ಮಡಿಕೇರಿ(ಕೊಡಗು): ಜಿಲ್ಲಾಡಳಿತ ಒಂದು ತಿಂಗಳಲ್ಲಿ ವಿದೇಶಗಳಿಗೆ ಹೋಗಿ ಬಂದಿರುವ 65 ಜನರನ್ನು ಪತ್ತೆ ಹಚ್ಚಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ.
ಮಡಿಕೇರಿಯಲ್ಲಿ 32, ವಿರಾಜಪೇಟೆ ತಾಲೂಕಿನಲ್ಲಿ 23 ಹಾಗೆಯೇ ಸೋಮವಾರಪೇಟೆ ತಾಲೂಕಿನಲ್ಲಿ 11 ಸೇರಿದಂತೆ ತಿಂಗಳ ಹಿಂದಷ್ಟೇ ವಿವಿಧ ದೇಶಗಳಿಂದ ಬಂದಿರುವ ಒಟ್ಟು 65 ಜನರನ್ನು ಗುರುತಿಸಿದೆ. ಇವರಲ್ಲಿ 64 ಜನರ ಮೇಲೆ ಮನೆಯಲ್ಲೇ ನಿಗಾ ಇರಿಸಲಾಗಿದೆ.
ಒಬ್ಬರಿಗೆ ಮಾತ್ರ ಕೊರೊನಾ ವೈರಸ್ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದ್ದು, ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರೆಸಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಿದೆ. ಅಲ್ಲದೆ 64 ಜನರಿಗೆ ಮನೆಯಿಂದ ಹೊರ ಹೋಗದಂತೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಲಹೆ ನೀಡಿದ್ದಾರೆ.