ: ಪೂರ್ವಭಾವಿ ಸಭೆ ನಡೆಸಿದ ಬಿ.ಸಿ.ಪಾಟೀಲ್