ETV Bharat / state

ಎಂ‌ಎಲ್‌ಸಿ ರವಿಕುಮಾರ್ ಒಬ್ಬ ಮುಠ್ಠಾಳ.. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಿಡಿ

ನಟಿಯರ ರಕ್ಷಣೆಗೆ ರಾಜಕೀಯ ಒತ್ತಡವಿದೆ ಅಂತಾ ಸಚಿವ ಸಿ ಟಿ ರವಿ ಹೇಳುತ್ತಾರೆ. ನಿಮ್ಮ ಮೇಲೆ ಯಾರ ಒತ್ತಡವಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಯಾರು ನಿಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನುವುದನ್ನು ಹೇಳಬೇಕು. ವಾಸ್ತವ ರಾಜ್ಯದ ಜನತೆಗೆ ಗೊತ್ತಾಗಲಿ. ಅದನ್ನು ಬಿಟ್ಟು ಕತ್ತಲಲ್ಲಿ ಗುಂಡು ಹಾರಿಸಬಾರದು..

KPCC President Salim Ahmed satement about mlc ravikumar
ಎಂ‌ಎಲ್‌ಸಿ ರವಿಕುಮಾರ್ ಒಬ್ಬ ಮುಠ್ಠಾಳ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿರುಗೇಟು
author img

By

Published : Sep 11, 2020, 9:25 PM IST

ಕೊಡಗು : ರವಿಕುಮಾರ್ ಏನು ಪೊಲೀಸ್​ ಅಧಿಕಾರಿಯೇ, ಅವನೊಬ್ಬ ಮುಠ್ಠಾಳ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಿಡಿ ಕಾರಿದ್ದಾರೆ. ಇನ್ನೆರಡು ದಿನಗಳಲ್ಲಿ ಶಾಸಕ ಜಮೀರ್ ಅಹ್ಮದ್​ ಅರೆಸ್ಟ್ ಆಗುತ್ತಾರೆ ಎಂಬ ಎಂಎಲ್‌ಸಿ ರವಿಕುಮಾರ್ ಹೇಳಿಕೆಗೆ ಸಲೀಂ ಅಹ್ಮದ್‌ ಮೂಲಕ ತಿರುಗೇಟು ನೀಡಿದ್ದಾರೆ‌.‌

ಎಂ‌ಎಲ್‌ಸಿ ರವಿಕುಮಾರ್ ಒಬ್ಬ ಮುಠ್ಠಾಳ.. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿರುಗೇಟು

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ‌‌ ಮಾತನಾಡಿದ ಅವರು, ರವಿಕುಮಾರ್ ಒಬ್ಬ ಎಂ‌ಎಲ್‌ಸಿ. ಅವರು ಬಾಯಿಗೆ ಬಂದಂತೆ ಮಾತ ನಾಡುತ್ತಾರೆ. ಅವರೇನು ಪೊಲೀಸ್ ಕಮಿಷನರ್​ ಅಥವಾ ಮಂತ್ರಿನಾ?. ಅವನ ಹೇಳಿಕೆಗಳನ್ನು ಪರಿಗಣಿಸಲು ಆಗುತ್ತದೆಯೇ?. ಈಗಾಗಲೇ ಡ್ರಗ್ಸ್ ಬಗ್ಗೆ ಉನ್ನತ ಮಟ್ಟದ ಸಂಸ್ಥೆಗಳು ತನಿಖೆ ನಡೆಸುತ್ತಿವೆ.

ಒಂದು ವೇಳೆ ತಪ್ಪು ಮಾಡಿದ್ರೆ ವಿಚಾರಣೆ ನಡೆಸಲು ಕಾನೂನಿದೆ. ವಿಚಾರಣೆ ಮಾಡಿ ವರದಿ ಕೇಳುತ್ತದೆ. ಬಿಜೆಪಿಯ ಎಂ‌ಎಲ್‌ಸಿಯೊಬ್ಬರು ಹೇಗೆ ಇಂತಹ ಹೇಳಿಕೆಗಳನ್ನು ಕೊಡುತ್ತಾರೆ. ಅಧಿಕಾರ ನಿಮ್ಮ ಬಳಿಯಿದೆ. ಇಂಟಲಿಜೆನ್ಸ್ ಹೊಂದಿದ್ದೀರಾ. ಪ್ರಾಮಾಣಿಕವಾಗಿ ತನಿಖೆ ನಡೆಸಿ.‌ ಅದನ್ನು ಬಿಟ್ಟು ಅವರಿವರ ಹೆಸರನ್ನು ವಿನಾಃ ಕಾರಣ ತರಬಾರದು ಎಂದರು.

ನಟಿಯರ ರಕ್ಷಣೆಗೆ ರಾಜಕೀಯ ಒತ್ತಡವಿದೆ ಅಂತಾ ಸಚಿವ ಸಿ ಟಿ ರವಿ ಹೇಳುತ್ತಾರೆ. ನಿಮ್ಮ ಮೇಲೆ ಯಾರ ಒತ್ತಡವಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಯಾರು ನಿಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನುವುದನ್ನು ಹೇಳಬೇಕು. ವಾಸ್ತವ ರಾಜ್ಯದ ಜನತೆಗೆ ಗೊತ್ತಾಗಲಿ. ಅದನ್ನು ಬಿಟ್ಟು ಕತ್ತಲಲ್ಲಿ ಗುಂಡು ಹಾರಿಸಬಾರದು. ಮಾದಕ ವಸ್ತುಗಳ ಬಳಕೆಯಿಂದ ಯುವ ಜನತೆ ಹಾಳಾಗುತ್ತಿದ್ದಾರೆ. ಇದು ರಾಜಕೀಯ ಮಾಡುವಂತಹ ವಿಷಯವಲ್ಲ. ಯಾರೇ ತಪ್ಪು ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.