ಕೊಡಗು: ಇಡಿ ಎನ್ನುವುದು ಸರ್ಕಾರೇತರ ಸಂಸ್ಥೆ. ಹಣ ಜಾಸ್ತಿ ಇದ್ರೆ ಬಿಜೆಪಿಯವರ ಮನೆ ಮೇಲೂ ದಾಳಿ ಮಾಡುತ್ತೆ. ಕಾಂಗ್ರೆಸ್ ಮೇಲೂ ದಾಳಿ ಮಾಡುತ್ತೆ. ಅದು ಯಾವುದೇ ಪಕ್ಷವನ್ನು ಹುಡುಕುವುದಿಲ್ಲ. ಅಕ್ರಮ ಹಣವನ್ನ ಹುಡುಕುತ್ತೆ ಎಂದು ಸಿದ್ದರಾಮಯ್ಯ ಅವರಿಗೆ ಕೋಟಾ ಶ್ರೀನಿವಾಸ ಪೂಜಾರಿ ಟಾಂಗ್ ನೀಡಿದ್ದಾರೆ.
ಕೊಡಗು ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಜಿಲ್ಲೆಗೆ ಭೇಟಿ ನೀಡಿ, ಕೋವಿಡ್ ನಿಯಂತ್ರಣ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ನಂತರ ಜಮೀರ್ ಅಹಮದ್ ಮನೆ ಮೇಲೆ ಇಡಿ ದಾಳಿಯ ಕುರಿತು ಮಾತನಾಡಿದರು. ಹಣ ಕಳೆದುಕೊಂಡಾಗ ಇಡಿಯನ್ನ ದೂರುವುದು ಸಾಮಾನ್ಯ. ಅದೇ ರೀತಿ, ಇದೀಗ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಇಡಿ ತನ್ನಷ್ಟಕ್ಕೆ ಕೆಲಸ ಮಾಡುತ್ತೆ. ಅದಕ್ಕೂ ಸರ್ಕಾರಕ್ಕೂ ಏನೂ ಸಂಬಂಧ ಇಲ್ಲ ಎಂದರು.
ಕಾಂಗ್ರೆಸ್ನ ಬಹುತೇಕ ನಾಯಕರು ಇದು ರಾಜಕೀಯ ಪ್ರೇರಿತ ಎನ್ನುತ್ತಾರೆ. ರಾಜಕೀಯಕ್ಕೂ ದಾಳಿಗೂ ಸಂಬಂಧವಿಲ್ಲ. ಕಾಂಗ್ರೆಸ್ಸಿಗರಿಗೆ ಬೇರೆ ದಾರಿ ಇಲ್ಲ. ರಾಜಕೀಯ ಅಂತ ಹೇಳ್ತಾರೆ. ತಪ್ಪನ್ನು ಸಮರ್ಥಿಸಿಕೊಳ್ಳೋದು ಯಾರಿಗೂ ಸರಿಯಲ್ಲ. ಇಡಿ ದಾಳಿಯಾದವರು ತಮ್ಮ ಆಕ್ರಮಣವನ್ನ ಕಡಿಮೆ ಮಾಡೋದು ಒಳಿತು ಎಂದರು.
ಓದಿ: ಮಾಜಿ ಸಿಎಂ BSY ವಿರುದ್ಧ ಭ್ರಷ್ಟಾಚಾರ ಆರೋಪ: ಅರ್ಜಿ ವಜಾಗೊಳಿಸಿದ ಹೈಕೋರ್ಟ್