ETV Bharat / state

ಅಸ್ಸೋಂ ವಲಸಿಗರ ಕೊರೊನಾ ಪರೀಕ್ಷೆ ಮತ್ತು ಕ್ವಾರಂಟೈನ್ ಮಾಡುವಂತೆ ಕರವೇ ಮನವಿ

ಒಂದು ವೇಳೆ ಅವರಿಗೆ ಸೋಂಕು ತಗುಲಿದ್ದರೇ ಸಾರ್ವಜನಿಕರಿಗೂ ಹರಡುವ ಸಾಧ್ಯತೆ ಇದೆ. ಕೊಡಗು ಜಿಲ್ಲಾಧಿಕಾರಿ ಆದೇಶದಂತೆ ಹೊರ ಜಿಲ್ಲೆಯಿಂದ ಅಥವಾ ಹೊರ ರಾಜ್ಯದಿಂದ ಬಂದಂತವರಿಗೆ 14 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕೆಂಬ ನಿಯಮ ಇದೆ..

kodagu-karave-request-to-do-health-checkup-of-assamese
ಕರವೇ ಮನವಿ
author img

By

Published : May 14, 2021, 8:42 PM IST

ಕೊಡಗು : ಹೊರ ರಾಜ್ಯದಿಂದ ಬಂದ ಜನರಿಂದ ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡಿದೆ ಎಂಬ ಆಪಾದನೆ ಕೇಳಿ ಬಂದಿದ್ದು, ಈಗ ಅಸ್ಸೋಂನಿಂದ ಜನರು ಕೊಡಗಿಗೆ ಬಂದಿದ್ದಾರೆ. ಅವರನ್ನು ತಪಾಸಣೆಗೆ ಒಳಪಡಿಸುವಂತೆ ಕರವೇ ಕಾರ್ಯಕರ್ತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೀಟಿಕಟ್ಟೆಗೆ ಹಾಗೂ ಇತರೆ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಅಸ್ಸೋಂ ಕಾರ್ಮಿಕರು ಚುನಾವಣೆ ನಿಮಿತ್ತ ಊರಿಗೆ ಹೋಗಿದ್ದು, ಸದ್ಯ ಮರಳಿ ಬಂದಿದ್ದಾರೆ.

ಅದಕ್ಕಾಗಿ ಕರವೇ ಕಾರ್ಯಕರ್ತರು ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ ಕ್ಯಾರಂಟೈನ್​ ಮಾಡುವಂತೆ ಮನವಿ ಮಾಡಿದ್ದಾರೆ.

ಅಸ್ಸೋಂ ವಲಸಿಗರ ಕೊರೊನಾ ಪರೀಕ್ಷೆ ಮತ್ತು ಕ್ವಾರಂಟೈನ್ ಮಾಡುವಂತೆ ಕರವೇ ಮನವಿ

ಈಗಾಗಲೇ ವಲಸೆ ಕಾರ್ಮಿಕರು ಊರಿನ ಒಳಗೆ ಪ್ರವೇಶ ಮಾಡಿದ್ದಾರೆ. ಒಂದು ವೇಳೆ ಅವರಿಗೆ ಸೋಂಕು ತಗುಲಿದ್ದರೇ ಸಾರ್ವಜನಿಕರಿಗೂ ಹರಡುವ ಸಾಧ್ಯತೆ ಇದೆ. ಕೊಡಗು ಜಿಲ್ಲಾಧಿಕಾರಿ ಆದೇಶದಂತೆ ಹೊರ ಜಿಲ್ಲೆಯಿಂದ ಅಥವಾ ಹೊರ ರಾಜ್ಯದಿಂದ ಬಂದಂತವರಿಗೆ 14 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕೆಂಬ ನಿಯಮ ಇದೆ.

ಹಾಗಾಗಿ, ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗೌಡಳ್ಳಿ ಗ್ರಾಮ ಪಂಚಾಯಿತಿಯವರು ಹಾಗೂ ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಅಸ್ಸೋಂ ಕಾರ್ಮಿಕರ ಪರೀಕ್ಷೆ ನಡೆಸಬೇಕು ಮತ್ತು ನಿಗಾದಲ್ಲಿರಿಸಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.