ವಿರಾಜಪೇಟೆ/ಕೊಡಗು: ತರಕಾರಿ ಜೊತೆಗೆ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿರಾಜಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ಬಂಧಿಸಲಾಗಿದೆ.
ಸೋಮಶೇಖರ್ ಎಂಬಾತ ತರಕಾರಿ ಜೊತೆಗೆ ಗೋಮಾಂಸ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಆರೋಪಿ. ಈತ ಕೆ.ಆರ್.ನಗರದಿಂದ ಅಕ್ರಮವಾಗಿ ಗೋಮಾಂಸ ತಂದು, ತರಕಾರಿ ಜೊತೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ಸಿಕ್ಕಿಬಿದ್ದ ತಕ್ಷಣ ಮತ್ತೊಬ್ಬ ಆರೋಪಿ ಬಷೀರ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಶ್ರೀಮಂಗಲ ಪೊಲೀಸರು ವಾಹನ ಸಹಿತ ಮಾಂಸ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.