ETV Bharat / state

ಕರಗ ಪೂಜೆಯೊಂದಿಗೆ ಮಡಿಕೇರಿ ದಸರಾಕ್ಕೆ ಚಾಲನೆ: 16 ರಿಂದ 24 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು - ​ ETV Bharat Karnataka

ಮಡಿಕೇರಿ ನಗರದ ಶಕ್ತಿ ದೇವತೆಗಳ ಕರಗ ಉತ್ಸವದ ಮೂಲಕ ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ ಸಿಕ್ಕಿದೆ.

ಮಡಿಕೇರಿ ದಸರಾಕ್ಕೆ ಚಾಲನೆ
ಮಡಿಕೇರಿ ದಸರಾಕ್ಕೆ ಚಾಲನೆ
author img

By ETV Bharat Karnataka Team

Published : Oct 16, 2023, 5:53 PM IST

ಮಂಜಿನ ನಗರಿ ಮಡಿಕೇರಿ ದಸರಾಕ್ಕೆ ಚಾಲನೆ

ಮಡಿಕೇರಿ (ಕೊಡಗು) : ನಾಡಹಬ್ಬ ದಸರಾ ಪೂರ್ವಭಾವಿಯಾಗಿ ಸಂಪ್ರದಾಯದಂತೆ ನೂರಾರು ವರ್ಷಗಳ ಇತಿಹಾಸ ಹೊಂದಿರೋ ಮಂಜಿನ ನಗರಿ ಮಡಿಕೇರಿ ದಸರಾಕ್ಕೆ ಚಾಲನೆ ಸಿಕ್ಕಿದೆ. ಭಾನುವಾರದ ಗೋಧೂಳಿ ಶುಭ ಸಮಯದಲ್ಲಿ ನಗರದ ಪಂಪಿನ ಕೆರೆ ಬಳಿಯಲ್ಲಿ ನಾಲ್ಕೂ ಕರಗಗಳಿಗೆ ಶಾಸಕ ಮಂಥರ್ ಗೌಡ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ್ದರು.

ಮೈಸೂರು ದಸರಾ ಜೊತೆಗೆ ಮಡಿಕೇರಿ ದಸರಾ ಕೂಡ ಅಷ್ಟೇ ಜನಪ್ರಿಯಗೊಂಡಿದೆ. ಮಡಿಕೇರಿ ನಗರ ಪ್ರದಕ್ಷಿಣೆ ಆರಂಭಿಸಿರುವ ಶಕ್ತಿದೇವತೆಗಳು ನವರಾತ್ರಿವರೆಗೂ ಮಡಿಕೇರಿ ನಗರದಲ್ಲಿ ಪ್ರದಕ್ಷಿಣೆ ಹಾಕಲಿವೆ. ಗಣ್ಯಾತಿಗಣ್ಯರು ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಶಕ್ತಿದೇವತೆಗಳಿಗೆ ಜೈಕಾರ ಮೊಳಗಿದ್ದು, ದುರ್ಗಾರಾಧನೆಯ ನವರಾತ್ರಿ ಉತ್ಸವಕ್ಕೆ ಮುನ್ನಾದಿನ ಶಕ್ರಿದೇವತೆಗಳು ನಗರ ಪ್ರದಕ್ಷಿಣೆಗೆ ಸಾಂಪ್ರದಾಯಿಕ ಚಾಲನೆ ಸಿಕ್ಕಂತಾಗಿದೆ.

ಇದನ್ನೂ ಓದಿ : ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿ ಸಂಭ್ರಮ: ರತ್ನಖಚಿತ ಸಿಂಹಾಸನದಲ್ಲಿ ಯದುವೀರ್ ಖಾಸಗಿ ದರ್ಬಾರ್

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸ್​ರಾಜ್, ಶಾಸಕರಾದ ಡಾ. ಮಂಥರ್ ಗೌಡ, ಎ.ಎಸ್ ಪೊನ್ನಣ್ಣ, ಮಾಜಿ ಶಾಸಕರಾದ ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಡಿಸಿ ವೆಂಕಟರಾಜ್, ಎಸ್ಪಿ ರಾಮರಾಜನ್ ಸೇರಿದಂತೆ ಗಣ್ಯರು ಪೂಜೆ ಸಲ್ಲಿಸಿ, ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಉತ್ಸವದಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಹಿರಿಯ ವಕೀಲ ಚಂದ್ರಮೌಳಿ, ಮುಖಂಡರಾದ ಟಿ ಪಿ ರಮೇಶ್, ದಸರಾ ಸಮಿತಿ, ದಶಮಂಟಪ ಸಮಿತಿ ದೇರಿದಂತೆ ಹೆಚ್ಚಿನ ಜನರು ಪಾಲ್ಗೊಂಡಿದ್ದರು.

ಕರಗ ಹೊತ್ತ ವ್ರತಧಾರಿಗಳಿಗೆ ಸನ್ಮಾನ : ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗ ಹೊತ್ತ ಚಾಮಿ, ಕಂಚಿ ಕಾಮಾಕ್ಷಿಯಮ್ಮ ದೇವಿಯ ಕರಗ ಹೊತ್ತ ಕಾರ್ತಿಕ್, ಕೋಟೆ ಮಾರಿಯಮ್ಮ ಕರಗ ಹೊತ್ತ ಅನೀಸ್ ಕುಮಾರ್, ದಂಡಿನ ಮಾರಿಯಮ್ಮನ ಕರಗ ಹೊತ್ತ ಉಮೇಶ್ ಅವರಿಗೆ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಸನ್ಮಾನಿಸುವ ಮೂಲಕ ಗೌರವಿಸಲಾಯಿತು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಕರಗಗಳ ಪ್ರದಕ್ಷಿಣೆ ಆರಂಭವಾಯಿತು. ಕರಗಗಳನ್ನು ಹೊತ್ತ ವ್ರತಧಾರಿಗಳು, ವಾದ್ಯಗೋಷ್ಠಿಯ ತಾಳಕ್ಕೆ ನರ್ತಿಸುತ್ತಾ ಬೇಡಿ ಬಂದ ಭಕ್ತಾದಿಗಳನ್ನು ಆಶೀರ್ವಾದಿಸಿದರು.

ಇದೇ ವೇಳೆ ಮಾತನಾಡಿದ ಶಾಸಕ ಡಾ. ಮಂತರ್​ ಗೌಡ ಅವರು, ಕಳೆದ 20 ದಿನಗಳಿಂದ ನಾಲ್ಕು ದೇವಸ್ಥಾನಗಳು ಈ ಕಾರ್ಯಕ್ರಮಕ್ಕೆ ಅದ್ಭುತವಾಗಿ ಸಿದ್ದತೆ ಮಾಡಿಕೊಂಡಿದ್ದವು. ಇದೀಗ ಒಟ್ಟು ನಾಲ್ಕು ಶಕ್ತಿ ದೇವತೆಗಳ ಕರಗಗಳು ಹೊರಡುವ ಮೂಲಕ ಮಡಿಖೇರಿ ದಸರಾಕ್ಕೆ ಚಾಲನೆ ದೊರೆತಿದೆ. ಈ ನಿಟ್ಟಿ 16 ರಿಂದ 24 ರವರೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಂತಿಯಿಂದ ತಾಳ್ಮೆಯಿಂದ ನಡೆಯಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ : ಮಂಗಳೂರು ದಸರಾ: ಶ್ರೀಕ್ಷೇತ್ರ‌ ಕುದ್ರೋಳಿಯಲ್ಲಿ ನವದುರ್ಗೆಯರ ಪ್ರತಿಷ್ಠಾಪನೆ- ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.